ಶಾರ್ಟ್ ಸರ್ಕೀಟ್’ನಿಂದ ಸುಟ್ಟು ಕರಕಲಾದ ಹೊಟೇಲ್…!!! ಬೆಳಗಾವಿಯ ಗೋವಾವೇಸ್’ನಲ್ಲಿ ಶಾರ್ಟ್ ಸರ್ಕೀಟ್’ನಿಂದ “ಹೋಟೆಲ್ ಒಂದು ಅಗ್ನಿಗಾಹುತಿಯಾಗಿ ಲಕ್ಷಾಂತರ ರೂಪಾಯಿಗಳ ನಷ್ಟವಾಗಿದೆ. ಬೆಳಗಾವಿಯ ಗೋವಾವೇಸ್ನಲ್ಲಿ ಇರುವ “ಹೋಟೆಲ್ ಅನುಗ್ರಹ”ನಲ್ಲಿ ಕಳೆದ ರಾತ್ರಿ 2 ಗಂಟೆ ಸುಮಾರಿಗೆ ಶಾರ್ಟ್ ಸರ್ಕಿಟ್ನಿಂದಾಗಿ ಬೆಂಕಿ ಹೊತ್ತಿಕೊಂಡಿದೆ. ಹೋಟೆಲ್ನ ಫರ್ನಿಚರ್ ಸುಡುತ್ತಿರುವ ಶಬ್ದದಿಂದ ಎಚ್ಚರಗೊಂಡ ಸ್ಥಳೀಯ ನಿವಾಸಿಗಳು ತಕ್ಷಣ ಹೋಟೆಲ್ ಮಾಲೀಕರಾದ ಸುಧಾಕರ್ ಪುಜಾರಿ ಅವರಿಗೆ ಮಾಹಿತಿ ನೀಡಿದರು. ಅಲ್ಲದೇ, ಅಗ್ನಿಶಾಮಕ ದಳವನ್ನು ಸಂಪರ್ಕಿಸಿದರು. ಅಗ್ನಿಶಾಮಕ ದಳಕ್ಕೆ …
Read More »ಚೈನ್ನೈನ 16ನೇ ಐ.ಎ.ಪಿ.ಎಚ್.ಡಿ ಸ್ನಾತಕೋತ್ತರ ಸಮಾವೇಶದಲ್ಲಿ ಬೆಳಗಾವಿಯ ಕೆಎಲ್ಇ ವಿಕೆ ದಂತ ವಿಜ್ಞಾನ ವಿಭಾಗದ ಉತ್ತಮ ಪ್ರದರ್ಶನ
ಚೈನ್ನೈನ 16ನೇ ಐ.ಎ.ಪಿ.ಎಚ್.ಡಿ ಸ್ನಾತಕೋತ್ತರ ಸಮಾವೇಶದಲ್ಲಿ ಬೆಳಗಾವಿಯ ಕೆಎಲ್ಇ ವಿಕೆ ದಂತ ವಿಜ್ಞಾನ ವಿಭಾಗದ ಉತ್ತಮ ಪ್ರದರ್ಶನ ಇತ್ತೀಚೆಗಷ್ಟೇ ಚೆನ್ನೈನಲ್ಲಿ ನಡೆದ 16ನೇ ಭಾರತೀಯ ಸಾರ್ವಜನಿಕ ಆರೋಗ್ಯ ದಂತವೈದ್ಯ ಶಾಸ್ತ್ರ (IAPHD) ಸ್ನಾತಕೋತ್ತರ ಸಮಾವೇಶದಲ್ಲಿ ಬೆಳಗಾವಿಯ ಕೆಎಲ್ಇ ವಿಕೆ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್ನ ಸಾರ್ವಜನಿಕ ಆರೋಗ್ಯ ದಂತವೈದ್ಯ ಶಾಸ್ತ್ರ ವಿಭಾಗವು ಅತ್ಯುತ್ತಮ ಸಾಧನೆಯೊಂದಿಗೆ ರಾಜ್ಯದ ಗೌರವವನ್ನು ಹೆಚ್ಚಿಸಿದೆ. ಈ ಸಮಾವೇಶದಲ್ಲಿ ಡಾ. ಅಪೂರ್ವ ಮತ್ತು ಡಾ. ಹೃದಯಾ ಅವರು …
Read More »ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ
ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ ಚಾತುರ್ಮಾಸದ ಹಿನ್ನೆಲೆ ಬೆಳಗಾವಿ ನಗರದಲ್ಲಿ ಜೈನ ಮುನಿಗಳ ಶಿಷ್ಯೆಯರ ಭವ್ಯ ಪುರ ಪ್ರವೇಶೋತ್ಸವ ನಡೆಯಿತು. ಸುಮಾರು 1500 ಕಿಲೋ ಮೀಟರ್ ಪಾದಯಾತ್ರೆ ಮಾಡುತ್ತ ಇಂದು ಬೆಳಗಾವಿಗೆ ಪ. ಪೂ ಸುಮನ್ ಸೂರ್ಯೋದಯಾಶ್ರೀಜಿಯ ಶಿಷ್ಯೆ, ಪ. ಪೂ ತಪಸ್ವಿ ರತ್ನಾರತ್ನ ಜ್ಯೋತಿಶ್ರೀಜಿ ಶಿಷ್ಯೆ, ವರ್ಧಮಾನ ತಪಾರಾಧಿಕಾ ಪ. ಪೂ ಅಕ್ಷಯ ಜ್ಯೋತಿಶ್ರೀಜಿ ಅವರ ಶಿಷ್ಯೆ, …
Read More »ಅನಮೋಡ ಘಾಟ್ ರಸ್ತೆಯಲ್ಲಿ ಭೂಕುಸಿತ!!!
ಅನಮೋಡ ಘಾಟ್ ರಸ್ತೆಯಲ್ಲಿ ಭೂಕುಸಿತ!!! ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಖಾನಾಪೂರ ತಾಲೂಕಿನ ಅನಮೋಡ್ ಘಾಟ್ ರಸ್ತೆಯಲ್ಲಿ ಭೂಕುಸಿತ ಸಂಭವಿಸಿದೆ. ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಖಾನಾಪೂರ ತಾಲೂಕಿನ ಅನಮೋಡ್ ಘಾಟ್ ರಸ್ತೆಯಲ್ಲಿ ಭೂಕುಸಿತ ಸಂಭವಿಸಿದೆ. ಮುಂಜಾಗೃತಾ ಕ್ರಮವಾಗಿ ತಾಲೂಕಾಡಳಿತದಿಂದ ಬ್ಯಾರಿಕೇಡ್ಸ್’ಗಳನ್ನು ಹಾಕಿ ಜನರಿಗೆ ಸೂಚನೆ ನೀಡಲಾಗಿದೆ. ಅನಮೋಡ ಘಾಟ ಬಳಸಿ ಗೋವಾಗೆ ಪ್ರಯಾಣಿಸುವ ಜನರಿಗೆ ಅನಾಹುತ ಎದುರಾಗಿದ್ದು, ಜಾಗೃತೆಯಿಂದ ಸಂಚರಿಸಲು ಮನವಿ ಮಾಡಲಾಗಿದೆ.
Read More »ಹುಕ್ಕೇರಿ ನಗರ ಅಭಿವೃದ್ಧಿಗೆ ಶ್ರಮಿಸಲಾಗುವದು – ಸಚಿವ ಸತೀಶ ಜಾರಕಿಹೋಳಿ
ಹುಕ್ಕೇರಿ : ಹುಕ್ಕೇರಿ ನಗರ ಅಭಿವೃದ್ಧಿಗೆ ಶ್ರಮಿಸಲಾಗುವದು – ಸಚಿವ ಸತೀಶ ಜಾರಕಿಹೋಳಿ ಹುಕ್ಕೇರಿ ನಗರ ಅಭಿವೃದ್ಧಿಗೆ ಉತ್ತೆಜನ ನೀಡಿ ಕಾರ್ಯ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೋಳಿ ಹೇಳಿದರು. ಶನಿವಾರ ಹುಕ್ಕೇರಿ ಪುರಸಭೆ ಸಭಾ ಭವನದಲ್ಲಿ ಜರುಗಿದ ಪ್ರಗತಿ ಪರಶೀಲನೆ ಸಭೆಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿ ನಗರದ ಅನಧಿಕೃತ ಬಡಾವಣೆಗಳ ಕುರಿತು ಚರ್ಚಿಸಿದರು, ಪ್ರಮುಖವಾಗಿ ಸರ್ವೆ ನಂಬರ 116 …
Read More »ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..!
ಸವದತ್ತಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ಸವದತ್ತಿ ತಾಲ್ಲೂಕಿನ ದುಂಡನಕೊಪ್ಪ ಗ್ರಾಮದ ಶ್ರೀ ಮಾರುತೇಶ್ವರ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು. ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಮಾರ್ಗದರ್ಶಕರಾದ ರಾದ ಸಂತೋಷ ಜಾರಕಿಹೊಳಿ ಅವರ …
Read More »ಇನ್ನೂ ಎರಡು ದಿನ ಮಹಾಮಳೆ
ಬೆಂಗಳೂರು: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ಇನ್ನೂ ಎರಡು ದಿನಗಳ ಕಾಲ (ಜು.7) ಜೋರು ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಸೇರಿದಂತೆ ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ ಇದೆ. ರಾಜ್ಯಾದ್ಯಂತ ಎರಡು ದಿನಗಳ ಕಾಲ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿಯಲ್ಲಿ ಗಂಟೆಗೆ 30 ರಿಂದ 40 …
Read More »ಚಿನ್ನ ಕಳ್ಳಸಾಗಾಣಿಕೆ ಪ್ರಕರಣ: ರನ್ಯಾ ರಾವ್ಗೆ ಸೇರಿದ ₹34.12 ಕೋಟಿ ಮೌಲ್ಯದ ಆಸ್ತಿ ಇಡಿ ವಶ
ಬೆಂಗಳೂರು : ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರನ್ಯಾ ರಾವ್ ಅವರಿಗೆ ಸೇರಿದ 34.12 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ (ED) ಶುಕ್ರವಾರ ಮುಟ್ಟುಗೋಲು ಹಾಕಿಕೊಂಡಿದೆ. ಚಿನ್ನ ಕಳ್ಳಸಾಗಣೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರನ್ಯಾ ರಾವ್ಗೆ ಸೇರಿದ ಬೆಂಗಳೂರು ಮತ್ತು ತುಮಕೂರು ಜಿಲ್ಲೆಗಳಲ್ಲಿರುವ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ ಎಂದು ತನಿಖಾ ಸಂಸ್ಥೆಯು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. ಬೆಂಗಳೂರಿನ ವಿಕ್ಟೋರಿಯಾ ಲೇಔಟ್ನಲ್ಲಿರುವ ಮನೆ, ಅರ್ಕಾವತಿ …
Read More »ರೈತರು ಉತ್ಪಾದಿಸುವ ಆಹಾರ ಧಾನ್ಯಗಳ ಖರೀದಿ ಜವಾಬ್ದಾರಿ ಎಫ್ಸಿಐಗೆ ವಹಿಸಿ: ಈರಣ್ಣ ಕಡಾಡಿ
ಬೆಂಗಳೂರು: ರೈತರು ಉತ್ಪಾದಿಸುವ ಆಹಾರ ಧಾನ್ಯಗಳನ್ನು ಖರೀದಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಇದರ ಜವಾಬ್ದಾರಿಯನ್ನು ಭಾರತೀಯ ಆಹಾರ ನಿಗಮ (ಎಫ್ ಸಿಐ)ಗೆ ವಹಿಸುವುದು ಸೂಕ್ತ ಎಂದು ಭಾರತೀಯ ಆಹಾರ ನಿಗಮ (ಎಫ್ಸಿಐ) ರಾಜ್ಯ ಘಟಕದ ಅಧ್ಯಕ್ಷ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದ್ದಾರೆ. ಪ್ರಸಕ್ತ ವರ್ಷದಲ್ಲಿ ಭಾರತೀಯ ಆಹಾರ ನಿಗಮವು ಕರ್ನಾಟಕದಲ್ಲಿ ನಿರ್ವಹಿಸಿರುವ ಕಾರ್ಯಗಳ ಬಗ್ಗೆ ಕಾಡುಗೋಡಿಯಲ್ಲಿರುವ ಎಫ್ಸಿಐನಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಇಂದು ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಡಾಡಿ …
Read More »ಲಿಂಗಾಯಿತ ಧರ್ಮದಲ್ಲಿರುವ ಜಂಗಮರು ಬೇಡ, ಬುಡ್ಗ ಜಂಗಮರಲ್ಲ: ಹೈಕೋರ್ಟ್ ಸ್ಪಷ್ಟನೆ
ಬೆಂಗಳೂರು: ವೀರಶೈವ ಲಿಂಗಾಯಿತ ಧರ್ಮದಲ್ಲಿರುವ ಜಂಗಮರು ‘ಬೇಡ’ ಅಥವಾ ‘ಬುಡ್ಗ’ ಜಂಗಮರಲ್ಲ. ಲಿಂಗಾಯಿತರಲ್ಲಿನ ಜಂಗಮರು ತಾವು ಬೇಡ ಅಥವಾ ಬುಡ್ಗ ಜಂಗಮರೆಂದು ತಿಳಿಸಿ, ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆದು ಮೀಸಲು ದುರ್ಬಳಕೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ತಿಳಿಸಿದೆ. ಕಲಬುರಗಿ ಪೀಠದಲ್ಲಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಹಾಗೂ ನ್ಯಾಯಮೂರ್ತಿ ರಾಮಚಂದ್ರ ಡಿ.ಹುದ್ದಾರ್ ಅವರಿದ್ದ ಕಲಬುರಗಿಯ ನ್ಯಾಯಪೀಠ ಈ ಆದೇಶ ಮಾಡಿದೆ. ಬುಡ್ಗ ಅಥವಾ …
Read More »