ಇಂದಿನ ರಾಶಿ ಭವಿಷ್ಯ ಮತ್ತು ಪಂಚಾಂಗ ಹೀಗಿದೆ… ಇಂದಿನ ಪಂಚಾಂಗ: ದಿನಾಂಕ : 24-09-2023, ಭಾನುವಾರ ಸಂವತ್ಸರ: ಶುಭಕೃತ್ ಆಯನ : ದಕ್ಷಿಣಾಯಣ ಋತು : ಶರದ್ ಮಾಸ : ಭಾದ್ರಪದ ಪಕ್ಷ : ಶುಕ್ಲ ತಿಥಿ : ನವಮಿ ನಕ್ಷತ್ರ : ಪೂರ್ವಾಷಾಢ ಸೂರ್ಯೋದಯ: ಮುಂಜಾನೆ 06:07 ಗಂಟೆಗೆ ಅಮೃತಕಾಲ: ಮಧ್ಯಾಹ್ನ 03:11ರಿಂದ 04:42 ಗಂಟೆವರೆಗೆ ವರ್ಜ್ಯಂ : ಸಂಜೆ 04:31ರಿಂದ 05:19 ಗಂಟೆ ತನಕ ದುರ್ಮೂಹುರ್ತ: ಬೆಳಗ್ಗೆ 11:42 ರಿಂದ 12:30 ಗಂಟೆವರೆಗೆ ರಾಹುಕಾಲ: ಮಧ್ಯಾಹ್ನ 04:42ರಿಂದ 06:13ಗಂಟೆ ತನಕ ಸೂರ್ಯಾಸ್ತ: ಸಂಜೆ 06:13 ಗಂಟೆಗೆ ಇಂದಿನ …
Read More »ಯುನಿಯನ್ ಬ್ಯಾಂಕಿನಲ್ಲಿ ಸಿಬ್ಬಂದಿ ಇಲ್ಲದೆ ಜನರು ಹೈರಾಣು.
ರಾಮದುರ್ಗ : ನಗರದ ಯುನಿಯನ್ ಬ್ಯಾಂಕಿನಲ್ಲಿ ಸಿಬ್ಬಂದಿ ಕೊರತೆಯಿಂದ ಗ್ರಾಹಕರು ಹೈರಾಣು ಆಗಿ ತರಾಟೆಗೆ ತಗೆದುಕೊಂಡ ಘಟನೆ ಜರುಗಿದೆ, ಸರ್ಕಾರದ ಗೃಹಲಕ್ಷ್ಮಿ , ವಿಧವಾ ವೇತನ, ಅಂಗವಿಕಲರ ವೇತನ ಹಾಗೂ ಅನ್ನಭಾಗ್ಯ ಹಣ ಇತರ ಯೋಜನೆಗಳನ್ನು ಬ್ಯಾಂಕ ಮೂಲಕ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತದೆ ಈ ಕುರಿತು ರಾಮದುರ್ಗದ ತಾಲೂಕಿನ ಮಹಿಳೆಯರು ತಮ್ಮ ಖಾತೆಗೆ ಹಣ ಜಮಾವಣೆ ಕುರಿತು ಖಾತರಿ ಪಡಿಸಲು, ಎನ್ ಸಿ ಪಿ ನಂಬರ ಚೇಕ್ ಮಾಡಲು ಮತ್ತು …
Read More »ಮುತಾಲಿಕ್ ವಿರುದ್ಧ ದೂರು ದಾಖಲು; ಶ್ರೀರಾಮಸೇನೆ ಯಿಂದ ಪ್ರತಿಭಟನೆ
ಹುಬ್ಬಳ್ಳಿ : ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆಂದು ಪಾಲಿಕೆಯ ವಲಯ ಆಯುಕ್ತ ಉಪನಗರ ಪೊಲೀಸ್ ಭಾಷೆಯಲ್ಲಿ ದೂರು ನೀಡಿದ್ದನ್ನು ವಿರೋಧಿಸಿ, ಇಂದು ಶ್ರೀರಾಮ ಸೇನಾ ಕಾರ್ಯಕರ್ತರು ಪ್ರತಿಭಟನೆ ಮಾಡಿದರು. ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ ಮುತಾಲಿಕ್ ಅವರು, ಹಿಂದೂಪರ ಹೋರಾಟಗಾರರು, ಹಿಂದೂತ್ವಕ್ಕೆ ಸಾಕಷ್ಟು ದುಡಿದವರು ಅಂತವರ ಮೇಲೆ ಇವರು ದೂರು ನೀಡ್ತಾರೆ. ಇದಕ್ಕೆ ರಾಜ್ಯ ಸರ್ಕಾರ ಕುಮ್ಮತ್ತು ನೀಡುತ್ತಿದೆಂದು ಸರ್ಕಾರದ ವಿರುದ್ಧ ಘೋಷಣೆ …
Read More »ಕೃಷ್ಣ ಜನ್ಮಭೂಮಿ – ಈದ್ಗಾ ಆವರಣದ ಸಮೀಕ್ಷೆ ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್
ನವದೆಹಲಿ: ಉತ್ತರ ಪ್ರದೇಶದ ಮಥುರಾದಲ್ಲಿರುವ ಕೃಷ್ಣ ಜನ್ಮಭೂಮಿ – ಈದ್ಗಾ ಮಸೀದಿ ಆವರಣದ ವೈಜ್ಞಾನಿಕ ಸಮೀಕ್ಷೆಗೆ ನಿರ್ದೇಶನ ನೀಡುವಂತೆ ಕೋರಿ ಶ್ರೀ ಕೃಷ್ಣ ಜನ್ಮಭೂಮಿ ಮುಕ್ತಿ ನಿರ್ಮಾಣ್ ಟ್ರಸ್ಟ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಮನವಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ನ್ಯಾಯಪೀಠ, ಆಯುಕ್ತರ ನೇಮಕಾತಿಗೆ ಸಂಬಂಧಿಸಿದಂತೆ ಸಿವಿಲ್ ಪ್ರೊಸೀಜರ್ ಕೋಡ್ನ …
Read More »ಕಿರುಕುಳ ಪ್ರಕರಣ ದಾಖಲಿಸಿದ ಸೊಸೆ ಮೇಲೆ ಅತ್ತೆಯಿಂದ ಆಯಸಿಡ್ ದಾಳಿ
ನವದೆಹಲಿ: ದೆಹಲಿಯ ನ್ಯೂ ಉಸ್ಮಾನ್ಪುರ ಪ್ರದೇಶದಲ್ಲಿ 22 ವರ್ಷದ ಮಹಿಳೆ ಮೇಲೆ ಆಕೆಯ ಅತ್ತೆ ಆಯಸಿಡ್ ದಾಳಿ ಮಾಡಿರುವ ಘಟನೆ ಬುಧವಾರ ನಡೆದಿದ್ದು ಬೆಳಕಿಗೆ ಬಂದಿದೆ. ದಾಳಿಯಿಂದ ಮಹಿಳೆ ದೇಹ ಶೇ.25ರಷ್ಟು ಸುಟ್ಟ ಗಾಯಗಳಾಗಿವೆ. ಗಾಯಾಳುವನ್ನು ಸ್ಥಳೀಯ ಜೆಪಿಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೃತ್ಯ ಎಸಗಿದ ಅತ್ತೆ ಅಂಜಲಿಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಬಳಿಕ ಆರೋಪಿ ಅಂಜಲಿ ಮತ್ತು ಕುಟುಂಬ ಸದಸ್ಯರು ಪರಾರಿಯಾಗಿದ್ದರು. ಆದ್ರೆ ಪೊಲೀಸರು ಕಾರ್ಯಾಚರಣೆ ನಡೆಸಿ, ಶುಕ್ರವಾರ …
Read More »ವಂಚನೆ ಆರೋಪ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಸೇರಿ 7 ಜನ ಆರೋಪಿಗಳ ಪೊಲೀಸ್ ಕಸ್ಟಡಿ ಇಂದು ಅಂತ್ಯವಾಗಲಿದೆ.
ಬೆಂಗಳೂರು: ಉದ್ಯಮಿ ಗೋವಿಂದ್ ಪೂಜಾರಿ ಅವರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚಿಸಿದ ಪ್ರಕರಣದ ಏಳು ಜನ ಆರೋಪಿಗಳ ಪೊಲೀಸ್ ಕಸ್ಟಡಿ ಇಂದು ಅಂತ್ಯವಾಗಲಿದೆ. ಆರೋಪಿಗಳಾದ ಚೈತ್ರಾ ಕುಂದಾಪುರ, ಗಗನ್, ರಮೇಶ್, ಧನರಾಜ್, ಶ್ರೀಕಾಂತ್, ಪ್ರಜ್ವಲ್ ಹಾಗೂ ಚೆನ್ನನಾಯ್ಕ್ರನ್ನು ಇಂದು ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ. ಆರೋಪಿಗಳ ವಿಚಾರಣೆ ಬಹುತೇಕ ಅಂತ್ಯವಾಗಿದೆ. ಮಧ್ಯಾಹ್ನದ ವೇಳೆಗೆ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿರುವ ಸಿಸಿಬಿ ಪೊಲೀಸರು ಅಗತ್ಯವಿದ್ದಲ್ಲಿ ಮಾತ್ರ ಪುನಃ ಕಸ್ಟಡಿಗೆ ಕೇಳುವ …
Read More »ಸೂರತ್ನ ಉದ್ಯಮಿ ಮನೆಯಲ್ಲಿ 600 ಕೋಟಿ ರೂ ಬೆಲೆಯ ವಜ್ರದ ಗಣಪತಿ ಪ್ರತಿಷ್ಠಾಪನೆ!
ಸೂರತ್ (ಗುಜರಾತ್): ಗುಜರಾತ್ ರಾಜ್ಯದ ಸೂರತ್ನಲ್ಲಿ ಉದ್ಯಮಿಯೊಬ್ಬರು ತಮ್ಮ ನಿವಾಸದಲ್ಲಿ ಅಪರೂಪದ ಮತ್ತು ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಗಣಪನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ಕನುಭಾಯಿ ರಾಮ್ಜಿಭಾಯಿ ಅಸೋದರಿಯಾ ಎಂಬುವವರು ಬರೋಬ್ಬರಿ 600 ಕೋಟಿ ರೂಪಾಯಿ ಬೆಲೆ ಬಾಳುವ ವಜ್ರದ ಗಣಪನನ್ನು ಕೂರಿಸಿದ್ದಾರೆ. ವಜ್ರದ ವ್ಯಾಪಾರಿಯಾಗಿರುವ ಇವರು 15 ವರ್ಷಗಳ ಹಿಂದೆ ವ್ಯಾಪಾರಕ್ಕಾಗಿ ಬೆಲ್ಜಿಯಂಗೆ ಹೋಗಿದ್ದರು. ಅಲ್ಲಿಂದ ಕಚ್ಚಾ ವಜ್ರಗಳನ್ನು ತಂದಿದ್ದರು. ಈ ವೇಳೆ ಅನುಭಾಯಿ ಅವರ ತಂದೆಗೆ ಮನೆಗೆ ತಂದಿರವ …
Read More »ಉಪನೋಂದಣೆ ಕಚೇರಿಗಳ ಕೆಲಸದ ಅವಧಿ ವಿಸ್ತರಣೆ: ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ ಸೇವೆ ಲಭ್ಯ
ಬೆಂಗಳೂರು: ಸಾರ್ವಜನಿಕ ಹಿತದೃಷ್ಟಿಯಿಂದ ರಾಜ್ಯದ ಎಲ್ಲಾ ಉಪನೋಂದಣಿ ಕಚೇರಿಗಳ ಕೆಲಸದ ಅವಧಿಯನ್ನು ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ವಿಸ್ತರಿಸಲಾಗಿದೆ. ಸೆ.23 ರಿಂದ 30ರವರೆಗೆ ಈ ಆದೇಶ ಜಾರಿಗೆಯಲ್ಲಿರಲಿದ್ದು, ಒಂದು ವಾರ ಸಾರ್ವಜನಿಕರು 12 ಗಂಟೆಗಳ ಕಾಲ ಸೇವೆ ಪಡೆಯಬಹುದಾಗಿದೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕೇಂದ್ರ ಮೌಲ್ಯ ಮಾಪನ ಸಮಿತಿಯ (Valuation Committee) 2023-24ನೇ ಸಾಲಿನಲ್ಲಿ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ದರಗಳನ್ನು ಪರಿಷ್ಕರಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ …
Read More »ಪತ್ನಿ ಜೊತೆ ಸಂಬಂಧ ಶಂಕೆ: ವ್ಯಕ್ತಿಯ ಕತ್ತರಿಸಿದ ತಲೆ ಹಿಡಿದು ಪತ್ನಿಯ ತವರು ಮನೆಗೆ ಬಂದ ಪತಿ!
ಚೆನ್ನೈ(ತಮಿಳುನಾಡು): ಪತಿಯೊಬ್ಬತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿರುವ ಅನುಮಾನದ ಮೇರೆಗೆ ವ್ಯಕ್ತಿಯೋರ್ವನ ಶಿರಚ್ಛೇದ ಮಾಡಿರುವ ಆಘಾತಕಾರಿ ಘಟನೆ ಗುರುವಾರ ಸಂಜೆ ತಮಿಳುನಾಡಿನ ತೆಂಕಶಿ ಜಿಲ್ಲೆಯಲ್ಲಿ ನಡೆದಿದೆ. ಶಿರಚ್ಛೇದ ಮಾಡಿದ್ದಲ್ಲದೇ ಕತ್ತರಿಸಿದ ತಲೆಯನ್ನು ಟುಟಿಕೋರಿನ್ ಜಿಲ್ಲೆಯಲ್ಲಿರುವ ಪತ್ನಿಯ ತವರು ಮನೆ ಮುಂದೆ ಇಟ್ಟಿದ್ದ. ಕೃತ್ಯ ಎಸಗಿದ ಎಸ್.ವೇಲುಸಾಮಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ವ್ಯಕ್ತಿಯನ್ನು ಮುರುಗನ್ ಎಂದು ಗುರುತಿಸಲಾಗಿದೆ. ಘಟನೆ ಹಿನ್ನೆಲೆ: ಆಲಂಕುಳಂ ಸಮೀಪದ ರೆಡಿಯಾರಪಟ್ಟಿ ಗಿಮ್ಕುಳಂ ಗ್ರಾಮಕ್ಕೆ ಸೇರಿದ ಆರೋಪಿ ವೇಲುಸಾಮಿಯು ತೂತುಕುಡಿ ಜಿಲ್ಲೆಯ …
Read More »ಕಾವೇರಿ ವಿವಾದದ ಬಗ್ಗೆ ಅಮಿತ್ ಶಾ ಜೊತೆ ಚರ್ಚಿಸಿರುವೆ,
ದೇವನಹಳ್ಳಿ(ಬೆಂ.ಗ್ರಾಮಂತರ): “ನಾನು ಕೂಡ ಮಂಡ್ಯಗೆ ಹೋಗುತ್ತಿದ್ದೇನೆ. ರೈತರ ಹೋರಾಟಕ್ಕೆ ಬಿಜೆಪಿ ಮತ್ತು ಜೆಡಿಎಸ್ ಬೆಂಬಲ ಕೊಟ್ಟಿದೆ. ಈಗ ನಾನು ರೈತರ ಹೋರಾಟಕ್ಕೆ ಸಾಂಕೇತಿಕವಾಗಿ ಬೆಂಬಲ ಸೂಚಿಸಲು ಹೊರಟಿದ್ದೇನೆ ಎಂದು ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಖಂಡಿಸಿಮಂಡ್ಯ ಬಂದ್ ವಿಚಾರಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಅವರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಜೊತೆ ಜನತಾ ದಳ (ಜಾತ್ಯತೀತ) ಮೈತ್ರಿ ಮಾಡಿಕೊಂಡ ಬಳಿಕ …
Read More »