ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ
ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ
ಚಾತುರ್ಮಾಸದ ಹಿನ್ನೆಲೆ ಬೆಳಗಾವಿ ನಗರದಲ್ಲಿ ಜೈನ ಮುನಿಗಳ ಶಿಷ್ಯೆಯರ ಭವ್ಯ ಪುರ ಪ್ರವೇಶೋತ್ಸವ ನಡೆಯಿತು.
ಸುಮಾರು 1500 ಕಿಲೋ ಮೀಟರ್ ಪಾದಯಾತ್ರೆ ಮಾಡುತ್ತ ಇಂದು ಬೆಳಗಾವಿಗೆ ಪ. ಪೂ ಸುಮನ್ ಸೂರ್ಯೋದಯಾಶ್ರೀಜಿಯ ಶಿಷ್ಯೆ, ಪ. ಪೂ ತಪಸ್ವಿ ರತ್ನಾರತ್ನ ಜ್ಯೋತಿಶ್ರೀಜಿ ಶಿಷ್ಯೆ, ವರ್ಧಮಾನ ತಪಾರಾಧಿಕಾ ಪ. ಪೂ ಅಕ್ಷಯ ಜ್ಯೋತಿಶ್ರೀಜಿ ಅವರ ಶಿಷ್ಯೆ, ಪ. ಪೂ ನಿರಾಗ್ ಜ್ಯೋತಿಶ್ರೀಜಿ ಶಿಷ್ಯೆ. ಪ ಪೂ ವಿರಮ್ ಜ್ಯೋತಿಶ್ರೀಜಿ ಶಿಷ್ಯೆ, ಪ.ಪೂ ನಿತ್ಯಂ ಜ್ಯೋತಿಶ್ರೀಜಿ ಶಿಷ್ಯೆ ಮತ್ತು ಪ.ಪೂ. ಪುಣ್ಯಂ ಜ್ಯೋತಿಶ್ರೀಜಿ ಶಿಷ್ಯೆ ಸೇರಿದಂತೆ ಇನ್ನುಳಿದ ಮುನಿಗಣಂಗಳ ಪುರ ಪ್ರವೇಶ ನಡೆಯಿತು.
ಬೆಳಗಾವಿ ಪಾಂಗೂಳ ಗಲ್ಲಿಯ ಮಾರವಾಡಿ ಸ್ಥಾಪಿತ ಶ್ರೀ ಚಂದ್ರಪ್ರಭ ಜೈನ ಮೂರ್ತಿಪೂಜಕ ಸಂಘದ ವತಿಯಿಂದ ಭವ್ಯವಾಗಿ ಮುನಿಗಣವನ್ನು ಸ್ವಾಗತಿಸಲಾಯಿತು.
ಸಂಯುಕ್ತ ಮಹಾರಾಷ್ಟ್ರ ಚೌಕ್, ಖಡೇ ಬಝಾರ್, ಭೇಂಢಿ ಬಝಾರ್ ಮಾರ್ಗವಾಗಿ ಪಾಂಗೂಳ ಗಲ್ಲಿಯ ವರೆಗೆ ಭವ್ಯ ಮೆರವಣಿಗೆ ನಡೆಯಿತು. ನಂತರ ಮಾಂಗಲೀಕ ಪ್ರವಚನ, ಪೂರ್ಣಾಹುತಿ, ನವಕಾರಸಿ ಮತ್ತು ಸಾಮೂಹಿಕ ಪ್ರಭಾವನಾ ನಡೆಯಿತು.
ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಉತ್ತಮ್ ಸರೇಮಾಲಜೀ, ವಿಜಯ್ ಪೋರವಾಲ್,
ರಾಜು ಖೋಡಾ, ಉತ್ತಮ ಪೋರವಾಲ್, ವಿಜಯ್ ಸಂಘವಿ , ಮಹೇಶ್ ಪೋರವಾಲ್, ರಾಜು ದುಮಾವತ್ರಾ ಮೇಶ್ ಖೋಡಾ, ಮಹೇಂದ್ರ ಪೋರವಾಲ್, ಡೈಮಂಡ್ ದೊಶಿ, ಮುಖೇಶ್ ಖೋಡಾ, ವಿಕ್ರಂ ಜೈನ್ ಸೇರಿದಂತೆ ಇನ್ನುಳಿದವರು ಶ್ರಮಿಸಿದರು.
Laxmi News 24×7