Breaking News

ಮತ್ತೆ ಸದ್ದು ಮಾಡಿದ ಮುತ್ತಪ್ಪ ರೈ ಪುತ್ರನ ಲ್ಯಾಂಬೋರ್ಗಿನಿ – ಏರ್‌ಪೋರ್ಟ್ ರಸ್ತೆಯಲ್ಲಿ ಪುಂಡಾಟದ ವಿಡಿಯೋ ವೈರಲ್

ಬೆಂಗಳೂರು: ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಒಡೆತನದ ಲ್ಯಾಂಬೋರ್ಗಿನಿ ಕಾರು ಮತ್ತೊಮ್ಮೆ ಸುದ್ದಿಯಲ್ಲಿದೆ. ಬೆಂಗಳೂರಿನ ಏರ್‌ಪೋರ್ಟ್ ರಸ್ತೆಯಲ್ಲಿ ಡ್ರಿಫ್ಟಿಂಗ್ ಮಾಡುವ ಮೂಲಕ, ಸೈಲೆನ್ಸರ್‌ನಿಂದ ಬೆಂಕಿ ಉಗುಳುತ್ತಾ ಕರ್ಕಶ ಶಬ್ದ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. KA 05 NR 0009 ನೋಂದಣಿ ಸಂಖ್ಯೆಯ ಲ್ಯಾಂಬೋರ್ಗಿನಿ ಕಾರಿನ ವಿಡಿಯೋ ಇದೀಗ ಪೊಲೀಸರ ಗಮನ ಸೆಳೆದಿದೆ. ವೈರಲ್ ವಿಡಿಯೋ ಆಧರಿಸಿ ಘಟನೆ ಯಾವ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂಬುದನ್ನು ಪೊಲೀಸರು …

Read More »

ಡಿವೈಡರ್‌ಗೆ ಬೈಕ್ ಡಿಕ್ಕಿ – ಕೇರಳ ಮೂಲದ ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ಸಾವು

ಬೆಂಗಳೂರು: ಡಿವೈಡರ್‌ಗೆ ಬೈಕ್  ಡಿಕ್ಕಿ ಹೊಡೆದ ಪರಿಣಾಮ ಕೇರಳ ಮೂಲದ ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕೆಂಗೇರಿಯ ಆರ್.ಆರ್ ಡೆಂಟಲ್ ಕಾಲೇಜು ಬಳಿ ನಡೆದಿದೆ. ಅತುಲ್, ಗೌರಿಶಂಕರ್ ಮೃತ ನರ್ಸಿಂಗ್ ವಿದ್ಯಾರ್ಥಿಗಳು. ನಸುಕಿನ ಜಾವ 3 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಇಬ್ಬರು ವಿದ್ಯಾರ್ಥಿಗಳು ಮೈಸೂರು ಕಡೆಯಿಂದ ಬೆಂಗಳೂರು ಕಡೆಗೆ ಬೈಕ್‌ನಲ್ಲಿ ಬರುತ್ತಿದ್ದರು. ಈ ವೇಳೆ ರಸ್ತೆ ಡಿವೈಡರ್‌ಗೆ ಬೈಕ್ ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ. ಘಟನಾ …

Read More »

ಬೆಂಗಳೂರು – ಚೆನ್ನೈ ಎಕ್ಸ್‌ಪ್ರೆಸ್‌ ವೇಯಲ್ಲಿ ಡಿವೈಡರ್‌ಗೆ ಕಾರು ಡಿಕ್ಕಿ; ಯುವತಿ ದುರ್ಮರಣ

ಬೆಂಗಳೂರು: ಡಿವೈಡರ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಯುವತಿ ಸಾವನ್ನಪ್ಪಿರುವ ಘಟನೆ ಬೆಂಗಳೂರು- ಚೆನ್ನೈ ಎಕ್ಸ್‌ಪ್ರೆಸ್‌ ವೇಯಲ್ಲಿ  ನಡೆದಿದೆ. ಹೊಸಕೋಟೆ  ಸಮೀಪದ ದೊಡ್ಡ ಹುಲ್ಲೂರು ಬಳಿ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಬೆಂಜ್ ಕಾರು  ಸಂಪೂರ್ಣ ನಜ್ಜುಗುಜ್ಜಾಗಿದ್ದು, ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಕಾರು ಚಾಲಕನ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿ ಚಾಲನೆಯೇ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಅಪಘಾತದ ಬಳಿಕ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. …

Read More »

ಚಪ್ಪಲಿಯಿಂದ ಹಲ್ಲೆ ಮಾಡಿದ್ರೆ ಹೇಗೆ ಕೆಲಸ ಮಾಡಬೇಕು? – ಬಿಟಿಡಿಎ ಸಿಬ್ಬಂದಿ

ಬಾಗಲಕೋಟೆ: ರೈತನ ಭೂ ಪರಿಹಾರ  ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಆದರೆ ಅವರು ಎದೆ ಮೇಲೆ ಕೈ ಹಾಕಿ ಬಟ್ಟೆ ಹಿಡಿದು ಎಳೆದಾಡಿ ಚಪ್ಪಲಿಯಿಂದ ಹೊಡೆದಿದ್ದಾರೆ. ಈ ರೀತಿ ಹಲ್ಲೆ ಮಾಡಿದರೆ ನಾವು ಹೇಗೆ ಸರ್ಕಾರಿ ಕೆಲಸ ಮಾಡಬೇಕು? ನಮಗೆ ಭಯದ ವಾತಾವರಣ ಸೃಷ್ಟಿಯಾಗಿದೆ ಎಂದು ರೈತನಿಂದ ಹಲ್ಲೆಗೊಳಗಾದ ಬಿಟಿಡಿಎ ಹಿರಿಯ ಸಹಾಯಕ ಹಾಗೂ ಟೈಪಿಸ್ಟ್ ನೀಲಕಂಠ ಅಂಕದ ಆತಂಕ ವ್ಯಕ್ತಪಡಿಸಿದ್ದಾರೆ. ಮುಳುಗಡೆ ಭೂಮಿಗೆ ಕಳೆದ ನಾಲ್ಕು ವರ್ಷಗಳಿಂದ ಸೂಕ್ತ …

Read More »

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಪರ ಜಿಲ್ಲಾಧಿಕಾರಿಗೆ ಮನವಿ

ಬೆಳಗಾವಿ : ರಸಗೊಬ್ಬರ ಖರೀದಿಗೆ ಎಫ್‌ಐಡಿ ಕಡ್ಡಾಯವನ್ನು ರದ್ದುಪಡಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ, ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ರಸಗೊಬ್ಬರ ಖರೀದಿಗೆ ಎಫ್‌ಐಡಿ ಕಡ್ಡಾಯಗೊಳಿಸಿದ್ದರಿಂದ ಅಗತ್ಯ ಪ್ರಮಾಣದ ಗೊಬ್ಬರ ಪಡೆಯಲು ತೊಂದರೆಯಾಗುತ್ತಿದೆ. ಈ ನಿಯಮ ರದ್ದುಪಡಿಸಿ ಸುಲಭವಾಗಿ ರಸಗೊಬ್ಬರ ದೊರಕಿಸಿಕೊಡಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ನೀಡುತ್ತಿರುವ ಉಚಿತ …

Read More »

ಎಐ ಬಳಸಿ ಯುವತಿಯ ಅಶ್ಲೀಲ ವಿಡಿಯೋ, ಹಣಕ್ಕೆ ಡಿಮ್ಯಾಂಡ್​​: ಇಬ್ಬರು ಆರೋಪಿಗಳು ಅಂದರ್​​

ಚಿಕ್ಕಮಗಳೂರು: ಯುವತಿಯೋರ್ವಳ ಫೋಟೋವನ್ನು ಪೇಸ್​​ಬುಕ್​ನಿಂದ ಪಡೆದು ಅದನ್ನು ಬಳಸಿ ಅಶ್ಲೀಲ ವಿಡಿಯೋ ಕ್ರಿಯೇಟ್ ಮಾಡಿ ಹಣಕ್ಕೆ ಬ್ಲ್ಯಾಕ್​​ಮೇಲ್​​ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. AI, ವಿಡಿಯೋ ಎಡಿಟಿಂಗ್ ಅಪ್ಲಿಕೇಶನ್ ಬಳಸಿ ಮಾಡಿದ ವಿಡಿಯೋವನ್ನು ಯುವತಿಯ ತಾಯಿಗೆ ಕಳುಹಿಸಿದ್ದ ಆರೋಪಿಗಳು, ದುಡ್ಡಿಗಾಗಿ ಪೀಡಿಸಿದ್ದರು. ಹಣ ನೀಡದಿದ್ದರೆ ಜಾಲತಾಣದಲ್ಲಿ ವಿಡಿಯೋ ಹಾಕುವುದಾಗಿ ಬೆದರಿಕೆ ಹಾಕಿದ್ದರು. ನೊಂದ ಯುವತಿಯ ಕಡೆಯವರು ಲಕ್ಕವಳ್ಳಿ ಪೊಲೀಸರಿಗೆ ನೀಡಿದ್ದ ದೂರಿನ ಅಧಾರದಲ್ಲಿ ಬೆಂಗಳೂರಿನಲ್ಲಿ ಕೆಲಸ …

Read More »

ಶಿವಮೊಗ್ಗ ನಗರದಲ್ಲಿ ಮತ್ತೆ ರಕ್ತದೋಕುಳಿ – ಗ್ಯಾಂಗ್‌ವಾರ್‌ಗೆ ರೌಡಿಶೀಟರ್ ಬರ್ಬರ ಹತ್ಯೆ

ಶಿವಮೊಗ್ಗ: ಕಳೆದ ಒಂದೆರಡು ವರ್ಷಗಳಿಂದ ತಣ್ಣಗಿದ್ದ ಮಲೆನಾಡು ಶಿವಮೊಗ್ಗದಲ್ಲಿ ರೌಡಿಗಳ ಗ್ಯಾಂಗ್‌ವಾರ್ ಮತ್ತೆ ಮುನ್ನೆಲೆಗೆ ಬಂದಿದೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ರೌಡಿಶೀಟರ್  ಒಬ್ಬನನ್ನು ಎದುರಾಳಿ ಗ್ಯಾಂಗ್ ಭೀಕರವಾಗಿ ಹತ್ಯೆ ಮಾಡಿದೆ. ಹಾಡಹಗಲೇ ನಡೆದ ಈ ಗ್ಯಾಂಗ್‌ವಾರ್‌ನಿಂದ ಶಿವಮೊಗ್ಗದ ಜನತೆ ಬೆಚ್ಚಿಬಿದ್ದಿದೆ. ಶಿವಮೊಗ್ಗ ನಗರದಲ್ಲಿ ಮತ್ತೆ ರಕ್ತದೋಕುಳಿ ಹರಿದಿದೆ. ಗ್ಯಾಂಗ್‌ವಾರ್‌ಗೆ ರೌಡಿಶೀಟರ್ ಬಲಿಯಾಗಿದ್ದಾನೆ. ಶಿವಮೊಗ್ಗದ ಗಾಂಧಿ ಬಜಾರ್‌ನ 1ನೇ ಕ್ರಾಸ್‌ನ ಕರಿದೇವರ ಕೇರಿಯಲ್ಲಿ ರೌಡಿಶೀಟರ್, ಇಸ್ಪಿಟ್ ಗ್ಯಾಂಬ್ಲರ್ ನರಸಿಂಹ ಹತ್ಯೆಯಾಗಿದ್ದಾನೆ. ಗೋವಿಂದಾಪುರ …

Read More »

ಇಂದಿನಿಂದ ಧರ್ಮಸ್ಥಳಕ್ಕೆ ಹೊಸ ಪ್ಯಾಕೇಜ್ ಪರಿಚಯಿಸಿದ KSTDC

ಬೆಂಗಳೂರು: ಕರ್ನಾಟಕದಲ್ಲಿ ಅತೀ ಹೆಚ್ಚು ಶಿವ ಭಕ್ತರು ಭೇಟಿ ನೀಡುವ ದೇವಾಲಯ ಅಂದರೆ ಅದು ಧರ್ಮಸ್ಥಳ. ಬೆಂಗಳೂರು ಸೇರಿದಂತೆ ಪ್ರತಿನಿತ್ಯ ಸಾವಿರಾರು ಭಕ್ತರು ಧರ್ಮಸ್ಥಳ  ಮಂಜುನಾಥನ ದರ್ಶನಕ್ಕಾಗಿ ಹೋಗುತ್ತಾರೆ. ಜೊತೆಗೆ ಅಲ್ಲಿ ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ದರ್ಶನ ಮಾಡಿಕೊಂಡು ಬರುತ್ತಾರೆ. ಇದೀಗ ರಾಜಧಾನಿಯಿಂದ ಧರ್ಮಸ್ಥಳಕ್ಕೆ ತೆರಳುವ ಭಕ್ತಾದಿಗಳಿಗೆ ಕೆಎಸ್‌ಟಿಡಿಸಿ ಗುಡ್ ನ್ಯೂಸ್ ನೀಡಿದೆ. ಇನ್ಮುಂದೆ ರಾಜಧಾನಿಗರು ಶೀಘ್ರದಲ್ಲೇ ಮಂಜುನಾಥನ ದರ್ಶನ ಮಾಡಬಹುದಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಕೇವಲ ಧಾರ್ಮಿಕ ಸ್ಥಳ …

Read More »

ರೈತರ ವಿರೋಧದ ನಡುವೆಯೂ ಸರ್ಕಾರ ದಬ್ಬಾಳಿಕೆ ಮಾಡುತ್ತಿದೆ: ಬಿಡದಿ ಟೌನ್‌ಶಿಪ್ ಭೂಸ್ವಾಧೀನಕ್ಕೆ ಹೆಚ್‌ಡಿಕೆ ಆಕ್ರೋಶ

ಬೆಂಗಳೂರು: ಬಿಡದಿ ಟೌನ್‌ಶಿಪ್ ಯೋಜನೆಗೆ ರಾಜ್ಯ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿರುವುದನ್ನು ಖಂಡಿಸಿದ ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿ ರೈತರ ವಿರೋಧದ ನಡುವೆಯೂ ಭೂಸ್ವಾಧೀನಕ್ಕೆ ಮುಂದಾಗಿರುವ ಸರ್ಕಾರದ ವಿರುದ್ಧ ಕಿಡಿಕಾರಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯ ಅಂತಿಮ ಅಧಿಸೂಚನೆ ಹೊರಡಿಸಿದೆ. ಬಹಳ ದಿನಗಳಿಂದ ಅಲ್ಲಿನ ರೈತರು ಪ್ರತಿಭಟನೆ ಮಾಡುತ್ತಲೇ ಇದ್ದಾರೆ. ಅಲ್ಲಿ ಯಶಸ್ವಿಯಾಗಿ ಕೃಷಿ, ತೋಟಗಾರಿಕೆ ಕೆಲಸ ನಡೆಯುತ್ತಿದೆ. ಆ ಭಾಗದ ರೈತರಿಂದ ಹಾಲು ಉತ್ಪಾದನೆ ಹೆಚ್ಚಾಗಿದೆ. ಆ ಸ್ಥಳದಲ್ಲಿ …

Read More »

ಮಗನ ನೆನೆದು ವೇದಿಕೆಯಲ್ಲೇ ಬಿಕ್ಕಿ ಬಿಕ್ಕಿ ಅತ್ತ ಜಿಟಿ ದೇವೇಗೌಡ

ಮೈಸೂರು: ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ ದೇವೇಗೌಡ  ಮಗನನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಮೈಸೂರಿನ  ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಶಾಸಕ ಜಿ.ಟಿ ದೇವೇಗೌಡ ಪತ್ನಿ ಲಲಿತಾ ಜಿ.ಟಿ ದೇವೇಗೌಡ ಅವರಿಗೆ ʻಸಹಕಾರ ಸೇವಾ ರತ್ನ’ ಪ್ರಶಸ್ತಿ ನೀಡಿದ್ದ ಬೆನ್ನಲ್ಲೇ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು. ಈ ವೇಳೆ ಭಾಷಣಕ್ಕೆ ನಿಂತ ಕೂಡಲೇ ಶಾಸಕ ಜಿ.ಟಿ ದೇವೇಗೌಡರು ಗಳಗಳನೆ ಅತ್ತರು. ಕಾರ್ಯಕ್ರಮದಲ್ಲಿ ಪುತ್ರ ಶಾಸಕ ಹರೀಶ್ ಗೌಡ …

Read More »