ಚಿಕ್ಕಮಗಳೂರು: ಚಿನ್ನ ಅಡವಿಟ್ಟು ಪಡೆದ ಸಾಲ ಬ್ಯಾಂಕ್ ಖಾತೆಗೆ ಜಮೆಯಾದ ಒಂದೇ ಕ್ಷಣದಲ್ಲಿ ಸೈಬರ್ ವಂಚಕರು ಹಣ ಎಗರಿಸಿದ ಪ್ರಕರಣ ಚಿಕ್ಕಮಗಳೂರಲ್ಲಿ ನಡೆದಿದೆ. ನಗರದ ವಕೀಲರೊಬ್ಬರು ಬ್ಯಾಂಕ್‌ನಲ್ಲಿ ಚಿನ್ನ ಅಡವಿಟ್ಟು 4.14 ಲಕ್ಷ ರೂ. ಸಾಲ ಪಡೆದಿದ್ದರು. ಸಾಲ ಪಡೆದು ಬ್ಯಾಂಕ್‌ನಿಂದ ಹೊರಬರುವ ಮುನ್ನವೇ ಅವರ ಖಾತೆಯಿಂದ 99,584 ರೂ. ಹಣವನ್ನು ಸೈಬರ್ ವಂಚಕರು ಎಗರಿಸಿದ್ದಾರೆ. ಓಟಿಪಿ ಬಂದಿಲ್ಲ, ಎಪಿಕೆ ಲಿಂಕ್ ಕೂಡ ಬಂದಿಲ್ಲ ಹಣ ಮಾತ್ರ ಕಳ್ಳರ ಪಾಲಾಗಿದೆ. ಅಮೆಜಾನ್ …
Read More »ಯೋಗೇಶ್ ಗೌಡ ಕೊಲೆ ಕೇಸ್ – ಜೀವಾವಧಿ ಶಿಕ್ಷೆ ಪ್ರಶ್ನಿಸಿ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದೂಡಿಕೆ
ಬೆಂಗಳೂರು: ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ವಿನಯ್ ಕುಲಕರ್ಣಿಯವರು ಶಿಕ್ಷೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮೇ 26ಕ್ಕೆ ಮುಂದೂಡಿದೆ. ಶಿಕ್ಷೆ ಅಮಾನತ್ತಿನಲ್ಲಿಟ್ಟು ಜಾಮೀನು ನೀಡುವಂತೆ ಕೋರಿ ವಿನಯ್ ಕುಲಕರ್ಣಿ ಅರ್ಜಿ ಸಲ್ಲಿಸಿದ್ದರು. ಅಲ್ಲದೇ ಪೊಲೀಸ್ ಅಧಿಕಾರಿ ಎ19 ಚೆನ್ನಕೇಶವ್ ಟೆಂಗರಿಕರ್ ಹಾಗೂ ಚಂದ್ರಶೇಖರ್ ಇಂಡಿ ಸಹ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮುಗದಂ ಮತ್ತು ನ್ಯಾ.ರಾಜೇಶ್ …
Read More »ಕಾಮಗಾರಿಗಳನ್ನು ಪರಿಶೀಲಿಸಿದ ಶಾಸಕ ಆಸಿಫ್ (ರಾಜು) ಸೇಠ್
ಶಾಸಕ ಆಸಿಫ್ (ರಾಜು) ಸೇಠ್, ಅಮನ್ ನಗರ 4ನೇ, 5ನೇ, 6ನೇ ಮತ್ತು 7ನೇ ಕ್ರಾಸ್‌ಗೆ ಅಂಕಿತ್ ರಾಜೇಂದ್ರ ಸೇರಿದಂತೆ ನಿಗಮದ ಅಧಿಕಾರಿಗಳು, ಹೆಸ್ಕಾಂ ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆದಾರರೊಂದಿಗೆ ಭೇಟಿ ನೀಡಿ, ಈ ಪ್ರದೇಶದಲ್ಲಿ ನಡೆಯುತ್ತಿರುವ ಚರಂಡಿ, ಬೀದಿ ದೀಪ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು. ಶಾಸಕರು ಸ್ಥಳೀಯ ನಿವಾಸಿಗಳೊಂದಿಗೆ ಅಭಿವೃದ್ಧಿ ಕಾಮಗಾರಿಗಳ ಕುರಿತು ಚರ್ಚೆ ನಡೆಸಿದರು ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿದರು. ಒಳಚರಂಡಿ, ರಸ್ತೆ ಪರಿಸ್ಥಿತಿಗಳು ಮತ್ತು …
Read More »ಚುನಾವಣಾ ರಾಜಕೀಯಕ್ಕೆ ಹೆಚ್ ವಿಶ್ವನಾಥ್ ಗುಡ್ ಬೈ
ಮೈಸೂರು: ಮುಂಬರುವ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳುವ ಮೂಲಕ ಎಂಎಲ್‌ಸಿ ಹೆಚ್ ವಿಶ್ವನಾಥ್ ಚುನಾವಣಾ ರಾಜಕೀಯಕ್ಕೆ ಗುಡ್ ಬೈ ಹೇಳಿದ್ದಾರೆ. ಈ ಕುರಿತು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಹಲವು ಬಾರಿ ಚುನಾವಣೆ ಎದುರಿಸಿದಾಗ ಜನರೇ ಹಣ ನೀಡಿ ಆಶೀರ್ವಾದ ಮಾಡಿದ್ದರು. ಆದರೆ ಈಗ ಹಣ ನೀಡಿ ಚುನಾವಣೆ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ವಿಧಾನಸಭೆ ಚುನಾವಣೆ ಎದುರಿಸಲು 50 ಕೋಟಿ ರೂ. ಹಣ ಬೇಕು. …
Read More »ಡಿಜಿಪಿ ರಾಮಚಂದ್ರರಾವ್ ಅಮಾನತು ವಾಪಸ್ ಸಿಎಂ ನಿರ್ಧಾರ: ಪರಮೇಶ್ವರ್
ಬೆಂಗಳೂರು: ಡಿಜಿಪಿ ರಾಮಚಂದ್ರರಾವ್ ಅಮಾನತು ವಾಪಸ್ ನಿರ್ಧಾರ ಸಿಎಂ ಸಿದ್ದರಾಮಯ್ಯನವರದ್ದು ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಮಚಂದ್ರರಾವ್ ಅವರ ಅಮಾನತನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (DPAR) ವಾಪಸ್ ಪಡೆದಿದೆ. ರಾಮಚಂದ್ರರಾವ್ ಈ ತಿಂಗಳ ಕೊನೆಗೆ ನಿವೃತ್ತಿ ಆಗುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಅವರ ಅನುಮತಿ ಪಡೆದು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು. ಅಮಾನತು ವಾಪಸ್ ಪಡೆದಿದ್ದು ಸರಿ ತಪ್ಪು ಎಂದು ನಾನು …
Read More »ಬಿಜೆಪಿಯವರು ಭಾರತದಲ್ಲಿ ಎಲ್ಲೆಲ್ಲಿ ಚೂರಿ ಹಾಕಿದ್ದಾರೆ ಅದನ್ನು ಮರೆತು ಬಿಡುತ್ತಾರೆ: ಪರಮೇಶ್ವರ್ ಕಿಡಿ
ಬೆಂಗಳೂರು: ತಮಿಳುನಾಡಿನಲ್ಲಿ ವಿಜಯ್ ಅವರ ತಮಿಳಿ ವೆಟ್ರಿ ಕಳಗಂಕಾಂಗ್ರೆಸ್ ಬೆಂಬಲ ನೀಡಿದ್ದನ್ನು ಗೃಹ ಸಚಿವ ಪರಮೇಶ್ವರ್ಸಮರ್ಥನೆ ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿಯವರುಎಷ್ಟು ಜನರ ಬೆನ್ನಿಗೆ ಚೂರಿ ಹಾಕಿದ್ದಾರೆ. ಬಿಜೆಪಿ ಅವರು ಭಾರತದಲ್ಲಿ ಎಲ್ಲೆಲ್ಲಿ ಚೂರಿ ಹಾಕಿದ್ದಾರೆ ಅದನ್ನು ಮರೆತು ಬಿಡುತ್ತಾರೆ. ಬಿಜೆಪಿ ಅವರಿಗೆ ಜಾಣ ಕುರುಡು ಮರೆತು ಹೋಗಿ ಬಿಡುತ್ತಾರೆ ಎಂದು ಕಿಡಿಕಾರಿದರು. ರಾಜಕೀಯದಲ್ಲಿ ಎಲ್ಲವೂ ಸಾಧ್ಯವಿದೆ. ತಮಿಳುನಾಡಿನಲ್ಲಿ ಸರ್ಕಾರ ರಚನೆಯಾಗಬೇಕಿದೆ. ಈ ಕಾರಣಕ್ಕೆ ನಾವು ಬೆಂಬಲ ಕೊಟ್ಟಿದ್ದೇವೆ. …
Read More »ಮಂಡ್ಯ ಜಿಲ್ಲೆಯ ಋಣ ನಮ್ಮ ಮೇಲಿದೆ, 2019ರ ನನ್ನ ಸೋಲು ಪಕ್ವತೆ ಕಲಿಸಿದೆ: ನಿಖಿಲ್ ಕುಮಾರಸ್ವಾಮಿ
ಮಂಡ್ಯ: ನನ್ನ ರಾಜಕೀಯ ಪ್ರವೇಶ ಮಂಡ್ಯ ಜಿಲ್ಲೆಯಿಂದಲೇ ಆಗಿದೆ. ನಾವು ಮಂಡ್ಯದಲ್ಲಿ ಹುಟ್ಟದಿದ್ದರೂ ಈ ಜಿಲ್ಲೆಯ ಋಣ ನಮ್ಮ ಮೇಲಿದೆ. ಯಾವುದೇ ಊರಿಗೆ ಹೋದರೂ ಜನ ತೋರಿಸುವ ಪ್ರೀತಿ ಮರೆಯಲಾಗದು ಎಂದು ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಮಂಡ್ಯ ಜಿಲ್ಲೆಯ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಪಾಂಡವಪುರದಲ್ಲಿ ನಡೆದ ಜನರೊಂದಿಗೆ ಜನತಾದಳ ಮತ್ತು ಪಕ್ಷದ 25ನೇ ವರ್ಷದ ರಜತ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, 2019ರ ಲೋಕಸಭಾ ಚುನಾವಣೆಯ …
Read More »ಉತ್ತರ ಕರ್ನಾಟಕಕ್ಕೆ ಅಪ್ಪಳಿಸಲಿದೆ 42° ತಾಪಮಾನ
ಬೆಂಗಳೂರು: ಮುಂದಿನ 1 ವಾರಗಳ ಕಾಲ ರಾಜ್ಯದ ಹವಾಮಾನದಲ್ಲಿ ಭಾರೀ ಏರುಪೇರು ಕಂಡುಬರಲಿದೆ. ಒಂದೆಡೆ ಸುಡುವ ಬಿಸಿಲು, ಒಣಹವೆ ಹಾಗೂ ಮತ್ತೊಂದೆಡೆ ಮಳೆಯ ಆರ್ಭಟ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಒಳನಾಡಿನ ಜಿಲ್ಲೆಗಳಾದ ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ವಿಜಯಪುರ, ಬಾಗಲಕೋಟೆ, ಕೊಪ್ಪಳ ಮತ್ತು ಗದಗದಲ್ಲಿ ಸೂರ್ಯನ ತಾಪ ವಿಪರೀತವಾಗಿರಲಿದೆ. ವಾರಪೂರ್ತಿ ಸುಮಾರು 42 ಡಿಗ್ರಿ ಸೆಲ್ಸಿಯಸ್ ತಾಪಮಾನದ ಎಚ್ಚರಿಕೆ ನೀಡಲಾಗಿದೆ. ನಿನ್ನೆ ಕಲಬುರಗಿಯಲ್ಲಿ 41.6 …
Read More »ಜೋಡಿ ಕೊಲೆ ಸಾಕ್ಷಿ ಹೇಳಲು ಹೋಗಬೇಕಿದ್ದವನ ಶವ ಮರದಲ್ಲಿ ಪತ್ತೆ!ಜೋಡಿ ಕೊಲೆ ಸಾಕ್ಷಿ ಹೇಳಲು ಹೋಗಬೇಕಿದ್ದವನ ಶವ ಮರದಲ್ಲಿ ಪತ್ತೆ!
ಚಿಕ್ಕೋಡಿ: ಜೋಡಿ ಕೊಲೆ ಪ್ರಕರಣದ ಸಾಕ್ಷಿ ಹೇಳಲು ಕೋರ್ಟ್‌ಗೆ ಹೊಗಬೇಕಿದ್ದ ವ್ಯಕ್ತಿಯ ಶವ ಅಥಣಿಯ ಹಣಮಾಪುರ ಗ್ರಾಮದ ಹೊರವಲಯದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಾವನ್ನಪ್ಪಿದ ವ್ಯಕ್ತಿಯನ್ನು ಮಹಾರಾಷ್ಟ್ರ ಮೂಲದ ದಾದಾಸೋ ಇಮಗರ (56) ಎಂದು ಗುರುತಿಸಲಾಗಿದೆ. ಕಳೆದ ಮೂರು ವರ್ಷಗಳ ಹಿಂದೆ ಬಾವಿ ವಿಚಾರಕ್ಕೆ ಮಗ ಹಾಗೂ ತಮ್ಮನನ್ನು ಸಂಬಂಧಿಕರು ಕೊಲೆ ಮಾಡಿದ್ದರು. ಇದನ್ನು ದಾದಾಸೋ ಕಣ್ಣಾರೆ ಕಂಡಿದ್ದ. ಈ ಬಗ್ಗೆ ಹತ್ತು ಜನರ ವಿರುದ್ಧ ದೂರು …
Read More »ಮೇ 10ರಂದು ಬೆಂಗಳೂರು ಜನತೆಯ ಪರವಾಗಿ ಪ್ರಧಾನಿ ಮೋದಿಗೆ ಅಭಿನಂದನೆ: ಆರ್.ಅಶೋಕ್
ಬೆಂಗಳೂರು: ಮೇ 10ರಂದು ಆಗಮಿಸುತ್ತಿರುವ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರಿಗೆ ಬೆಂಗಳೂರು ಜನತೆಯ ಪರವಾಗಿ ಅಭಿನಂದನೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ. ಬಿಜೆಪಿ ಕಾರ್ಯಾಲಯದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿ ಅಧಿಕಾರಕ್ಕೆ ಬರುತ್ತಿದೆ. ಮೋದಿ ಅವರ ಸಾಧನೆಗೆ ವಿಶ್ವವೇ ಕೊಂಡಾಡುತ್ತಿದೆ. 75 ವರ್ಷಗಳ ನಂತರ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸಾಧನೆ …
Read More »
Laxmi News 24×7