Breaking News

ಸಿಂದಗಿ ಪುರಸಭೆ ಸದಸ್ಯೆ ವಾಸಿಸಲು ಮನೆಯಿಲ್ಲ, ಉಪಜೀವನಕ್ಕೆ ಕೂಲಿ ಕೆಲಸ.

ಸಿಂದಗಿ (ವಿಜಯಪುರ ಜಿಲ್ಲೆ): ವಾಸಿಸಲು ಮನೆಯಿಲ್ಲ, ಉಪಜೀವನಕ್ಕೆ ಕೂಲಿ ಕೆಲಸ. ನಿತ್ಯ ಬೆಳಿಗ್ಗೆ ಸಿಕ್ಕರೆ ಕೂಲಿಗೆಲಸಕ್ಕೆ ಹೋಗುವುದು, ಇಲ್ಲದಿದ್ದರೆ ಗುಡಿಸಲಲ್ಲೇ ವಾಸ. ನೈವೇದ್ಯದ ಪ್ರಸಾದ ಅಥವಾ ಯಾರಾದರೂ ಆಹಾರ ಕೊಟ್ಟರೆ ಅದೇ ಊಟ. ಇಲ್ಲದಿದ್ದರೆ, ಉಪವಾಸ. ವೃದ್ಧಾಪ್ಯವೇತನ ಕೂಡ ಇತ್ತೀಚೆಗೆ ಅವರ ಕೈಸೇರಿಲ್ಲ…   ಇದು ವಿಜಯಪುರ ಜಿಲ್ಲೆ ಸಿಂದಗಿಯಲ್ಲಿರುವ 23ನೇ ವಾರ್ಡ್‌ನ ಪುರಸಭೆ ಕಾಂಗ್ರೆಸ್‌ ಸದಸ್ಯೆ ಮಹಾದೇವಿ ಭೀಮಶ್ಯಾ ನಾಯ್ಕೋಡಿ (80) ಅವರ ಸ್ಥಿತಿ. ಮಹಾದೇವಿ ನಾಯ್ಕೋಡಿ ಅವರನ್ನು …

Read More »

ಹಬ್ಬಕ್ಕೆ ಊರಿಗೆ ಹೊರಟವರಿಗೆ ಸಿಹಿ ಸುದ್ದಿ: KSRTCಯಿಂದ 2000 ಹೆಚ್ಚುವರಿ ಬಸ್

ಬೆಂಗಳೂರು: ಕೆಎಸ್‌ಆರ್‌ಟಿಸಿಯಿಂದ ಯುಗಾದಿ ಹಬ್ಬಕ್ಕೆ ಹೆಚ್ಚುವರಿ ಬಸ್ ಸೇವೆ ಒದಗಿಸಲಾಗುವುದು. ಸಾಲು ಸಾಲು ರಜೆ ಹಿನ್ನೆಲೆ ಊರಿಗೆ ಹೋಗುವವರ ಸಂಖ್ಯೆ ಹೆಚ್ಚಳವಾಗಿದೆ. ಹೀಗಾಗಿ 2000ಕ್ಕೂ ಅಧಿಕ ಬಸ್ ಗಳನ್ನು ರಸ್ತೆಗಿಳಿಸಲು ನಾಲ್ಕು ನಿಗಮಗಳು ನಿರ್ಧರಿಸಿವೆ. ಕೆಎಸ್‌ಆರ್ಟಿಸಿಯಿಂದ 1750 ಬಸ್, ವಾಯುವ್ಯ ಕರ್ನಾಟಕ 145, ಕಲ್ಯಾಣ ಕರ್ನಾಟಕ 200, ಬಿಎಂಟಿಸಿ 180 ವಿಶೇಷ ಬಸ್ ಗಳನ್ನು ಓಡಿಸಲಿದೆ. ನಾಲ್ಕು ನಿಗಮಗಳಿಂದ 2275 ಬಸ್ ಗಳನ್ನು ಓಡಿಸಲಾಗುವುದು. ಬೆಂಗಳೂರಿನಿಂದ ರಾಜ್ಯದ ವಿವಿಧ ಸ್ಥಳಗಳಿಗೆ, ಹೊರ …

Read More »

ಕುರುಡುಮಲೆ ದೇವಸ್ಥಾನದಿಂದ “ಪ್ರಜಾಧ್ವನಿ-2’ಕ್ಕೆ ನಾಳೆ ಚಾಲನೆ

ಬೆಂಗಳೂರು: ಕೋಲಾರ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಉಂಟಾದ ಗೊಂದಲದಿಂದ ಮುಂದೂಡಲ್ಪಟ್ಟಿದ್ದ ಕಾಂಗ್ರೆಸ್‌ನ ಲೋಕಸಭಾ ಚುನಾವಣ ಪ್ರಚಾರ ಕಾರ್ಯಕ್ರಮ ಶನಿವಾರ (ಎ. 6) ನಿಗದಿಯಾಗಿದ್ದು, ಅಂದು ಕುರುಡುಮಲೆ ದೇವಸ್ಥಾನದಿಂದ “ಪ್ರಜಾಧ್ವನಿ-2’ಕ್ಕೆ ಚಾಲನೆ ದೊರೆಯಲಿದೆ. ಅಂದು ಬೆಳಗ್ಗೆ 10.30ಕ್ಕೆ ಮುಳಬಾಗಿಲು ವಿಧಾನಸಭಾ ಕ್ಷೇತ್ರದಲ್ಲಿರುವ ಕುರುಡುಮಲೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವುದರೊಂದಿಗೆ ಚುನಾವಣ ಪ್ರಚಾರಕ್ಕೆ ಕೆಪಿಸಿಸಿ ಅಧಿಕೃತ ಚಾಲನೆ ನೀಡಲಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಪಕ್ಷದ ಹಿರಿಯ ನಾಯಕರು ಭಾಗವಹಿಸಲಿದ್ದಾರೆ. ಈ ಮೊದಲು …

Read More »

ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಪೋಸ್ಟ್‌; ಆಯೋಗಕ್ಕೆ ಜೊಲ್ಲೆ ದೂರು

ನಿಪ್ಪಾಣಿ: ತನ್ನ ಹೆಸರಿನಲ್ಲಿ ಕೆಲ ಕಿಡಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹಬ್ಬಿಸುತ್ತಿದ್ದಾರೆ ಎಂದು ಚಿಕ್ಕೋಡಿ ಲೋಕಸಭೆ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಕೇಂದ್ರ ಚುನಾವಣ ಆಯೋಗ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಇ-ಮೇಲ್‌ ಮೂಲಕ ದೂರು ದಾಖಲಿಸಿದ್ದಾರೆ. ತನಗೆ ದಲಿತ ಹಾಗೂ ಮುಸ್ಲಿಂ ಮತಗಳು ಬೇಡ ಎಂದು ಹೇಳಿದಂತೆ ತಿರುಚಿದ ಫೋಟೋ ಹಾಕಲಾಗಿದ್ದು, ವೈರಲ್‌ ಆಗಿದೆ. ಚುನಾವಣೆ ಹೊಸ್ತಿಲಲ್ಲಿ ನನ್ನ ವರ್ಚಸ್ಸು ಹಾಳು ಮಾಡಲು ಕಿಡಿಗೇಡಿಗಳು ಈ ದುಷ್ಕೃತ್ಯ ಎಸಗಿದ್ದಾರೆ ಎಂದು …

Read More »

ವಿಫ‌ಲ ಕೊಳವೆ ಬಾವಿ ಮುಚ್ಚಿದರೆ 500 ರೂ. ಬಹುಮಾನ: ಕೊಪ್ಪಳದ ರೈತನಿಂದ ಘೋಷಣೆ

ಗಂಗಾವತಿ: ಕೊಪ್ಪಳ ಜಿಲ್ಲೆಯಲ್ಲಿರುವ ನಿರುಪಯುಕ್ತ ತೆರೆದ ಕೊಳವೆ ಬಾವಿ ಮುಚ್ಚುವವರಿಗೆ 500 ರೂ. ಬಹುಮಾನ ನೀಡುವುದಾಗಿ ನಗರದ ರೈತ ಗ್ಯಾರೇಜ್‌ ಶಿವಣ್ಣ ಎಂಬವರು ಘೋಷಿಸುವ ಮೂಲಕ ಗಮನ ಸೆಳೆದಿದ್ದಾರೆ. ಕೊರೆಯಿಸಿದ ವಿಫ‌ಲ ಕೊಳವೆ ಬಾವಿಯನ್ನು ಮುಚ್ಚದಿದ್ದರೆ ಆಗುವ ಅನಾಹುತ ಗೊತ್ತಿದ್ದರೂ ಜನ ಅವುಗಳನ್ನು ಮುಚ್ಚಲು ಮುಂದಾಗುತ್ತಿಲ್ಲ. ಈ ಕುರಿತು ಬೀದಿ ನಾಟಕಗಳನ್ನು ಮಾಡಿದ್ದೇನೆ. ಆದರೂ ಜನ ಎಚ್ಚೆತ್ತುಕೊಂಡಿಲ್ಲ ಎಂದು ಅವರು ತಿಳಿಸಿದ್ದಾರೆ.

Read More »

ಮುಖ್ಯಮಂತ್ರಿ ಸೇರಿದಂತೆ ರಾಜ್ಯ ಕಾಂಗ್ರೆಸ್‌ ನಾಯಕರಿಗೆ ಎಚ್.ವಿಶ್ವನಾಥ್‌ರಿಂದ ಅಚ್ಚರಿಯ ಸಲಹೆ

ಮೈಸೂರು: ಕೆಲವು ದಿನಗಳ ಹಿಂದೆಯ ತನಕವೂ ಕಾಂಗ್ರೆಸ್ ನೊಂದಿಗೆ ಕಾಣಿಸಿಕೊಂಡು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಬಿಜೆಪಿ ಎಂಎಲ್ ಸಿ ಎಚ್ ವಿಶ್ವನಾಥ್ ಅವರು ಇದೀಗ ರಾಜಕೀಯ ವರಸೆ ಬದಲಿಸಿರುವುದು ಗೋಚರಿಸಿದೆ. ಇದೀಗ ಮಾತನಾಡಿರುವ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ರಾಜಕೀಯ ಪಕ್ಕಕ್ಕಿಟ್ಟು ಮೈಸೂರಿನ ಯದುವಂಶದ ಕುಡಿಯನ್ನು ಪಕ್ಷಾತೀತವಾಗಿ, ಅವಿರೋಧವಾಗಿ ಆಯ್ಕೆ ಮಾಡಿ ಎಂಬ ಸಲಹೆ ನೀಡಿದ್ದಾರೆ. ವಿಶ್ವನಾಥ್ ಅವರ ಈ ನಡೆ ಇದೀಗ …

Read More »

ಕುಮಾರಸ್ವಾಮಿ ಆಸ್ತಿ ಮೌಲ್ಯ 219 ಕೋಟಿ ರೂ.; ಮಾಜಿ ಸಿಎಂ ಬಳಿ ಸ್ವಂತ ಕಾರು ಇಲ್ಲ!

ಮಂಡ್ಯ: ಮಂಡ್ಯ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಿದ ಎಚ್.ಡಿ.ಕುಮಾರಸ್ವಾಮಿ ಪ್ರಮಾಣ ಪತ್ರದಲ್ಲಿ ಒಟ್ಟು 219 ಕೋಟಿ ರೂ.ಆಸ್ತಿ ಘೋಷಣೆ ಮಾಡಿಕೊಂಡಿದ್ದು, ಚರಾಸ್ತಿ, ಸ್ಥಿರಾಸ್ತಿ ಎರಡರಲ್ಲೂ ಕುಮಾರಸ್ವಾಮಿಗಿಂತ ಪತ್ನಿ ಅನಿತಾ ಕುಮಾರಸ್ವಾಮಿ ಹೆಚ್ಚು ಶ್ರೀಮಂತರಾಗಿದ್ದಾರೆ. ಕುಮಾರಸ್ವಾಮಿ ಬಳಿ 10.41 ಕೋಟಿ ರೂ. ಹಾಗೂ ಅನಿತಾ ಅವರ ಬಳಿ 90.32 ಕೋಟಿ ರೂ. ಚರಾಸ್ತಿ ಇದೆ. ಕುಮಾರಸ್ವಾಮಿ ಅವರ ಹಿಂದೂ ಅವಿಭಕ್ತ ಕುಟುಂಬದ ಆಸ್ತಿಯಾಗಿ 1.20 ಕೋಟಿ ರೂ. …

Read More »

ರಾಜ್ಯದಲ್ಲಿ ಮೊದಲ ಹಂತದ ನಾಮಪತ್ರ ಸಲ್ಲಿಕೆ ಅಂತ್ಯ : ಪ್ರಚಾರ ಅಬ್ಬರ ಶುರು

ಬೆಂಗಳೂರು,- ಪ್ರಸಕ್ತ ಲೋಕಸಭಾ ಸಾರ್ವತ್ರಿಕ ಚುನಾವಣೆಯ ರಾಜ್ಯದ ಮೊದಲ ಹಂತದ 14 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಇಂದು ಮುಕ್ತಾಯವಾಗಿದ್ದು, ರಾಜಕೀಯ ಪಕ್ಷಗಳ ಪ್ರಚಾರದ ಅಬ್ಬರ ಪ್ರಾರಂಭವಾಗಿದೆ.ನಾಮಪತ್ರ ಸಲ್ಲಿಕೆಗೆ ಕಡೆ ದಿನವಾದ ಇಂದು ಬಹುತೇಕ ಎಲ್ಲಾ ಅಭ್ಯರ್ಥಿಗಳು ತನ್ನ ಉಮೇದುವಾರಿಕೆಯನ್ನು ಸಲ್ಲಿಸಿದರು.

Read More »

ಎಲ್ಲರ ಮನಗೆದ್ದ ಸುಪ್ರೀಂ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್- ಹಿರಿಯ ವಕೀಲ ದ್ವಿವೇದಿ ಜುಗಲ್ ಬಂದಿ

ನವದೆಹಲಿ,- ಹಿರಿಯ ವಕೀಲ ದಿನೇಶ್ ದ್ವಿವೇದಿ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಸುಪ್ರೀಂ ಕೋರ್ಟ್ನಲ್ಲಿ ನಡೆಸಿರುವ ಮಾತಿನ ಸಂಭಾಷಣೆ ಎಲ್ಲರ ಮನಗೆದ್ದಿದೆ. ಕೋರ್ಟ್ ಹಾಲ್ಗೆ ಬಂದ ಹಿರಿಯ ವಕೀಲ ದ್ವಿವೇದಿ ಅವರು ನನ್ನ ಬಣ್ಣ ಬಣ್ಣದ ಕೂದಲಿಗೆ ಹೋಳಿ ಹಬ್ಬ ಕಾರಣ.ನನಗೆ ಮಕ್ಕಳು, ಮೊಮ್ಮಕ್ಕಳು ಹೆಚ್ಚಾಗಿರುವುದರಿಂದ ಅವರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ವಿಷಾದಿಸುತ್ತೇನೆ ಎನ್ನುತ್ತಾರೆ.

Read More »

ತೆಲಂಗಾಣ ಔಷಧ ಘಟಕ ಸ್ಫೋಟ

ಹೈದರಾಬಾದ್: ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಔಷಧ ಕಂಪನಿ ಘಟಕದ ರಾಸಾಯನಿಕ ರಿಯಾಕ್ಟರ್‌ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಜಿಲ್ಲೆಯ ಹತ್ತನೂರ ಮಂಡಲದ ಚಂದಾಪುರ ಗ್ರಾಮದಲ್ಲಿರುವ ಎಸ್‌ಬಿ ಆರ್ಗಾನಿಕ್ಸ್ ಲಿಮಿಟೆಡ್‌ನ ಕಾರ್ಖಾನೆಯಲ್ಲಿ ಬುಧವಾರ ಸಂಭವಿಸಿದ ಸ್ಫೋಟದಲ್ಲಿ ನಾಲ್ವರು ಮೃತಪಟ್ಟಿದ್ದು, 16 ಮಂದಿ ಗಾಯಗೊಂಡಿದ್ದರು. ಗುರುವಾರ ಕಾರ್ಖಾನೆಯ ಆವರಣದಲ್ಲಿ ಅವಶೇಷಗಳಡಿ ಒಬ್ಬ ಕಾರ್ಮಿಕನ ಶವ ಪತ್ತೆಯಾಗಿದ್ದು, ಗಾಯಗೊಂಡಿದ್ದ ಮತ್ತೊಬ್ಬ ವ್ಯಕ್ತಿ ಬುಧವಾರ ರಾತ್ರಿ ಸಾವನ್ನಪ್ಪಿದ್ದಾರೆ. ಮೃತಪಟ್ಟವರಲ್ಲಿ …

Read More »