Breaking News

ಬರ ಪರಿಹಾರದ ಬಗ್ಗೆ ಗೊಂದಲ ಬೇಡ – ಎಲ್ಲ ಅರ್ಹ ರೈತರಿಗೂ 5,000 ರೂ. ನೆರವು: ಸಿಎಂ ಸ್ಪಷ್ಟನೆ

Spread the love

ಬೆಂಗಳೂರು: ಬರ ಪರಿಹಾರದ ಬಗ್ಗೆ ಗೊಂದಲ ಬೇಡ. ಎಲ್ಲ ಅರ್ಹ ರೈತರಿಗೂ 5,000 ರೂ. ನೆರವು ನೀಡಲಾಗುವುದು ಎಂದು ಸಿಎಂ ಡಿ.ಕೆ.ಶಿವಕುಮಾರ್‌ ಸ್ಪಷ್ಟಪಡಿಸಿದ್ದಾರೆ.

ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಸಿಎಂ, ರಾಜ್ಯದ ರೈತ ಬಾಂಧವರಲ್ಲಿ ಬರ ಪರಿಹಾರದ ಕುರಿತು ಯಾವುದೇ ಗೊಂದಲ ಬೇಡ. ಮೊದಲ ಕಂತಿನಲ್ಲಿ ಬಿಡುಗಡೆಯಾಗಿರುವ ಹಣವೇ ಅಂತಿಮವಲ್ಲ. SDRF/NDRF ನಿಯಮಗಳಡಿ ಮಳೆಯಾಶ್ರಿತ, ನೀರಾವರಿ ಹಾಗೂ ಬಹುವಾರ್ಷಿಕ ಬೆಳೆಗಳಿಗೆ ಕ್ರಮವಾಗಿ ₹1,500, ₹2,600 ಮತ್ತು ₹3,200 ಕನಿಷ್ಠ ಪರಿಹಾರ ನಿಗದಿಯಾಗಿದೆ. ಆದರೆ, ರಾಜ್ಯ ಸರ್ಕಾರ ಈ ಮೂರೂ ವರ್ಗದ ಬೆಳೆಗಳಿಗೂ ಕನಿಷ್ಠ ₹5,000 ಬರ ಪರಿಹಾರ ನೀಡಲಿದೆ. ಈ ಹೆಚ್ಚುವರಿ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ.

ಮೊದಲ ಕಂತಿನಲ್ಲಿ ₹2,000 ಅಥವಾ ₹2,500 ಪಡೆದ ರೈತರಿಗೆ ಬಾಕಿ ಹಣ ಮುಂದಿನ ಕಂತಿನಲ್ಲಿ ಪಾವತಿಯಾಗಲಿದೆ. ಅರ್ಹ ರೈತರು ಬೆಳೆ ನಷ್ಟದ ಆಧಾರದ ಮೇಲೆ ₹60,000ವರೆಗೆ ಇನ್‌ಪುಟ್ ಸಬ್ಸಿಡಿ ನೆರವನ್ನು ಪಡೆಯಬಹುದು. ರೈತರಿಗೆ ಪೂರ್ಣ ಪರಿಹಾರ ತಲುಪಿಸಲು ಸರ್ಕಾರ ಬದ್ಧವಾಗಿದ್ದು, ತಪ್ಪು ಮಾಹಿತಿ, ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸಿಎಂ ಸಲಹೆ ನೀಡಿದ್ದಾರೆ.


Spread the love

About Laxminews 24x7

Check Also

ಬೆಂಗಳೂರಲ್ಲಿ ದೀಪಾವಳಿ ಪಟಾಕಿ ಅವಘಡ; ಪಟಾಕಿ ಸಿಡಿದು ಗಂಭೀರ ಗಾಯಗೊಂಡ ಗರ್ಭಿಣಿ

Spread the loveಬೆಂಗಳೂರು: ನಗರದಲ್ಲಿ ದೀಪಾವಳಿ ಪಟಾಕಿ ಅವಘಡಕ್ಕೆ ಇಂದು ಕೂಡ 80 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪಟಾಕಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ