Home / ಅಂತರಾಷ್ಟ್ರೀಯ / ಕಾನ್ಫರೆನ್ಸ್​ ಮೂಲಕ ಈ ಸಭೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಗಾಲ್ವಾನ್​ ಕಣಿವೆಯಲ್ಲಿ ಭಾರತದ 20 ಸೈನಿಕರು

ಕಾನ್ಫರೆನ್ಸ್​ ಮೂಲಕ ಈ ಸಭೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಗಾಲ್ವಾನ್​ ಕಣಿವೆಯಲ್ಲಿ ಭಾರತದ 20 ಸೈನಿಕರು

Spread the love

ನವದೆಹಲಿ : ಲಡಾಖ್ ಬಳಿಯ ಗಾಲ್ವಾನ್ ಕಣಿವೆಯಲ್ಲಿ ಕಳೆದ ಸೋಮವಾರ ಮತ್ತು ಮಂಗಳವಾರ ನಡೆದ ಸಂಘರ್ಷದಲ್ಲಿ ಚೀನಾ ಮತ್ತು ಭಾರತದ ಅನೇಕ ಸೈನಿಕರು ಪ್ರಾಣ ತೆತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಎರಡೂ ದೇಶಗಳ ಗಡಿ ಬಿಕ್ಕಟ್ಟಿನ ಬಗ್ಗೆ ಚರ್ಚಿಸಲು ಶಕ್ರವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ವಪಕ್ಷಗಳ ಸಭೆ ನಡೆಸಿದ್ದಾರೆ. ವಿಡಿಯೋ ಕಾನ್ಫರೆನ್ಸ್​ ಮೂಲಕ ಈ ಸಭೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಗಾಲ್ವಾನ್​ ಕಣಿವೆಯಲ್ಲಿ ಭಾರತದ 20 ಸೈನಿಕರು ಹುತಾತ್ಮರಾಗಿದ್ದು ಗುಪ್ತಚರ ಇಲಾಖೆಯ ವೈಫಲ್ಯದ ಫಲವೇ? ಎಂದು ಪ್ರಧಾನಿಯನ್ನು ಪ್ರಶ್ನಿಸಿದ್ದಾರೆ. ಹಾಗೇ, ಗಡಿಯಲ್ಲಿ ನಿಜವಾಗಲೂ ಏನು ನಡೆಯುತ್ತಿದೆ ಎಂಬ ವಾಸ್ತವದ ಮಾಹಿತಿ ನೀಡಿ ಎಂದು ಕೇಳಿದ್ದಾರೆ.

ಎಲ್​ಎಸಿಯಲ್ಲಿನ ವಾಸ್ತವ ಪರಿಸ್ಥಿತಿಯ ಮಾಹಿತಿ ನಮಗೆ ಬೇಕಾಗಿದೆ. ಈ ರೀತಿಯ ಹಲವು ವಿಚಾರಗಳಲ್ಲಿ ನಮ್ಮನ್ನು ಕತ್ತಲಿನಲ್ಲಿಡಲಾಗಿದೆ. ಚೀನಾ ಸೈನಿಕರು ಭಾರತದ ಗಡಿಯೊಳಗೆ ನುಸುಳಿದ್ದರಿಂದ ಈ ಸಂಘರ್ಷ ನಡೆದಿದೆ. ಇದು ಗುಪ್ತಚರ ಇಲಾಖೆಯ ವೈಫಲ್ಯ ಎಂದು ಕಾಂಗ್ರೆಸ್‍ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪಿಸಿದ್ದಾರೆ. ಹಾಗೇ, ಚೀನಾ ಗಡಿ ವಿಚಾರ ಹಾಗೂ ಅವರನ್ನು ಹತ್ತಿಕ್ಕುವ ವಿಚಾರದಲ್ಲಿ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ಕಾಂಗ್ರೆಸ್​ನ ಬೆಂಬಲವಿದೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.

ಸದ್ಯಕ್ಕೆ ನಮ್ಮ ಮುಂದಿರುವ ಅತಿದೊಡ್ಡ ಪ್ರಶ್ನೆ ಮುಂದೇನು? ಎಂಬುದು. ನಮ್ಮ ಮಂದಿರುವ ಸದ್ಯದ ಮಾರ್ಗಗಳು ಯಾವುವು? ಚೀನಾ-ಭಾರತ ಮೊದಲಿನ ಸ್ಥಿತಿಗೆ ಬರಬೇಕು, ಗಡಿಯಲ್ಲಿ ಪರಿಸ್ಥಿತಿ ಸುಧಾರಿಸಬೇಕು ಎಂಬ ಬಗ್ಗೆ ದೇಶದ ಜನರು ನಿಮ್ಮಿಂದ ಭರವಸೆಯನ್ನು ಬಯಸುತ್ತಿದ್ದಾರೆ. ಈ ಸರ್ವಪಕ್ಷಗಳ ಸಭೆ ಇದಕ್ಕೂ ಮೊದಲೇ ನಡೆಯಬೇಕಾಗಿತ್ತು. ಚೀನಾ ಮೇ 5ರಂದೇ ಲಡಾಖ್‌ ಸೇರಿ ದೇಶದ ಇತರ ಭಾಗಗಳಲ್ಲಿ ಒಳನುಗ್ಗಿದಾಗ ಸರ್ಕಾರಕ್ಕೆ ಈ ಬಗ್ಗೆ ಮಾಹಿತಿ ನೀಡಲಾಗಿತ್ತು ಎಂಬ ವರದಿಗಳಿವೆ. ಇದಾದ ತಕ್ಷಣ ಈ ಸಭೆ ನಡೆಯಬೇಕಿತ್ತು. ಮೇ 5ರಿಂದ ಜೂನ್ 6ರವರೆಗೆ ಬಹಳ ಅಮೂಲ್ಯವಾದ ಸಮಯವನ್ನು ನೀವು ವ್ಯಯ ಮಾಡಿಕೊಂಡಿದ್ದೀರಿ. ಕಮ್ಯಾಂಡರ್​ಗಳ ಜೊತೆ ಸಭೆ ನಡೆಸಿದ ತಕ್ಷಣವೇ ಕ್ರಮಗಳನ್ನು ಕೈಗೊಳ್ಳಬೇಕಿತ್ತು ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.

ನಮ್ಮ ನಿರ್ಲಕ್ಷ್ಯದ ಫಲವಾಗಿ ನಾವು 20 ಸೈನಿಕರನ್ನು ಕಳೆದುಕೊಂಡಿದ್ದೇವೆ. ಡಜನ್​ಗಟ್ಟಲೆ ಸೈನಿಕರು ಗಾಯಗೊಂಡಿದ್ದಾರೆ. ಹೀಗಾಗಿ, ಏಪ್ರಿಲ್ ಬಳಿಕ ಚೀನಾ ಗಡಿ ವಿಚಾರದಲ್ಲಿ ನಡೆದ ಎಲ್ಲ ಬೆಳವಣಿಗೆಗಳ ಬಗ್ಗೆ ಪ್ರಧಾನಿ ಮೋದಿ ಮಾಹಿತಿ ನೀಡಬೇಕು ಎಂದು ನಾನು ಆಗ್ರಹಿಸುತ್ತೇನೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ. ಲಡಾಖ್‌ನಲ್ಲಿರುವ ನಮ್ಮ ಭೂಪ್ರದೇಶಕ್ಕೆ ಚೀನಾದ ಸೈನ್ಯವು ಯಾವ ದಿನ ಒಳನುಗ್ಗಿತು? ನಮ್ಮ ಭೂಪ್ರದೇಶಕ್ಕೆ ಚೀನಾದ ಅತಿಕ್ರಮಣಗಳ ಬಗ್ಗೆ ಸರ್ಕಾರಕ್ಕೆ ತಿಳಿದಿದ್ದು ಯಾವಾಗ? ನಮ್ಮ ದೇಶದ ಗಡಿಗಳ ಸ್ಯಾಟಲೈಟ್ ಚಿತ್ರಗಳು ಸರ್ಕಾರಕ್ಕೆ ತಲುಪುತ್ತಿಲ್ಲವೇ? ಎಂದು ಅವರು ಪ್ರಶ್ನೆ ಮಾಡಿದ್ದಾರೆ.


Spread the love

About Laxminews 24x7

Check Also

ಬುಧವಾರದಂದು ಪ್ರಧಾನಿಗಳು ಆಗಮಿಸುವ ಸ್ಥಳವನ್ನು ಪರಿಶೀಲಿಸಿದ : ಬಾಲಚಂದ್ರ & ರಮೇಶ್ ಜಾರಕಿಹೊಳಿ

Spread the loveಬೆಳಗಾವಿ- ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಪ್ರಚಾರಾರ್ಥವಾಗಿ ಬೆಳಗಾವಿಗೆ ಬರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ