Breaking News

ನೂತನ ವಂದೇ ಭಾರತ ರೈಲಿಗೆ ಸಂಸದ ಶೆಟ್ಟರ ಆಗ್ರಹ

Spread the love

ಬೆಳಗಾವಿ: ಬೆಂಗಳೂರು-ಬೆಳಗಾವಿ-ಮುಂಬೈ ನಡುವೆ ಸ್ಲೀಪರ್ ವಂದೇ ಭಾರತ ರೈಲು ಸಂಚಾರ ಆರಂಭಿಸುವಂತೆ ಆಗ್ರಹಿಸಿ ಸಂಸದ ಜಗದೀಶ ಶೆಟ್ಟರ ದೆಹಲಿಯಲ್ಲಿ ಮಂಗಳವಾರ  ಕೇಂದ್ರ ರೇಲ್ವೆ ಸಚಿವ ಅಶ್ವಿನಿ ವೈಷ್ಣವೆ ಭೇಟಿಯಾಗಿ ಮನವಿ ಸಲ್ಲಿಸಿದರು.
ಬೆಳಗಾವಿ ನಗರವು ಅತೀ ವೇಗದಿಂದ ಬೆಳೆಯುತ್ತಿದೆ. ಬೆಂಗಳೂರು ನಂತರ ಎರಡನೆಯ ರಾಜಧಾನಿ ಎಂದು ಪರಿಗಣಿಸಲ್ಪಡುವ ನಗರ, ಶಿಕ್ಷಣ, ಉದ್ಯಮಿಕರಣ, ಆರೋಗ್ಯ ಸೇವೆ, ಕೃಷಿ ಇತ್ಯಾದಿ ರಂಗದಲ್ಲಿ ಸಾಕಷ್ಟು ಪ್ರಗತಿ ಸಾಧಿಸುತ್ತಲ್ಲಿದೆ. ಈ ಮಾರ್ಗದಲ್ಲಿ ಸ್ಲೀಪರ್ ವಂದೇ ಭಾರತ ರೈಲು ಸಂಚಾರ ಪ್ರಾರಂಭಿಸಿದಲ್ಲಿ ಬೆಳಗಾವಿ ಸುತ್ತಮುತ್ತಲಿನ ತಾಲೂಕುಗಳ ಹಾಗೂ ಇತರೆ ಜಿಲ್ಲೆಗಳ ಅಭಿವೃದ್ಧಿಗೆ ಸಹಾಯಕಾರಿಯಾಗಲಿದೆ ಎಂದು ಮನವಿನಲ್ಲಿ ಕೇಳಿದ್ದಾರೆ.
ಮುಂಬೈ ನಗರವನ್ನು ಅತ್ಯಂತ ಅಲ್ಪಾವಧಿ ಸಮಯದಲ್ಲಿ ತಲುಪುವುದರಿಂದ ಹಲವು ಪ್ರದೇಶಗಳ ಆರ್ಥಿಕ ಬೆಳವಣಿಗೆಗೆ ಅನುಕೂಲಕರವಾಗಲಿದೆ. ಅಲ್ಲದೇ ಈ ರೈಲು ಉತ್ತರ ಕರ್ನಾಟಕದ ಹೆಚ್ಚಿನ ಪ್ರದೇಶದಲ್ಲಿ ಸಂಚರಿಸುವುದರಿಂದ ಪ್ರಾದೇಶಿಕ ಸಮತೋಲನ ಕಾಪಾಡುವಲ್ಲಿ ಸಹಕಾರಿಯಾಗಲಿದೆ ಮತ್ತು ಉತ್ತರ ಕರ್ನಾಟಕದ ಬಹು ಜನರ ಬೇಡಿಕೆ ಸಹ ಇದಾಗಿದೆ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.
ಈ ಮಾರ್ಗದಲ್ಲಿ ಸ್ಲೀಪರ್ ವಂದೇ ಭಾರತ ರೈಲು ಸಂಚರಿಸುವ ವಿಷಯವನ್ನು ಮುಂಬರುವ ದಿನಗಳಲ್ಲಿ ಅಗತ್ಯತೆ ಮೇರೆಗೆ  ಪರಿಗಣಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Spread the love

About Laxminews 24x7

Check Also

ಎಲ್ ನಿನೋ ಎಫೆಕ್ಟ್ – ರಾಜ್ಯದ 25 ಜಿಲ್ಲೆಗಳಲ್ಲಿ ಮಳೆ ಕೊರತೆ

Spread the loveಬೆಂಗಳೂರು: ಎಲ್‌ನಿನೋ ಎಫೆಕ್ಟ್‌ನಿಂದ ರಾಜ್ಯದಲ್ಲಿ ಮಳೆ ಕೊರತೆಯಾಗಿದೆ. ದಕ್ಷಿಣ ಕನ್ನಡ, ಮೈಸೂರು, ಕೊಡಗು, ಉತ್ತರ ಕನ್ನಡ, ಉಡುಪಿ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ