ಚಿಕ್ಕಮಗಳೂರು: ನಗರದ ಹೊರವಲಯದಲ್ಲಿ ನಕಲಿ ತುಪ್ಪ ಪತ್ತೆಯಾದ ಬೆನ್ನಲ್ಲೇ ಇದೀಗ ನಕಲಿ ಜೇನು ತುಪ್ಪ ಕೂಡ ಪತ್ತೆಯಾಗಿದೆ. ಜೇನುಗೂಡನ್ನ ಬೆಲ್ಲದ ಪಾಕದಲ್ಲಿ ನೆನೆ ಹಾಕುವಾಗ ಸ್ಥಳಿಯರ ಕೈಗೆ ರೆಡ್ ಹ್ಯಾಂಡ್ ಆಗಿ ವ್ಯಾಪಾರಿಗಳು ಸಿಕ್ಕಿಬಿದ್ದಿದ್ದಾರೆ.
ಚಿಕ್ಕಮಗಳೂರು ನಗರದ ಹೊರಹೊಲಯದ ವಾಜಪೇಯಿ ಲೇಔಟ್ನ ನಿರ್ಜನ ಪ್ರದೇಶದಲ್ಲಿ ಜೇನುಗೂಡಿಗೆ ಬೆಲ್ಲದ ಪಾಕ ಮಿಕ್ಸ್ ಮಾಡುವಾಗ ಸ್ಥಳಿಯರ ಕೈಗೆ ವ್ಯಾಪಾರಿಗಳು ಲಾಕ್ ಆಗಿದ್ದಾರೆ. ಸರ್ಕಾರಿ ಕಚೇರಿಗಳು ಹಾಗೂ ದೊಡ್ಡ-ದೊಡ್ಡ ಕಟ್ಟಡಗಳನ್ನೇ ಬಂಡವಾಳ ಮಾಡಿಕೊಂಡ ಕಿಡಿಗೇಡಿಗಳು ಬಿಲ್ಡಿಂಗ್ನಲ್ಲಿ ಕಟ್ಟಿರೋ ಜೇನುಗೂಡನ್ನ ತೆಗೆದು ಜನರನ್ನ ನಂಬಿಸಲು ಅಲ್ಲೇ ಜೇನುತುಪ್ಪವನ್ನ ಕೊಡುತ್ತಾರೆ. ಬಳಿಕ ಅದೇ ಗೂಡನ್ನ ತಂದು ಯಾರೂ ಇಲ್ಲದ ಜಾಗದಲ್ಲಿ ಬೆಲ್ಲದ ಪಾಕ ಮಿಕ್ಸ್ ಮಾಡಿ ಬಳಿಕ ಅದನ್ನೇ ಅಸಲಿ ಜೇನು ಎಂದು ಮಾರಾಟ ಮಾಡುತ್ತಿದ್ದರು.
ಮೂವರನ್ನ ರೆಡ್ಹ್ಯಾಂಡ್ ಆಗಿ ಹಿಡಿದಿರೋ ಸ್ಥಳೀಯರು ಎಲ್ಲಿಯವರು ಎಂದು ಕೇಳಿದಾಗ ಅಸ್ಸಾಂನವರು ಎಂದು ಹೇಳಿದ್ದಾರೆ. ಆದರೆ, ಅವರನ್ನ ಗಮನಿಸಿದರೆ ಅವರು ಅಸ್ಸಾಂನವರಲ್ಲ. ಅಕ್ರಮ ಬಾಂಗ್ಲಾ ನಿವಾಸಿಗಳು ಎಂದು ಸ್ಥಳಿಯರು ಆರೋಪಿಸಿದ್ದಾರೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Laxmi News 24×7