ಯಾದಗಿರಿ: ಕಾಲುವೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಶುಕ್ರವಾರ ಯಾದಗಿರಿ ಬಂದ್ಗೆ ಕರೆ ನೀಡಲಾಗಿದೆ.
ಬಸವಸಾಗರ ಡ್ಯಾಂನ ) ನೀರಿಗಾಗಿ ಹೋರಾಟ ನಡೆಯಲಿದ್ದು, ಮಾಜಿ ಸಚಿವ ರಾಜೂಗೌಡ ನೇತೃತ್ವದಲ್ಲಿ ಬಂದ್ಗೆ ಕರೆ ಕೊಡಲಾಗಿದೆ. ಯಾದಗಿರಿ ಜಿಲ್ಲೆಯಾದ್ಯಂತ ಬಂದ್ನ ಬಿಸಿ ಮುಟ್ಟುವ ಸಾಧ್ಯತೆಯಿದೆ. ನಾರಾಯಣಪುರದ ಎಡದಂಡೆ & ಬಲದಂಡೆಯ ಕಾಲುವೆಗಳಿಗೆ ನ.30ರವರೆಗೆ ನಿರಂತರವಾಗಿ ನೀರು ಬಿಡುವಂತೆ ಒತ್ತಾಯಿಸಿ ಹೋರಾಟ ನಡೆಯಲಿದೆ.

ಯಾದಗಿರಿ ಸರ್ವ ಸಂಘಟನೆಗಳೊಂದಿಗೆ ಹೋರಾಟ ನಡೆಯಲಿದ್ದು, ರೈತರ ಹಿತಕ್ಕಾಗಿ ಸಹಕರಿಸುವಂತೆ ರಾಜೂಗೌಡ ಮನವಿ ಮಾಡಿದ್ದಾರೆ. ಗ್ರಾಹಕರು, ಅಂಗಡಿ ಮುಗ್ಗಟ್ಟು ಮಾಲೀಕರು ಸ್ವಯಂ ಪ್ರೇರಿತವಾಗಿ ಬಂದ್ಗೆ ಬೆಂಬಲಿಸುವಂತೆ ಮನವಿ ಮಾಡಲಾಗಿದೆ.
Laxmi News 24×7