Breaking News

ಅನುಷ್ಕಾ ಶರ್ಮಾ ಹಾಟ್ ಫೋಟೋಗಳಿಗೆ ಕೊಹ್ಲಿ ರಿಯಾಕ್ಷನ್..!

Spread the love

ಮುಂಬೈ: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮದುವೆ ಬಳಿಕವೂ ಸಿನಿಮಾಗಳಿಂದ ದೂರವೇ ಉಳಿದ್ದರೂ ತಮ್ಮ ಹಾಟ್ ಫೋಟೋಶೂಟ್ ಸಾಕಷ್ಟು ಸುದ್ದಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿರುವ ಅನುಷ್ಕಾ ಅಭಿಮಾನಿಗಳೊಂದಿಗೆ ತಮ್ಮ ಹೊಸ ಫೋಟೋಶೂಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ಅನುಷ್ಕಾ ಶರ್ಮಾ ವೋಗ್ ಇಂಡಿಯಾಗಾಗಿ ಫೋಟೋಶೂಟ್ ಮಾಡಿದ್ದು, ಈ ಫೋಟೋವೊಂದನ್ನು ತಮ್ಮ ಇನ್‍ಸ್ಟಾದಲ್ಲಿ ಪೋಸ್ಟ್ ಮಾಡಿದ್ದರು. ಈ ಫೋಟೋ ಅನುಷ್ಕಾ ಪತಿ ವಿರಾಟ್ ಕೊಹ್ಲಿ ಕೂಡ ಪ್ರತಿಕ್ರಿಯೆ ನೀಡಿ ಕಾಮೆಂಟ್ ಮಾಡಿದ್ದು, ಹಾರ್ಟ್ ಸಿಂಬಲ್ ಇಮೋಜಿ ಹಾಕುವ ಮೂಲಕ ಮೆಚ್ಚುಗೆ ಸೂಚಿಸಿದ್ದ

32 ವರ್ಷದ ಅನುಷ್ಕಾ ಶರ್ಮಾ ‘ಝೀರೋ’ ಸಿನಿಮಾದಲ್ಲಿ ಅಂತಿಮವಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದರು. ಆ ಬಳಿಕ ‘ಅಂಗ್ರೇಜಿ ಮಿಡಿಯಂ’ನಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಮದುವೆ ಬಳಿಕ ನಟನೆಯಿಂದ ದೂರವೇ ಉಳಿದಿರುವ ಅನುಷ್ಕಾ ನಿರ್ಮಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದಂತೆ ಅನುಷ್ಕಾ ಲೀಡ್ ರೋಲ್‍ನಲ್ಲಿ ಕಾಣಿಸಿಕೊಳ್ಳುತ್ತಿರುವ ಹೊಸ ಸಿನಿಮಾ ಇನ್ನಷ್ಟೇ ಅಧಿಕೃತವಾಗಿ ಘೋಷಣೆಯಾಬೇಕಿದೆ.

ಮದುವೆ ಬಳಿಕ ನಿರ್ಮಾಪಕರಾಗಿ ಬದಲಾಗಿರುವ ಅನುಷ್ಕಾ ಶರ್ಮಾ, ‘ಕ್ಲೀನ್ ಸ್ಲೇಟ್ ಫಿಲ್ಮ್ಸ್’ ಮೂಲಕ ‘ಪಾತಾಳ್ ಲೋಕ್’ ಮತ್ತು ‘ಬುಲ್‍ಬುಲ್’ ಎಂಬ ವೆಬ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. ಅಲ್ಲದೇ ಉತ್ತಮ ಪ್ರಚಾರವನ್ನು ಪಡೆದಿದ್ದ ಅನುಷ್ಕಾ ಶರ್ಮಾ ನಿರ್ಮಾಣದ ಸಿನಿಮಾಗಳಿಗೆ ವಿಮರ್ಶಕರು ಮತ್ತು ಅಭಿಮಾನಿಗಳಿಂದ ಸಾಕಷ್ಟು ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು.

ಕೊರೊನಾ ಅನ್‍ಲಾಕ್ ನಡುವೆಯೂ ಅನುಷ್ಕಾ ವೋಗ್ ಇಂಡಿಯಾ ಫೋಟೋಶೂಟ್‍ನಲ್ಲಿ ಭಾಗಿಯಾಗಿದ್ದಾರೆ. ಇತ್ತೀಚೆಗೆ ಲಾಕ್‍ಡೌನ್ ಸಂದರ್ಭದ ಕುರಿತು ಇನ್‍ಸ್ಟಾ ಲೈವ್‍ನಲ್ಲಿ ಮಾತನಾಡಿದ್ದ ಕೊಹ್ಲಿ, ಮದುವೆ ಬಳಿಕ ಒಂದೇ ಸ್ಥಳದಲ್ಲಿ ಇಷ್ಟು ದಿನಗಳನ್ನು ನಾವಿಬ್ಬರೂ ಒಟ್ಟಿಗೆ ಕಳೆದಿದ್ದೇವೆ. ಇದು ನಿಜಕ್ಕೂ ಅಚ್ಚರಿ ವಿಚಾರವಾದರೂ ಸಾಕಷ್ಟು ಸಂತಸ ತಂದಿದೆ. ಅಲ್ಲದೇ ಎಚ್ಚರಿಕೆಯಿಂದಲೂ ಇದ್ದೇವೆ ಎಂದು ಕೊಹ್ಲಿ ಹೇಳಿದ್ದರು….

 


Spread the love

About Laxminews 24x7

Check Also

ಮೂರು ಮಕ್ಕಳ ತಾಯಿಯನ್ನು ಕತ್ತು ಸೀಳಿ ಕೊಂದ ಪ್ರಿಯಕರ

Spread the loveದಾವಣಗೆರೆ: ವ್ಯಕ್ತಿಯೊಬ್ಬ ಪ್ರಿಯತಮೆಯ ಕತ್ತು ಸೀಳಿ ಹತ್ಯೆಗೈದ  ಘಟನೆ ದಾವಣಗೆರೆಯ  ಶೇಖರಪ್ಪ ನಗರದಲ್ಲಿ ನಡೆದಿದೆ. ನಾಗರತ್ನ (45) …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ