Breaking News

ಗಣರಾಜ್ಯೋತ್ಸವ ಪರೇಡ್‌ಗೆ ಮೊದಲ ಮಹಿಳಾ ಫೈಟರ್‌ ಪೈಲಟ್‌!

Spread the love

ಹೊಸದಿಲ್ಲಿ: ಗಣರಾಜ್ಯೋತ್ಸವ ಪರೇಡ್‌ನ‌ಲ್ಲಿ ಪಾಲ್ಗೊಳ್ಳುತ್ತಿರುವ “ಪ್ರಪ್ರಥಮ ಮಹಿಳಾ ಫೈಟರ್‌ ಪೈಲಟ್‌’ ಎಂಬ ಹೆಗ್ಗಳಿಕೆಗೆ ಫ್ಲೈಟ್‌ ಲೆಫ್ಟಿನೆಂಟ್‌ ಭಾವನಾ ಕಾಂತ್‌ ಪಾತ್ರರಾಗಿದ್ದಾರೆ.

ಜ. 26ರಂದು ಐಎಎಫ್ನ ಟ್ಯಾಬ್ಲೊ ಜತೆ ಅವರು ಸಂಚರಿಸಲಿದ್ದಾರೆ. ಹಗುರ ಯುದ್ಧವಿಮಾನ, ಹಗುರ ಯುದ್ಧ ಹೆಲಿಕಾಪ್ಟರ್‌ ಮತ್ತು ಸುಖೋಯ್‌-30 ಯುದ್ಧ ವಿಮಾನಗಳ ಅಣಕು ಸ್ತಬ್ಧಚಿತ್ರದೊಂದಿಗೆ ಭಾವನಾ ಪರೇಡ್‌ ನಡೆಸಲಿದ್ದಾರೆ. ಪ್ರಸ್ತುತ ಇವರು ರಾಜಸ್ಥಾನದ ವಾಯುನೆಲೆಯೊಂದರಲ್ಲಿ ಮಿಗ್‌-21 ಬೈಸನ್‌ ಫೈಟರ್‌ ಪ್ಲೇನ್‌ಗೆ ಪೈಲಟ್‌. 2016ರಲ್ಲಿ ವಾಯುಪಡೆಗೆ ಆಯ್ಕೆಯಾದ “ಮೊದಲ ಫೈಟರ್‌ ಪೈಲಟ್‌’ ಖ್ಯಾತಿಯ ಭಾವನಾ ಅವರಿಗೆ ಕೇಂದ್ರ ಆರೋಗ್ಯ ಸಚಿವರು ಟ್ವಿಟರಿನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ