Home / ಜಿಲ್ಲೆ / ಬೆಂಗಳೂರು ಗ್ರಾಮಾಂತರ / ಕಾರ್ಮಿಕರನ್ನು ಹೊತ್ತು ಬೆಂಗಳೂರಿನಿಂದ ಹೊರಟ ರೈಲು ಮಾರ್ಗ ಮಧ್ಯೆ ದಾರಿ ತಪ್ಪಿದೆ.

ಕಾರ್ಮಿಕರನ್ನು ಹೊತ್ತು ಬೆಂಗಳೂರಿನಿಂದ ಹೊರಟ ರೈಲು ಮಾರ್ಗ ಮಧ್ಯೆ ದಾರಿ ತಪ್ಪಿದೆ.

Spread the love

ಬೆಂಗಳೂರು: 1,450 ಪ್ರವಾಸಿ ಕಾರ್ಮಿಕರನ್ನು ಹೊತ್ತು ಬೆಂಗಳೂರಿನಿಂದ ಹೊರಟ ರೈಲು ಮಾರ್ಗ ಮಧ್ಯೆ ದಾರಿ ತಪ್ಪಿ ಘಾಜಿಯಾಬಾದ್ ತಲುಪಿದೆ. ಗುರುವಾರ ಸಂಜೆ ಬೆಂಗಳೂರಿನ ಚಿಕ್ಕಬಾಣವಾರ ಸ್ಟೇಶನ್ ನಿಂದ ಹೊರಟಿದ್ದ ರೈಲು ಉತ್ತರ ಪ್ರದೇಶದ ಬಸ್ತಿ ತಲುಪಬೇಕಿತ್ತು. 20 ಗಂಟೆಗೂ ಅಧಿಕ ಸಮಯದವರೆಗೆ ಪ್ರವಾಸಿ ಕಾರ್ಮಿಕರು ಊಟ ಮಾಡಿಲ್ಲ. ಇನ್ನು ಹಲವರಿಗೆ ತಾವು ಊರು ಸೇರುತ್ತೇವೆ ಎಂಬ ನಂಬಿಕೆ ಇಲ್ಲ ಅನ್ನೋ ಅನುಮಾನ ಮೂಡಿದೆ.

ಗುರುವಾರ ಸಂಜೆ 6.45ಕ್ಕೆ ಚಿಕ್ಕಬಾಣವಾರದಿಂದ ಈ ರೈಲು ಹೊರಟಿತ್ತು. ಬೆಂಗಳೂರಿನಿಂದ 2,456 ಕಿಲೋ ಮೀಟರ್ ದೂರದಲ್ಲಿರೋ ಬಸ್ತಿಯನ್ನು ಈ ರೈಲು ತಲುಪಬೇಕಿತ್ತು. ಪ್ರವಾಸಿ ಕಾರ್ಮಿಕರು ಪ್ರಯಾಣಕ್ಕಾಗಿ 1,020 ರೂಪಾಯಿ (875 ರೈಲ್ವೇ ಚಾರ್ಜ್ + 145 ಬಸ್ ಚಾರ್ಜ್) ಪಾವತಿ ಮಾಡಿದ್ದರು. ಬೆಂಗಳೂರಿನಿಂದ ಹೊರಟ ರೈಲು ಸಿಕಂದರಾಬಾದ್, ನಾಗಪುರ, ಇಟಾರಸಿ, ಝಾಂಸಿ, ಕಾನ್ಪುರ ಮತ್ತು ಲಕ್ನೋ ಮಾರ್ಗವಾಗಿ ಬಸ್ತಿಗೆ ಹೋಗಬೇಕಿತ್ತು. ಇದು ಬರೋಬ್ಬರಿ 45 ಗಂಟೆಯ ಪ್ರಯಾಣವಿತ್ತು. ಆದ್ರೆ ಝಾಂಸಿಯಲ್ಲಿ ರೈಲು ಮಾರ್ಗ ಬದಲಿಸಿದ್ದರಿಂದ ಶನಿವಾರ ಸಂಜೆ ಗಾಜಿಯಾಬಾದ್ ತಲುಪಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಪ್ರವಾಸಿ ಕಾರ್ಮಿಕ, ರೂಟ್ ಮ್ಯಾಪ್ ಬದಲಿಸುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇರಲಿಲ್ಲ. ಶುಕ್ರವಾರ ರಾತ್ರಿ ನಾಗಪುರ ನಿಲ್ದಾಣದ ನಂತ್ರ ನಾವು ಆಹಾರವೇ ಸೇವಿಸಿಲ್ಲ ಎಂದಿದ್ದಾರೆ. ಇನ್ನು ಕಾರ್ಮಿಕರಿಗೆ ಟಿಕಟ್ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದ ನರೇಂದ್ರ ಕುಮಾರ್ ಮಾತನಾಡಿ, ಟ್ರೈನ್ ಡೈವರ್ಟ್ ತೆಗೆದುಕೊಂಡಿದೆ ಎಂದು ಫೋನ್ ಬಂತು. ಪ್ರಯಾಣಿಕರು 20 ಗಂಟೆಯಿಂದ ಏನು ತಿಂದಿಲ್ಲ ಮತ್ತು ರೈಲು ಯಾವಾಗ ಬಸ್ತಿ ತಲುಪುತ್ತೆ ಎಂಬ ವಿಷಯ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಮಾರ್ಗ ಮಧ್ಯೆ ಸಿಲುಕಿರುವ ಪ್ರವಾಸಿ ಕಾರ್ಮಿಕರಿಗೆ ಊಟ ಮತ್ತು ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು ಹಾಗೂ ಅವರನ್ನು ಬಸ್ತಿಗೆ ತಲುಪಿಸುವ ಕಾರ್ಯ ನಡೆಯುತ್ತಿದೆ ಎಂದು ಬೆಂಗಳೂರಿನ ರೈಲ್ವೇ ಅಧಿಕಾರಿ (ಡಿಆರ್‍ಎಂ) ಅಶೋಕ್ ಕುಮಾರ್ ವರ್ಮಾ ತಿಳಿಸಿದ್ದಾರೆ.

ಗೋಕಾಕನಗರ ದಲ್ಲಿ ರವಿವಾರದ ಸಿಲ್ ಡೌನ್ ನಿಂದ ರಸ್ತೆಗಳು ಸಂಪೂರ್ಣ ಬಂದ್ ಸಾರ್ವಜನಿಕರೂ ಮನೆಯಲ್ಲಿ ಇದು ಕರ್ಫ್ಯೂಗೆ ಸಹಕರಿಸಿದ್ದಾರೆ..

Laxmi News 24×7 यांनी वर पोस्ट केले शनिवार, २३ मे, २०२०


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ