ಅಥಣಿ – ಕಾಗವಾಡ ತಾಲೂಕಿನ ಕೌಲಗುಡ್ಡ ಗ್ರಾಮದ ಯುವಕನೋರ್ವ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದು, ಪೊಲೀಸರ ಏಟು ಆತನ ಸಾವಿಗೆ ಕಾರಣವಾಯ್ತು ಎನ್ನುವ ವದಂತಿ ಹರಡಿದೆ.
ಜಗದೀಶ್ ಸುರೇಶ ತೆಗ್ಗಿನವರ (26)ಮೃತ ಯುವಕ. ಅಂಗಡಿ ಬಾಗಿಲು ಹಾಕದ ಹಿನ್ನೆಲೆಯಲ್ಲಿ ಕಾಗವಾಡ ಪೋಲಿಸರು ಈ ಯುವಕನಿಗೆ ಥಳಿಸಿದ್ದರೆನ್ನಲಾಗಿದೆ. ಸ್ವಲ್ಪ ಹೊತ್ತಿನ ನಂತರ ಯುವಕ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಅಥಣಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯುವ ವೇಳೆ ಆತ ಸಾವಿಗೀಡಾಗಿದ್ದಾನೆ.
ಸಾವಿನಲ್ಲಿ ಅನುಮಾನವಿದೆ, ತನಿಖೆ ನಡೆಸಬೇಕೆಂದು ಕುಟುಂಬಸ್ಥರು ದೂರು ನೀಡಿದ್ದಾರೆ.
ಕಾಗವಾಡ ಪೋಲಿಸ್ ಪೇದೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ.
ಯುವಕ ಇದೇ ತಿಂಗಳ 9 ನೇ ತಾರೀಖು (14 ದಿನದ ಹಿಂದೆ) ಸಂಗೀತಾ ಎನ್ನುವ ಯುವತಿಯನ್ನು ಪ್ರೇಮ ವಿವಾಹವಾಗಿದ್ದ.
ಅಥಣಿ ತಹಶಿಲ್ದಾರ ಕಛೇರಿಯಲ್ಲಿ ಪ್ರೇಮವಿವಾಹವಾಗಿತ್ತು. ನಂತರ ರಕ್ಷಣೆ ಕೋರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪ್ರೇಮಿಗಳು ಮನವಿ ಸಲ್ಲಿಸಿದ್ದರು.
ಇದೀಗ ಅನುಮಾನಾಸ್ಪದ ರೀತಿಯಲ್ಲಿ ಆತ ಸಾವಿಗೀಡಾಗಿದ್ದಾನೆ.