Breaking News
Home / ನವದೆಹಲಿ / ಮೇ.17ರ ವರೆಗೂ ಲಾಕ್‌ಡೌನ್‌ ಮುಂದುವರಿಕೆ, ಹೊಸ ಮಾರ್ಗಸೂಚಿಯಲ್ಲಿ ಏನೇನಿದೆ..? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಮೇ.17ರ ವರೆಗೂ ಲಾಕ್‌ಡೌನ್‌ ಮುಂದುವರಿಕೆ, ಹೊಸ ಮಾರ್ಗಸೂಚಿಯಲ್ಲಿ ಏನೇನಿದೆ..? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

Spread the love

ನವದೆಹಲಿ : ಕೊರೊನಾ ಮಹಾಮಾರಿಯನ್ನು ಸಂಪೂರ್ಣವಾಗಿ ನಿಯಂತ್ರಣ ತರುವ ಉದ್ದೇಶದಿಂದ ದೇಶದಲ್ಲಿ ಮತ್ತೆ 2 ವಾರಗಳ ಕಾಲ ಲಾಕ್‌ಡೌನ್ ವಿಸ್ತರಣೆ ಮಾಡಲಾಗಿದೆ. ಈ ಬಾರಿ ಪ್ರಧಾನಿ ಭಾಷಣ ಇಲ್ಲದೇ ಗೃಹ ಇಲಾಖೆ ಅಧಿಕಾರಿಗಳೇ ಈ ವಿಷಯವನ್ನು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.

ಕೊರೋನಾ ಸೋಂಕು ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರ ಎರಡು ಬಾರಿ ಲಾಕ್ ಡೌನ್ ಘೋಷಿಸಿತ್ತು. ಇದೀಗ ಮೂರನೇ ಬಾರಿಗೆ 2 ವಾರಗಳವರೆಗೂ ಲಾಕ್ ಡೌನ್ ವಿಸ್ತರಿಸಿ ಆದೇಶ ಹೊರಡಿಸಿದೆ. ಕೊರೋನಾ ಸೋಂಕು ಹೆಚ್ಚು ವ್ಯಾಪಿಸುವ ಅಪಾಯದಲ್ಲಿರುವ ಸೂಕ್ಷ್ಮ ಪ್ರದೇಶಗಳನ್ನು ಕಂಟೈನ್ಮೆಂಟ್ ಜೋನ್ ಎಂದು ಪರಿಗಣಿಸಲಾಗಿದೆ.

ಇಂಥ ಕಂಟೈನ್ಮೆಂಟ್ ವಲಯಗಳನ್ನು ಆಯಾ ನಗರ ಅಥವಾ ಜಿಲ್ಲಾಡಳಿತಗಳು ಗುರುತಿಸಬೇಕೆಂದು ಕೇಂದ್ರ ಗೃಹ ಸಚಿವಾಲಯ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ. ಈ ಕಂಟೈನ್ಮೆಂಟ್ ಜೋನ್​ನಲ್ಲಿ ಆರೋಗ್ಯ ಸೇತು ಮೊಬೈಲ್ ಆ್ಯಪ್ ಸಂಪೂರ್ಣವಾಗಿ ಅಳವಡಿಕೆಯಾಗಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಪ್ರತೀ ಮನೆಗೂ ಹೋಗಿ ಪರಿಶೀಲನೆ ನಡೆಸಬೇಕು. ಈ ಸೂಕ್ಷ್ಮ ವಲಯದಲ್ಲಿ ಜನ ಸಂಚಾರಕ್ಕೆ ಕಡಿವಾಣ ಹಾಕಬೇಕು.

ಹೊರಗಿನಿಂದ ಯಾರೂ ಒಳಗೆ ಬರದಂತೆ, ಅಥವಾ ಒಳಗಿಂದ ಯಾರೂ ಹೊರಗೆ ಹೋಗದಂತೆ ಎಚ್ಚರ ವಹಿಸಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ. ಎಲ್ಲಾ ವಲಯಗಳಲ್ಲೂ ಸಂಜೆ 7ರಿಂದ ಬೆಳಗ್ಗೆ 7ರವರೆಗೆ ಅನಗತ್ಯ ಜನಸಂಚಾರವನ್ನು ನಿಷೇಧಿಸಿ. ಸ್ಥಳೀಯ ಆಡಳಿತಗಳು ಸಿಆರ್​​ಪಿಸಿ ಸೆಕ್ಷನ್ 144 ಬಳಸಿ ನಿಷೇಧಾಜ್ಞೆ ಜಾರಿಗೊಳಿಸಲಿ.

65 ವರ್ಷಕ್ಕಿಂತ ಮೇಲ್ಪಟ್ಟವರು, ಗರ್ಭಿಣಿಯರು, 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಇವರುಗಳು ಮನೆಯಿಂದ ಹೊರಗೆ ಬರದಂತೆ ಎಚ್ಚರ ವಹಿಸಿ ಎಂದು ಈ ಆದೇಶಪತ್ರದಲ್ಲಿ ತಿಳಿಸಲಾಗಿದೆ.ಕೆಂಪು ವಲಯಗಳಲ್ಲಿ ಕಂಟೈನ್ಮೆಂಟ್ ಜೋನ್ ಅಲ್ಲದ ಇತರ ಪ್ರದೇಶಗಳಲ್ಲಿ ಸೈಕಲ್ ರಿಕ್ಷಾ, ಆಟೋರಿಕ್ಷಾ, ಟ್ಯಾಕ್ಸಿ, ಓಲಾ ಊಬರ್ ಕ್ಯಾಬ್ ಸೇವೆ, ಬಸ್ ಸೇವೆ, ಕ್ಷೌರದಂಗಡಿ, ಸ್ಪಾ, ಸಲೂನ್​ಗಳನ್ನ ನಿಷೇಧಿಸಲಾಗಿದೆ. ಈ ಆದೇಶ ಇಡೀ ದೇಶಕ್ಕೆ ಅನ್ವಯಿಸಲಿದೆ.

ಆದರೆ, ದೇಶಾದ್ಯಂತ ವಿವಿಧ ಜಿಲ್ಲೆಗಳನ್ನು ಮೂರು ವಲಯಗಳನ್ನಾಗಿ ವಿಂಗಡಿಸಿದ್ದು, ರೆಡ್​ ಜೋನ್​ನಲ್ಲಿ ಲಾಕ್​ಡೌನ್​ ಸಂಪೂರ್ಣವಾಗಿ ಜಾರಿಯಲ್ಲಿರಲಿದೆ. ಉಳಿದಂತೆ ಆರೇಂಜ್​ ಜೋನ್​ ಹಾಗೂ ಗ್ರೀನ್​ ಜೋನ್​ನಲ್ಲಿ ಸಾಕಷ್ಟು ಸಡಿಲಿಕೆಯನ್ನು ಕೇಂದ್ರ ವಿಸ್ತರಿಸಿದೆ.

ಈಗ ದೇಶವನ್ನು ಕೆಂಪು, ಕಿತ್ತಳೆ ಹಾಗೂ ಹಸಿರು ವಲಯದಲ್ಲಿ ವಿಂಗಡಿಸಲಾಗಿದ್ದು ಅದರಂತೆಯೇ ಲಾಕ್‌ಡೌನ್‌ ನಿಯಮಗಳು ಸಹ ಸಡಿಲಗಿಳ್ಳಲಿದೆ. ಆರೆಂಜ್​ ಹಾಗೂ ಗ್ರೀನ್​ ವಲಯಗಳಲ್ಲಿ ಲಾಕ್​ಡೌನ್​​ನಲ್ಲಿ ಕೆಲವೊಂದು ಸಡಿಲಿಕೆ ಮಾಡಿದೆ.ರೆಡ್​ ಝೋನ್​ನ 130 ವಲಯಗಳಲ್ಲಿ ಲಾಕ್​ಡೌನ್ ಮತ್ತಷ್ಟು ಕಠಿಣಗೊಳ್ಳಲಿದ್ದು, ಯಾವುದೇ ಶಾಲಾ-ಕಾಲೇಜ್​, ಸಿನಿಮಾ ಹಾಲ್​ಗಳು ಓಪನ್​ ಆಗುವುದಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.ಈಗಾಗಲೇ ತೆಲಂಗಾಣದಲ್ಲಿ ಮೇ 7 ಹಾಗೂ ಪಂಜಾಬ್​​ನಲ್ಲಿ ಮೇ 17ರವರೆಗೆ ಲಾಕ್​ಡೌನ್​ ವಿಸ್ತರಣೆಗೊಂಡಿದೆ.

ದೇಶಾದ್ಯಂತ ಮೇ 14ರವರೆಗೆ ವಿಮಾನ ಸಂಚಾರ, ರೈಲು ಸಂಚಾರ , ಮೆಟ್ರೋ ಸೇವೆಗಳು ಹಾಗೂ ಅಂತರ್ ರಾಜ್ಯ ರಸ್ತೆ ಸಂಚಾರಕ್ಕೆ ನಿರ್ಬಂಧ ಇರಲಿದೆ. ಇನ್ನು ದೇಶಾದ್ಯಂತ ಎಲ್ಲಾ ರಾಜ್ಯಗಳಲ್ಲಿ ಶಾಲೆ, ಕಾಲೇಜುಗಳು, ಇನ್ನಿತರ ಶಿಕ್ಷಣ/ತರಬೇತಿ ಹಾಗೂ ಕೋಚಿಂಗ್ ಸಂಸ್ಥೆಗಳು ಕಾರ್ಯನಿರ್ವಹಿಸುವಂತಿಲ್ಲ.

ಇನ್ನು ಹೊಟೇಲ್ ಗಳು, ರೆಸ್ಟೋರೆಂಟ್ ಗಳು, ಪ್ರವಾಸೋದ್ಯಮ ಚಟುವಟಿಕೆಗಳಿಗೆ ನಿರ್ಬಂಧ ಇರಲಿದೆ. ಇನ್ನು, ಸಾರ್ವಜನಿಕ ಸಮಾರಂಭಗಳು, ಶಾಪಿಂಗ್ ಮಾಲ್ ಗಳು, ಚಿತ್ರಮಂದಿರಗಳು, ಸ್ಪೋರ್ಟ್ ಕಾಂಪ್ಲೆಕ್ಸ್ ಗಳು ಹಾಗೂ ಜಿಮ್ ಗಳಲ್ಲಿ ಜನ ಸೇರುವಿಕೆಯನ್ನು ಕಡ್ಡಾಯವಾಗಿ ಮೇ 14ರವರೆಗೆ ನಿರ್ಬಂಧಿಸಲಾಗಿದೆ. ಮಾತ್ರವಲ್ಲದೇ ದೇಶಾದ್ಯಂತ ರಾಜಕೀಯ, ಸಾರ್ವಜನಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ನೆಪದಲ್ಲಿ ಜನ ಸೇರುವಂತಿಲ್ಲ.

ದೇಶದಲ್ಲಿ ರೆಡ್‌ ಝೋನ್‌ ವಲಯದಲ್ಲಿರುವ 130 ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್‌ ಜಾರಿಯಲ್ಲಿ ಇರಲಿದೆ. ಈ ಪೈಕಿ ಕರ್ನಾಟಕದ 3 ಜಿಲ್ಲೆಗಳೂ ಸೇರಿವೆ. ಗ್ರೀನ್‌ ಜೋನ್‌ ಮತ್ತು ಆರೆಂಜ್‌ ಝೋನ್‌ಗಳಲ್ಲಿ ಕೆಲವು ಸಡಿಲಿಕೆ ನೀಡಲಾಗುತ್ತದೆ ಎನ್ನಲಾಗಿದೆ. ಕೈಗಾರಿಕೆಗಳಿಗೆ ಶರತ್ತುಬದ್ದ ಅನುಮತಿ ನೀಡಲಾಗಿದೆ. ಔಷಧ ವೈದ್ಯಕೀಯ ಸಲಕರಣೆಗಳ ಉತ್ಪಾದನೆಗೆ ಅವಕಾಶ ನೀಡಲಾಗಿದೆ.

ಅಂತಾರಾಜ್ಯ ಸಾರಿಗೆಗೆ ಅವಕಾಶ ನೀಡಲಾಗಿಲ್ಲ. ಕೇಂದ್ರ ಸರಕಾರದ ಲಾಕ್‌ಡೌನ್‌ ವಿಸ್ತರಣೆ ಆದೇಶವು ದೇಶದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅನ್ವಯವಾಗಲಿದೆ. ಮೇ. 17ರವರೆಗೆ ಸಾರ್ವಜನಿಕ ಸಾರಿಗೆಗೆ ಚಾಲನೆ ದೊರೆಯುವುದಿಲ್ಲ. ರೈಲಿಗಳೂ ಕೂಡ ಮತ್ತೆ ಎರಡು ವಾರಗಳ ಕಾಲ ಸ್ತಬ್ಧವಾಗಲಿವೆ.

ಅಂದರೆ ರೈಲುಗಳ ಸಂಚಾರಕ್ಕೂ ಅನುಮತಿ ನೀಡಲಾಗಿಲ್ಲ. ಶಾಪಿಂಗ್ ಕಾಂಪ್ಲೆಕ್ಸ್‌ಗಳಿಗೆ ಅನುಮತಿ ನೀಡಲಾಗಿಲ್ಲ. ಕಟ್ಟಡ ಕಾರ್ಮಿಕರು, ನಿರ್ಮಾಣ ಕಾಮಗರಿಗಳಲ್ಲಿ ತೊಡಗಿರುವ ಕಾರ್ಮಿಕರಿಗೆ ಶರತ್ತುಬದ್ಧ ಅನುಮತಿ ನೀಡಲಾಗಿದೆ. ಆದರೆ, ಹೊರರಾಜ್ಯಗಳಿಂದ ಕಾರ್ಮಿಕರನ್ನು ಕರೆತರುವಂತಿಲ್ಲ.

ಎಲ್ಲಾ ವಲಯಗಳಲ್ಲಿ 65 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು, ಸಹ-ಅಸ್ವಸ್ಥರು, ಗರ್ಭಿಣಿಯರು ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯಲ್ಲಿಯೇ ಇರಬೇಕು. ಆರೋಗ್ಯ ಮತ್ತು ಅವಶ್ಯಕ ಪೂರೈಕೆಗೆ ವಿನಾಯಿತಿ ಇದೆ.ರೆಡ್​ ಝೋನ್​ಗಳಲ್ಲಿ ಅವಶ್ಯಕ ಕಾರ್ಯಗಳಿಗಾಗಿ ಜನರ ಮತ್ತು ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ದ್ವಿಚಕ್ರವಾಹನಗಳಲ್ಲಿ ಹಿಂಬದಿ ಸವಾರಿಗೆ ಅವಕಾಶವಿಲ್ಲ.

ರೆಡ್​ಝೋನ್​ನಲ್ಲಿರುವ ನಗರ ಪ್ರದೇಶಗಲ್ಲಿನ ಕಾರ್ಖಾನೆಗಳಿಗೆ, ಸ್ಪೆಷಲ್ ಎಕನಾಮಿಕ್ ಝೋನ್​ಗಳಿಗೆ, ರಫ್ತು ಕೇಂದ್ರಿತ ಸಂಸ್ಥೆಗಳನ್ನು ತೆರೆಯಲು ಷರತ್ತುಬದ್ಧ ಅನುಮತಿ ನೀಡಲಾಗಿದೆ. ಜೊತೆಗೆ ಅವಶ್ಯವಸ್ತುಗಳ ಉತ್ಪಾದನಾ ಕಾರ್ಖಾನೆಗಳಿಗೆ, ಐಟಿ ಹಾರ್ಡ್​ವೇರ್ ಉತ್ಪಾದನಾ ವಲಯಕ್ಕೆ ಅನುಮತಿ ಸ್ಥಳೀಯವಾಗಿ ಕೆಲಸಗಾರರು ಲಭ್ಯವಿದ್ದರೆ ಕಟ್ಟಡ ಕಾಮಗಾರಿಗಳಿಗೂ ಅನುಮತಿ ಕೊಡಲಾಗಿದೆ.

ಶೇ.33 ಉದ್ಯೋಗಿಗಳೊಂದಿಗೆ ಖಾಸಗಿ ಸಂಸ್ಥೆಗಳು ಕಾರ್ಯ ನಿರ್ವಹಿಸಬಹುದಾಗಿದೆ, ಉಳಿದವರು ವರ್ಕ್​ಫ್ರಂ ಹೋಮ್ ಮಾಡಬೇಕು. ಆದರೆ, ರಕ್ಷಣಾ ಮತ್ತು ಭದ್ರತಾ ಸೇವೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಪೋಲೀಸ್, ಜೈಲು, ಹೋಮ್ ಗಾರ್ಡ್ಸ್, ಸಿವಿಲ್ ಡಿಫೆನ್ಸ್, ಫೈರ್ ಮತ್ತು ಎಮರ್ಜನ್ಸಿ ಮುಂತಾದ ಸೇವೆಗಳನ್ನು ನೀಡುವ ಕಚೇರಿಗಳು ತಮಗೆ ಅವಶ್ಯವಿರುವಷ್ಟು ಉದ್ಯೋಗಿಗಳನ್ನು ಬಳಸಿಕೊಳ್ಳಬಹುದಾಗಿದೆ.

ರೆಡ್​ ಜೋನ್​ಗಳಲ್ಲಿ ಅದ್ರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಕೈಗಾರಿಕೆ, ಮನ್ರೇಗ, ಆಹಾರ ಸಾಮಗ್ರಿ ತಯಾರಿಕೆಗೆ ಅವಕಾಶ.
ಗ್ರಾಮೀಣ ಪ್ರದೇಶಗಳಲ್ಲಿ ಅಂಗಡಿಗಳನ್ನು ತೆರೆಯಲು ಅವಕಾಶವಿದೆ. ಶಾಪಿಂಗ್ ಮಾಲ್​ಗೆ ಅವಕಾಶವಿಲ್ಲ.ಕೃಷಿ ಚಟುವಟಿಕೆಗಳಿಗೆ ಅವಕಾಶ. ಆರೋಗ್ಯ ಸೇವೆಗಳಿಗೆ ಅವಕಾಶವಿದೆ.ಹೊರಗಿನ ರೋಗಿಗಳ ಇಲಾಖೆಗಳು (ಒಪಿಡಿಗಳು) ಮತ್ತು ವೈದ್ಯಕೀಯ ಚಿಕಿತ್ಸಾಲಯಗಳು ಕೆಂಪು, ಹಳದಿ ಮತ್ತು ಹಸಿರು ವಲಯಗಳಲ್ಲಿ ಕಾರ್ಯನಿರ್ವಹಿಸಲು ಅನುಮತಿ ಇದೆ.

ಕಂಟೈನ್‌ಮೆಂಟ್ ವಲಯಗಳಲ್ಲಿ ಇವುಗಳನ್ನು ಅನುಮತಿಸಲಾಗುವುದಿಲ್ಲ ಆರೇಂಜ್​ ಜೋನ್​ಗಳಲ್ಲಿ ಮತ್ತು ರೆಡ್​ ಜೋನ್​ಗಳಲ್ಲಿ ಒಬ್ಬ ಡ್ರೈವರ್ ಹಾಗೂ ಒಬ್ಬ ಪ್ಯಾಸೇಂಜರ್​ ಇರುವ ಟ್ಯಾಕ್ಸಿ ಸರ್ವೀಸ್​ಗೆ ಅನುಮತಿ ಅಂತರ್ ​ಜಿಲ್ಲೆ ಸಂಚಾರಕ್ಕೆ ಕೇವಲ ಅನುಮತಿ ಪಡೆದ ಕಾರ್ಯಗಳಿಗೆ ಮಾತ್ರ ಅವಕಾಶ ನಾಲ್ಕು ಚಕ್ರವಾಹನಗಳ ಸಂಚಾರಕ್ಕೂ ಅನುಮತಿ ನೀಡಲಾಗಿದ್ದು ಅದ್ರಲ್ಲಿ ಡ್ರೈವರ್ ಹೊರತುಪಡಿಸಿ ಇಬ್ಬರು ಸಂಚರಿಸಬಹುದಾಗಿದೆ.

ಹಿಂಬದಿ ಸವಾರರೊಂದಿಗೆ ಸಂಚರಿಸುವ ಅವಕಾಶವನ್ನು ದ್ವಿಚಕ್ರವಾಹನಗಳಿಗೆ ನೀಡಲಾಗಿದೆ. ಗ್ರೀನ್​ ಝೋನ್​ಗಳಲ್ಲಿ ಬಹುತೇಕ ಎಲ್ಲ ಕಾರ್ಯಗಳಿಗೂ ಅನುಮತಿ ನೀಡಲಾಗಿದೆ. ಶೇ. ರಷ್ಟು ಪ್ಯಾಸೇಂಜರ್​​ರೊಂದಿಗೆ ಸಂಚರಿಸಲು ಸಾರ್ವಜನಿಕ ಸಾರಿಗೆಗೆ ಅವಕಾಶ ನೀಡಲಾಗಿದೆ. ಡೀಪೋಗಳನ್ನೂ ಶೇ.50ರಷ್ಟು ಉದ್ಯೋಗಿಗಳೊಂದಿಗೆ ತೆರೆಯಬಹುದಾಗಿದೆ.

ಅಕ್ಕಪಕ್ಕದ ದೇಶಗಳಿಗೆ ರಫ್ತಾಗುವ ಗೂಡ್ಸ್​ ಹೊತ್ತ ವಾಹನಗಳನ್ನು ಹಾಗೂ ಕಾರ್ಗೋಗಳನ್ನು ಯಾವುದೇ ರಾಜ್ಯಗಳಾಗಲೀ, ಕೇಂದ್ರಾಡಳಿತ ಪ್ರದೇಶಗಳಾಗಲೀ ತಡೆಯುವಂತಿಲ್ಲ. ಅದೇ ರೀತಿ ದೇಶದಲ್ಲಿ ಅಗತ್ಯ ವಸ್ತುಗಳ ಸರಬರಾಜು ಸುಸೂತ್ರವಾಗಿ ನಡೆಯಬೇಕು.. ಅವುಗಳನ್ನು ಸಾಗಿಸುವ ವಾಹನಗಳಿಗೆ ಯಾವುದೇ ಪಾಸ್​ಗಳ ಅವಶ್ಯಕತೆ ಇರುವುದಿಲ್ಲ.

ಇನ್ನು ಈಗಾಗಲೇ ಅನುಮತಿ ನೀಡಲಾಗಿರುವ ಕಾರ್ಯಗಳಿಗೆ ಮತ್ತೆ ಹೊಸ ಅನುಮತಿ ಪತ್ರ ಪಡೆಯುವ ಅಗತ್ಯತೆ ಇರುವುದಿಲ್ಲ.
ಕರೊನಾ ವೈರಸ್​ ಸೋಂಕಿತರ ಸಂಖ್ಯೆ ಭಾರತದಲ್ಲಿ 35,365ಕ್ಕೆ ಏರಿದ್ದು, ಸಾವಿನ ಸಂಖ್ಯೆ 1,152ಕ್ಕೇರಿದೆ. ಕಳೆದ 24 ಗಂಟೆಯಲ್ಲಿ 1993 ಹೊಸ ಪ್ರಕರಣಗಳು ಪತ್ತೆಯಾಗಿವೆ.

ಮೇ 3ರಂದು ಎರಡನೇ ಹಂತದ ಲಾಕ್​ಡೌನ್ ಅವಧಿ ಮುಗಿಯಬೇಕಿತ್ತು. ಆದರೆ ದಿನೇದಿನೆ ಭಾರತದಲ್ಲಿ ಕರೊನಾ ಪ್ರಸರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಾಕ್​ಡೌನ್​ನ್ನು ಮೇ 17ರವರೆಗೆ ವಿಸ್ತರಿಸುವುದಾಗಿ ಕೇಂದ್ರ ಗೃಹ ಸಚಿವಾಲಯ ಆದೇಶ ನೀಡಿದೆ. ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

# ಮಾರ್ಗಸೂಚಿಗಳು : 
ಲಾಕ್ ಡೌನ್ ಅವಧಿಯಲ್ಲಿ ಅಗತ್ಯ ವಸ್ತುಗಳಾದ ಹಾಲು, ಹಣ್ಣು, ತರಕಾರಿ ಮೊದಲಾದವುಗಳ ಮಾರಾಟಕ್ಕೆ ಯಾವುದೇ ಅಡೆತಡೆ ಇರುವುದಿಲ್ಲ. ಶಾಲಾ-ಕಾಲೇಜುಗಳಿಗೆ ಎಂದಿನಂತೆ ಲಾಕ್ ಡೌನ್ ಮುಗಿಯುವವರೆಗೂ ರಜೆ. ಮೇ 17ರ ವರೆಗೆ ಮದ್ಯ ಮಾರಾಟ ಬಂದ್,  ಎಲ್ಲಾ ಆಸ್ಪತ್ರೆಯ OPD ತೆರೆಯಲು ಸೂಚನೆ,  ಸಾರಿಗೆ ಸಂಚಾರಕ್ಕೆ ನಿರ್ಬಂಧವಿದ್ದು, ವಿಮಾನ, ರೈಲುಗಳ ಸಂಚಾರವೂ ಇರುವುದಿಲ್ಲ. ಗ್ರೀನ್ ಝೋನ್ ವಲಯದಲ್ಲಿ ಈಗಾಗಲೇ ಘೋಷಿಸಲಾಗಿರುವ ವಿನಾಯಿತಿಗಳು ಮುಂದುವರಿಯುತ್ತವೆ.

ಮೂರೂ ವಲಯಗಳಲ್ಲಿ ಹೋಟೆಲ್ ಗಳಲ್ಲಿ ಪಾರ್ಸೆಲ್ ನೀಡಲು ಮಾತ್ರ ಅವಕಾಶವಿದ್ದು, ಪಬ್, ಕ್ಲಬ್, ಚಿತ್ರಮಂದಿರ, ಮಾಲ್ ಗಳನ್ನು ತೆರೆಯುವುದಕ್ಕೆ ನಿರ್ಬಂಧ ಹೇರಲಾಗಿದೆ. ಕಾರಿನಲ್ಲಿ ಇಬ್ಬರು ಮಾತ್ರ ಪ್ರಯಾಣಿಸಲು ಅವಕಾಶವಿದ್ದು, ಬೈಕಿನಲ್ಲಿ ಒಬ್ಬರು ಮಾತ್ರ ಸಂಚಾರ ಮಾಡಬಹುದಾಗಿದೆ. ಆರೆಂಜ್ ಝೋನ್ ನಲ್ಲಿ ಕ್ಯಾಬ್ ಮತ್ತು ಟ್ಯಾಕ್ಸಿಗಳ ಓಡಾಟಕ್ಕೆ ಅವಕಾಶ .

ಮಕ್ಕಳು ಮತ್ತು ವಯೋವೃದ್ಧರು ಮನೆಯಲ್ಲೇ ಇರುವಂತೆ ಸೂಚಿಸಲಾಗಿದ್ದು, ಉಳಿದವರು ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಹೊರ ಬರಬಹುದಾಗಿದೆ. ಗ್ರೀನ್ ಝೋನ್ ನಲ್ಲಿ ಬಸ್ ಸಂಚಾರಕ್ಕೆ ಅನುವು ಮಾಡಿಕೊಡಲಿದೆ ಶೇಕಡಾ 50 ಸೀಟುಗಳನ್ನು ಮಾತ್ರ ಭರ್ತಿ ಮಾಡಬಹುದಾಗಿದೆ.


Spread the love

About Laxminews 24x7

Check Also

‘ಅಂಬರೀಶ್ ಆಶೀರ್ವಾದದಿಂದ ಮಗನ ಸಿನಿಮಾ ಬಿಡುಗಡೆ’: ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿದ ಸುಮಲತಾ

Spread the love ಮಂಡ್ಯ: ಇಂದು ಕನ್ನಡಿಗರ ಮೆಚ್ಚಿನ ನಟ ಅಂಬರೀಶ್ ಅವರ 5ನೇ ವರ್ಷದ ಪುಣ್ಯಸ್ಮರಣೆ ಹಿನ್ನೆಲೆ, ಮಂಡ್ಯದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ