Home / ಜಿಲ್ಲೆ / ಬಾಡೂಟಕ್ಕೆ ಕರೆದಿಲ್ಲ ಎಂದು ಮನೆಯನ್ನೇ ದೋಚಿದರು

ಬಾಡೂಟಕ್ಕೆ ಕರೆದಿಲ್ಲ ಎಂದು ಮನೆಯನ್ನೇ ದೋಚಿದರು

Spread the love

ಬೆಳಗಾವಿ – ಉದ್ಯಮಬಾಗ ಪೊಲೀಸರು ಇಬ್ಬರು ಮನೆಗಳ್ಳರನ್ನು ಬಂಧಿಸಿ, ಸುಮಾರು ರೂ.೧.೫ ಲಕ್ಷದ ಆಭರಣ ಮತ್ತು ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.

ಉದ್ಯಮಬಾಗ ಪೊಲೀಸ್ ಠಾಣಾ ಹದ್ದಿಯ ಹನುಮಾನವಾಡಿಯಲ್ಲಿ ರಾಜಾರಾಮ ಕೃಷ್ಣ ಸುತಾರ ಇವರ ಮನೆಯ ಮುಂದಿನ ಬಾಗಿಲನ್ನು ಮುರಿದು ಹಾಡಹಗಲೇ ಕಳ್ಳತನ ಮಾಡಲಾಗಿತ್ತು. ಆರೋಪಿಗಳಿಗೆ ಬಲೆ ಬೀಸಿದ ಉದ್ಯಮಬಾಗ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈಶ್ವರ ಶಿವರಾಯಪ್ಪ ಉದಗಟ್ಟಿ (೨೮) ಸಾ: ರಾಜಾರಾಮನಗರ, ಉದ್ಯಮಬಾಗ ಹಾಗೂ ಸಂತೋಷ @ ಬಲ್ಯಾ ತಂದೆ- ವಸಂತ ಬೇಟಗೇರಿ (೩೭) ಸಾ: ದತ್ತ ಗಲ್ಲಿ ವಡಗಾಂವಿ ಬಂಧಿತರು. ದೂರುದಾರ ರಾಜಾರಾಮ ಇವರು ತಮ್ಮಿಂದ ಕೆಲಸ ತೆಗೆದುಕೊಂಡು ಬಾಡೂಟಕ್ಕೆ ಕರೆಯದೇ ಇದ್ದ ಕಾರಣಕ್ಕಾಗಿ ಅದರ ಸೇಡು ತಿರಿಸಿಕೊಳ್ಳಲು ೪ ಜನ ಸೇರಿ ಆತನ ಮನೆಯಲ್ಲಿ ಕಳ್ಳತನ ಮಾಡಿದ್ದೇವೆ ಎಂದು ಆರೋಪಿಗಳು ತಿಳಿಸಿದ್ದಾರೆ.

ಅವರಿಂದ ಸುಮಾರು 1.50 ಲಕ್ಷ ರೂ. ಮೌಲ್ಯದ ಬಂಗಾರದ ಮಂಗಳಸೂತ್ರ, ಕಿವಿಯೋಲೆ ಮತ್ತು ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ. ಇನ್ನಿಬ್ಬರು ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿದೆ.

ಎ. ಚಂದ್ರಪ್ಪ, ಎಸಿಪಿ ಖಡೆಬಜಾರ ಉಪವಿಭಾಗ ರವರ ಮಾರ್ಗದರ್ಶನದಲ್ಲಿ ಉದ್ಯಮಬಾಗ ಪೊಲೀಸ್ ಠಾಣೆಯ ಪಿಐ ದಯಾನಂದ ಶೇಗುಣಸಿ ಹಾಗೂ ಸಿಬ್ಬಂದಿಗಳಾದ ಕಾಂತೇಶ ಸವದತ್ತಿ, ತವನಪ್ಪ ಕುಂಚನೂರ, ಮಾಳಪ್ಪ ಪೂಜಾರಿ, ಶಶಿಕುಮಾರ ಗೌಡ್ರ, ಜಗದೀಶ ಹಾದಿಮನಿ ರವರನ್ನೊಳಗೊಂಡ ತಂಡ ಸತತ ಪ್ರಯತ್ನದಿಂದ ಕೇವಲ 5 ದಿನಗಳಲ್ಲಿ ಪ್ರಕರಣವನ್ನು ಬೆಳಕಿಗೆ ತಂದು ಆರೋಪಿಗಳನ್ನು ದಸ್ತಗಿರಿ ಮಾಡಿದ್ದು, ತಂಡದ ಈ ಕಾರ್ಯವನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.


Spread the love

About Laxminews 24x7

Check Also

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

Spread the love ಬೆಂಗಳೂರು/ಹೊಸದಿಲ್ಲಿ: ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿರುವ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಮತ್ತೆ ಜೈಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ