Breaking News
Home / ಜಿಲ್ಲೆ / ಬೆಂಗಳೂರು / ಮಂಡ್ಯ, ಕಲಬುರಗಿಯಲ್ಲಿ ಕೊರೊನಾ ಆರ್ಭಟ-
Microscopic view of Coronavirus, a pathogen that attacks the respiratory tract. Analysis and test, experimentation. Sars. 3d render

ಮಂಡ್ಯ, ಕಲಬುರಗಿಯಲ್ಲಿ ಕೊರೊನಾ ಆರ್ಭಟ-

Spread the love

ಬೆಂಗಳೂರು: ಮಂಡ್ಯದ ಜೊತೆ ಜೊತೆಗೆ ಹಾಸನಕ್ಕೂ ಮುಂಬೈ ಕಂಟಕ ಹೆಚ್ಚಾಗುತ್ತಲೇ ಇದೆ. ಪರಿಣಾಮ ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಸಿಗದೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲಿದೆ. ಇಂದು ಒಂದೇ ದಿನ 54 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 1,146ಕ್ಕೆ ಏರಿಕೆಯಾಗಿದೆ.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಧ್ಯಾಹ್ನ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಮಂಡ್ಯ 22, ಕಲಬುರಗಿ 10, ಹಾಸನ 6, ಧಾರವಾಡ 4, ಕೋಲಾರ, ಯಾದಗಿರಿದಲ್ಲಿ ತಲಾ 3, ಶಿವಮೊಗ್ಗ, ದಕ್ಷಿಣ ಕನ್ನಡದಲ್ಲಿ ತಲಾ 2 ಹಾಗೂ ವಿಜಯಪುರ, ಉಡುಪಿಯಲ್ಲಿ ತಲಾ ಒಬ್ಬರಿಗೆ ಸೋಂಕು ಪತ್ತೆಯಾಗಿದೆ. ವಿಶೇಷವೆಂದರೆ ಈ ಪೈಕಿ 42 ಜನರು ಹೊರ ರಾಜ್ಯದಿಂದ ಬಂದವರೇ ಆಗಿದ್ದಾರೆ.

ಹಾಸನ: ಹಾಸನಕ್ಕೆ ಮುಂಬೈ ಕಂಟಕ ಮತ್ತೆ ಮುಂದುವರಿದಿದ್ದು, ಇಂದು ಒಂದೇ ದಿನ ಹಾಸನದಲ್ಲಿ ಆರು ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಜಿಲ್ಲೆ ಸೋಂಕಿತರ ಸಂಖ್ಯೆ 26ಕ್ಕೆ ಏರಿದೆ. ಇಂದು ಚನ್ನರಾಯಪಟ್ಟಣ ಮೂಲದ ಇಬ್ಬರು, ಆಲೂರು ಮೂಲದ ಒಂದೇ ಕುಟುಂಬದ ಮೂವರು, ಹೊಳೆನರಸೀಪುರದ ಒಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇವರೆಲ್ಲರೂ ಮುಂಬೈನಿಂದ ವಾಪಸ್ಸಾದವರಾಗಿದ್ದು, ಎಲ್ಲರನ್ನೂ ಕ್ವಾರಂಟೈನ್ ಕೇಂದ್ರದಲ್ಲಿ ಇಡಲಾಗಿತ್ತು.

ಆರು ಜನ ಸೋಂಕಿತರ ಜೊತೆ ಹಲವರು ಪ್ರಾಥಮಿಕ ಸಂಪರ್ಕದಲ್ಲಿದ್ದು, ಸಂಜೆ ವೇಳೆಗೆ ಸೋಂಕು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಇದುವರೆಗೂ ಹೊರರಾಜ್ಯದಿಂದ ಹಾಸನಕ್ಕೆ ಸಾವಿರಕ್ಕೂ ಹೆಚ್ಚು ಜನ ಆಗಮಿಸಿದ್ದು ಎಲ್ಲರನ್ನೂ ಕ್ವಾರಂಟೈನ್‍ನಲ್ಲಿ ಇಡಲಾಗಿದೆ. ಇನ್ನೂ 1,200ಕ್ಕೂ ಹೆಚ್ಚು ಜನ ಹೊರರಾಜ್ಯದಿಂದ ಹಾಸನಕ್ಕೆ ಬರಲು ನೋಂದಾಯಿಸಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಮಾಹಿತಿ ನೀಡಿದ್ದಾರೆ.

ಉಡುಪಿ ಸಾವು: ರೋಗಿ-1093 ಉಡುಪಿ ಜಿಲ್ಲೆಯ 54 ವರ್ಷದ ಪುರುಷ ಹೃದಯ ಸಂಬಂಧದ ತೊಂದರೆಯಿಂದ ಉಡುಪಿ ಖಾಸಗಿ ಆಸ್ಪತ್ರೆ ಶನಿವಾರ ಮೃತಪಟ್ಟಿದ್ದಾರೆ. ಅವರು ಮೇ ಮೊದಲ ವಾರ ಮಹಾರಾಷ್ಟ್ರದಿಂದ ಉಡುಪಿಗೆ ಬಂದಿದ್ದರು. ಕೊರೊನಾಗೆ ಜಿಲ್ಲೆಯಲ್ಲಿ ಇದು ಮೊದಲ ಬಲಿಯಾಗಿದ್ದು, ರಾಜ್ಯದಲ್ಲಿ ಮೃತರ ಸಂಖ್ಯೆ 37ಕ್ಕೆ ಏರಿಕೆಯಾಗಿದೆ.

ಮೃತ ವ್ಯಕ್ತಿಯು ಕುಂದಾಪುರ ತಾಲೂಕಿನವರಾಗಿದ್ದು, ಮಹಾರಾಷ್ಟ್ರದಲ್ಲಿ ಹಲವು ವರ್ಷಗಳಿಂದ ನೆಲೆಸಿದ್ದರು. ಮೇ ಮೊದಲ ವಾರದಲ್ಲಿ ಅವರು ಮಹಾರಾಷ್ಟ್ರದಿಂದ ಉಡುಪಿ ಜಿಲ್ಲೆಗೆ ವಾಪಸ್ಸಾಗಿದ್ದರು. ಮನೆಯಲ್ಲಿದ್ದ ಸಂದರ್ಭ ಅನಾರೋಗ್ಯಕ್ಕೆ ಒಳಗಾಗಿದ್ದರು. ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಮತ್ತಷ್ಟು ಹದಗೆಟ್ಟಿದ್ದರಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ವ್ಯಕ್ತಿಯನ್ನು ಶಿಫ್ಟ್ ಮಾಡಲಾಗಿತ್ತು. ಆದರೆ ಅವರು ಹೃದಯಾಘಾತದಿಂದ ಮೃತಪಟ್ಟಿದ್ದರು. ಇದರಿಂದಾಗಿ ಕೊರೊನಾ ಶಂಕೆ ವ್ಯಕ್ತಪಡಿಸಿದ್ದ ವೈದ್ಯರು ಗಂಟಲ ದ್ರವವನ್ನು ತಪಾಸಣೆಗೆ ಮಂಗಳೂರಿಗೆ ಕಳುಹಿಸಿದ್ದರು. ವರಿದಿಯಲ್ಲಿ ಕೊರೊನಾ ಪಾಸೊಟಿವ್ ಬಂದಿದೆ.

ಮಂಡ್ಯ: ಜಿಲ್ಲೆಯಲ್ಲಿ ಇಂದು ಒಂದೇ ದಿನ 22 ಮಂದಿಗೆ ಕೊರೊನಾ ತಗುಲಿರುವುದು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 72ಕ್ಕೆ ಏರಿದೆ. ಮುಂಬೈನಿಂದ ವಾಪಸ್ ಆಗಿರುವ ಕೆಆರ್ ಪೇಟೆಯ 22 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಜಿಲ್ಲೆಯಲ್ಲಿ ಮುಂಬೈನಿಂದ ಬಂದ ಒಟ್ಟು 49 ಮಂದಿಗೆ ಕೊರೊನಾ ಪತ್ತೆಯಾಗಿದೆ. ಇವರು ಕೆಆರ್ ಪೇಟೆಯಲ್ಲಿ 45 ಮಂದಿ, ಪಾಂಡವಪುರದ ಮೂವರು ಹಾಗೂ ನಾಗಮಂಗಲದ ಒಬ್ಬರಾಗಿದ್ದಾರೆ.

ಮಂಗಳೂರು:
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಇಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಮಂಗಳೂರಿನ ಜಪ್ಪಿನಮೊಗರು ನಿವಾಸಿ 31 ವರ್ಷದ ಯುವಕ ಹಾಗೂ ಮಂಗಳೂರಿನ ಯೆಯ್ಯಾಡಿ ಮೂಲದ 35 ವರ್ಷದ ಮಹಿಳೆಗೆ ಕೊರೊನಾ ದೃಢಪಟ್ಟಿದೆ. ಅನುಮಾನದ ಹಿನ್ನೆಲೆ ಜಪ್ಪಿನಮೊಗರದ ಯುವಕ ಕೋವಿಡ್ ಟೆಸ್ಟ್ ಗೆ ಒಳಗಾಗಿದ್ದ. ಸದ್ಯ ಆತನ ವರದಿಯು ಪಾಸಿಟಿವ್ ಬಂದಿದೆ. ಇತ್ತ ಮಹಿಳೆ, ಆಕೆಯ ಪತಿ ಮತ್ತು ಮಗು ಕ್ವಾರಂಟೈನ್‍ನಲ್ಲಿದ್ದರು. ಈ ಕುಟುಂಬವು ಮೇ 14ರಂದು ಮುಂಬೈನಿಂದ ಮಂಗಳೂರಿಗೆ ಬಂದಿತ್ತು.

ಧಾರವಾಡ: ಜಿಲ್ಲೆಯಲ್ಲಿ ಇಂದು ಮತ್ತೆ ನಾಲ್ವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಮಹಾರಾಷ್ಟ್ರದಿಂದ ಬಂದಿದ್ದ ಮೂವರಿಗೆ ಹಾಗೂ ಓರ್ವನಿಗೆ ಹಳೇ ಸಂಪರ್ಕ ಹಿನ್ನೆಲೆ ಸೋಂಕು ತಗುಲಿದೆ.

ಸೋಂಕಿತರ ವಿವರ:
1. ರೋಗಿ-1093: ಉಡುಪಿಯ 54 ವರ್ಷದ ಪುರುಷ. ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
2. ರೋಗಿ-1094: ದಕ್ಷಿಣ ಕನ್ನಡ ಜಿಲ್ಲೆಯ 31 ವರ್ಷದ ಪುರುಷ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
3. ರೋಗಿ-1095: ದಕ್ಷಿಣ ಕನ್ನಡ ಜಿಲ್ಲೆಯ 35 ವರ್ಷದ ಮಹಿಳೆ. ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
4. ರೋಗಿ-1096: ಕೋಲಾರದ 27 ವರ್ಷದ ಪುರುಷ. ಚೆನ್ನೈನ ತಮಿಳುನಾಡಿಗೆ ಪ್ರಯಾಣದ ಹಿನ್ನೆಲೆ
5. ರೋಗಿ-1097: ಮಂಡ್ಯದ 48 ವರ್ಷದ ಪುರುಷ. ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
6. ರೋಗಿ-1098: ಮಂಡ್ಯದ 33 ವರ್ಷದ ಮಹಿಳೆ. ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
7. ರೋಗಿ-1099: ಮಂಡ್ಯದ 9 ವರ್ಷದ ಬಾಲಕ. ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ

8. ರೋಗಿ-1100: ಮಂಡ್ಯದ 11 ವರ್ಷದ ಬಾಲಕಿ. ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
9. ರೋಗಿ-1101: ಮಂಡ್ಯದ 8 ವರ್ಷದ ಬಾಲಕ. ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
10. ರೋಗಿ-1102: ಮಂಡ್ಯದ 28 ವರ್ಷದ ಮಹಿಳೆ. ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
11. ರೋಗಿ-1103: ಮಂಡ್ಯದ 8 ವರ್ಷದ ಬಾಲಕ. ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
12. ರೋಗಿ-1104: ಮಂಡ್ಯದ 58 ವರ್ಷದ ಪುರುಷ. ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
13. ರೋಗಿ-1105: ಮಂಡ್ಯದ 48 ವರ್ಷದ ಮಹಿಳೆ. ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
14. ರೋಗಿ-1106: ಮಂಡ್ಯದ 32 ವರ್ಷದ ಮಹಿಳೆ. ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
15. ರೋಗಿ-1107: ಮಂಡ್ಯದ 32 ವರ್ಷದ ಪುರುಷ. ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
16. ರೋಗಿ-1108: ಮಂಡ್ಯದ 75 ವರ್ಷದ ವೃದ್ಧೆ. ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
17. ರೋಗಿ-1109: ಮಂಡ್ಯದ 44 ವರ್ಷದ ಪುರುಷ. ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ

18. ರೋಗಿ-1110: ಮಂಡ್ಯದ 52 ವರ್ಷದ ಪುರುಷ. ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
19. ರೋಗಿ-1111: ಮಂಡ್ಯದ 35 ವರ್ಷದ ಮಹಿಳೆ. ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
20. ರೋಗಿ-1112: ಮಂಡ್ಯದ 65 ವರ್ಷದ ವೃದ್ಧೆ. ರೋಗಿ 869ರ ಸಂಪರ್ಕ
21. ರೋಗಿ-1113: ಮಂಡ್ಯದ 60 ವರ್ಷದ ವೃದ್ಧೆ. ರೋಗಿ 869ರ ಸಂಪರ್ಕ
22. ರೋಗಿ-1114: ಮಂಡ್ಯದ 28 ವರ್ಷದ ಯುವಕ. ರೋಗಿ 869ರ ಸಂಪರ್ಕ
23. ರೋಗಿ-1115: ಮಂಡ್ಯದ 32 ವರ್ಷದ ಮಹಿಳೆ. ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
24. ರೋಗಿ-1116: ಮಂಡ್ಯದ 39 ವರ್ಷದ ಪುರುಷ. ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
25. ರೋಗಿ-1117: ಮಂಡ್ಯದ 1 ವರ್ಷದ ಮಗು. ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ

26. ರೋಗಿ-1,118: ಹಾಸನದ 37 ವರ್ಷದ ಮಹಿಳೆ. ಮಹಾರಾಷ್ಟ್ರ, ಮುಂಬೈಗೆ ಪ್ರಯಾಣಿಸಿರುವ ಹಿನ್ನೆಲೆ.
27. ರೋಗಿ-1,119: ಹಾಸನದ 33 ವರ್ಷದ ಪುರುಷ. ಮಹಾರಾಷ್ಟ್ರ, ಮುಂಬೈಗೆ ಪ್ರಯಾಣಿಸಿರುವ ಹಿನ್ನೆಲೆ.
28. ರೋಗಿ-1,120: ಹಾಸನದ 22 ವರ್ಷದ ಯುವತಿ. ಮಹಾರಾಷ್ಟ್ರ, ಮುಂಬೈಗೆ ಪ್ರಯಾಣಿಸಿರುವ ಹಿನ್ನೆಲೆ.
29. ರೋಗಿ-1,121: ಹಾಸನದ 03 ವರ್ಷದ ಹೆಣ್ಣು ಮಗು. ಮಹಾರಾಷ್ಟ್ರ, ಮುಂಬೈಗೆ ಪ್ರಯಾಣಿಸಿರುವ ಹಿನ್ನೆಲೆ.
30. ರೋಗಿ-1,122: ವಿಜಯಪುರದ 35 ವರ್ಷದ ಮಹಿಲೆ. ರೋಗಿ-577 ಜೊತೆ ಸಂಪರ್ಕ.
31. ರೋಗಿ-1,123: ಧಾರವಾಡದ 39 ವರ್ಷದ ಪುರುಷ. ಮಹಾರಾಷ್ಟ್ರ, ಮುಂಬೈಗೆ ಪ್ರಯಾಣಿಸಿರುವ ಹಿನ್ನೆಲೆ.
32. ರೋಗಿ-1,124: ಧಾರವಾಡದ 16 ವರ್ಷದ ಬಾಲಕ. ರೋಗಿ-589 ಜೊತೆ ಸಂಪರ್ಕ.
33. ರೋಗಿ-1,125: ಮಂಡ್ಯ 53 ವರ್ಷದ ಪುರುಷ. ರೋಗಿ-869 ಸಂಪರ್ಕ.
34. ರೋಗಿ-1,126: ಶಿವಮೊಗ್ಗದ 24 ವರ್ಷದ ಯುವಕ. ಮಹಾರಾಷ್ಟ್ರ, ಮುಂಬೈಗೆ ಪ್ರಯಾಣಿಸಿರುವ ಹಿನ್ನೆಲೆ.
35. ರೋಗಿ-1,127: ಶಿವಮೊಗ್ಗದ 51 ವರ್ಷದ ಪುರುಷ. ಮಹಾರಾಷ್ಟ್ರ, ಮುಂಬೈಗೆ ಪ್ರಯಾಣಿಸಿರುವ ಹಿನ್ನೆಲೆ.

36. ರೋಗಿ-1,128: ಕೋಲಾರದ 49 ವರ್ಷದ ಪುರುಷ. ತೀವ್ರ ಉಸಿರಾಟದ ತೊಂದರೆ.
37. ರೋಗಿ-1,129: ಕಲಬುರಗಿಯ 35 ವರ್ಷದ ಮಹಿಲೆ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
38. ರೋಗಿ-1,130: ಕಲಬುರಗಿಯ 55 ವರ್ಷದ ಪುರುಷ. ಕಲಬುರಗಿ ಜಿಲ್ಲೆಯ ಕಂಟೈನ್‍ಮೆಂಟ್ ಝೋನ್ ಸಂಪರ್ಕ.
39. ರೋಗಿ-1,131: ಕಲಬುರಗಿಯ 10 ವರ್ಷದ ಬಾಲಕ. ಮಹಾರಾಷ್ಟ್ರ, ಮುಂಬೈಗೆ ಪ್ರಯಾಣಿಸಿರುವ ಹಿನ್ನೆಲೆ.
40. ರೋಗಿ-1,132: ಕಲಬುರಗಿಯ 55 ವರ್ಷದ ಪುರುಷ. ರೋಗಿ-927 ಸಂಪರ್ಕ.
41. ರೋಗಿ-1,133: ಕಲಬುರಗಿಯ 36 ವರ್ಷದ ಪುರುಷ. ಮಹಾರಾಷ್ಟ್ರ, ಮುಂಬೈಗೆ ಪ್ರಯಾಣಿಸಿರುವ ಹಿನ್ನೆಲೆ.
42. ರೋಗಿ-1,134: ಕಲಬುರಗಿಯ 50 ವರ್ಷದ ಮಹಿಳೆ. ರೋಗಿ-927 ಸಂಪರ್ಕ.
43. ರೋಗಿ-1,135: ಕಲಬುರಗಿಯ 13 ವರ್ಷದ ಯುವಕ. ಮಹಾರಾಷ್ಟ್ರ, ಮುಂಬೈಗೆ ಪ್ರಯಾಣಿಸಿರುವ ಹಿನ್ನೆಲೆ.
44. ರೋಗಿ-1,136: ಕಲಬುರಗಿಯ 07 ವರ್ಷದ ಯುವಕ. ಮಹಾರಾಷ್ಟ್ರ, ಮುಂಬೈಗೆ ಪ್ರಯಾಣಿಸಿರುವ ಹಿನ್ನೆಲೆ.
45. ರೋಗಿ-1,137: ಕಲಬುರಗಿಯ 40 ವರ್ಷದ ಪುರುಷ. ಮಹಾರಾಷ್ಟ್ರ, ಮುಂಬೈಗೆ ಪ್ರಯಾಣಿಸಿರುವ ಹಿನ್ನೆಲೆ.

46. ರೋಗಿ-1,138: ಕಲಬುರಗಿಯ 55 ವರ್ಷದ ಪುರುಷ. ಮಹಾರಾಷ್ಟ್ರ, ಮುಂಬೈಗೆ ಪ್ರಯಾಣಿಸಿರುವ ಹಿನ್ನೆಲೆ.
47. ರೋಗಿ-1,139: ಯಾದಗಿರಿಯ 30 ವರ್ಷದ ಪುರುಷ. ಮಹಾರಾಷ್ಟ್ರ, ಥಾಣೆ ಪ್ರಯಾಣಿಸಿರುವ ಹಿನ್ನೆಲೆ.
48. ರೋಗಿ-1,140: ಯಾದಗಿರಿಯ 22 ವರ್ಷದ ಯುವಕ. ಮಹಾರಾಷ್ಟ್ರ, ಮುಂಬೈಗೆ ಪ್ರಯಾಣಿಸಿರುವ ಹಿನ್ನೆಲೆ.
49. ರೋಗಿ-1,141: ಯಾದಗಿರಿಯ 34 ವರ್ಷದ ಪುರುಷ. ಮಹಾರಾಷ್ಟ್ರ, ಥಾಣೆ ಪ್ರಯಾಣಿಸಿರುವ ಹಿನ್ನೆಲೆ.
50. ರೋಗಿ-1,142: ಧಾರವಾಡದ 28 ವರ್ಷದ ಯುವತಿ. ಮಹಾರಾಷ್ಟ್ರ, ಮುಂಬೈಗೆ ಪ್ರಯಾಣಿಸಿರುವ ಹಿನ್ನೆಲೆ.
51. ರೋಗಿ-1,143: ಧಾರವಾಡದ 25 ವರ್ಷದ ಪುರುಷ. ಮಹಾರಾಷ್ಟ್ರ, ಕೊಲ್ಲಾಪುರ ಪ್ರಯಾಣಿಸಿರುವ ಹಿನ್ನೆಲೆ.
52. ರೋಗಿ-1,144: ಹಾಸನ 28 ವರ್ಷದ ಯುವಕ. ಮಹಾರಾಷ್ಟ್ರ, ಮುಂಬೈಗೆ ಪ್ರಯಾಣಿಸಿರುವ ಹಿನ್ನೆಲೆ.
53. ರೋಗಿ-1,145: ಹಾಸನ 24 ವರ್ಷದ ಯುವಕ. ಮಹಾರಾಷ್ಟ್ರ, ಮುಂಬೈಗೆ ಪ್ರಯಾಣಿಸಿರುವ ಹಿನ್ನೆಲೆ.
54. ರೋಗಿ-1,146: ಕೋಲಾರದ 43 ವರ್ಷದ ಪುರುಷ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

 


Spread the love

About Laxminews 24x7

Check Also

ಯಾರಿಗೂ ಅಭ್ಯರ್ಥಿ ಘೋಷಣೆ ಹಕ್ಕಿಲ್ಲ: ಡಿ.ಕೆ.ಶಿವಕುಮಾರ್‌

Spread the love ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಗಾಗಿ ಅಭ್ಯರ್ಥಿಗಳನ್ನು ಘೋಷಿಸುವ ಹಕ್ಕು ಕೆಪಿಸಿಸಿ ಅಧ್ಯಕ್ಷನಾದ ನನಗೂ ಇಲ್ಲ, ಪ್ರತಿಪಕ್ಷ ನಾಯಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ