ಗೋಕಾಕ ನಗರದ ವಾರ್ಡ ನಂಬಯ 31 ರಲ್ಲಿ ಇರುವ ಕ್ರಶ್ಚಿಯನ್ ಸಮುದಾಯದ ರುದ್ರಭೂಮಿಯು ಅಧಿಕೃತವಾಗಿದೆ ಆದರೂ ಕೆಲವರು ಅದನ್ನು ರದ್ದು ಮಾಡುವಂತೆ ಮನವಿ ಮಾಡಿದ್ದು ಅದನ್ನು ತಿರಸ್ಕರಿಸಬೇಕೆಂದು ಗೋಕಾಕ ಕ್ರೈಸ್ಥ ಸಮುದಾಯದ ಟ್ರಸ್ಟ ವತಿಯಿಂದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದರು
ಇಂದು ಮನವಿ ಸಲ್ಲಿಸಿದ ಅವರು ಗೋಕಾಕ ನಗರದಲ್ಲಿರ ವಾರ್ಡ್ ನಂ 31 ರಲ್ಲಿ ಬರುವ ಜ್ಞಾನ ಮಂದಿರ ಹತ್ತಿರದ ಕ್ರೈಸ್ಥರ 0.10 ಗುಂಟೆ ರುದ್ರ ಭೂಮಿಯು ಅಧಿಕೃತವಾದ ದಾಖಲೆಯನ್ನು ಹೊಂದಿದೆ. ಅದಕ್ಕೆ ಸಂಬಂದಿಸಿದಂತೆ ಎಲ್ಲ ದಾಖಲೆಗಳಿದ್ದು ಗೋಕಾಕ ತಹಸಿಲ್ದಾರರು ಮತ್ತು ಪೌರಾಯುಕ್ತರು ನಮ್ಮ ಸಮುದಾಯಕ್ಕೆ ಕಬ್ಜಾ ನೀಡಿದ್ದಾರೆ ಆದರೆ ಅದರ ಸುತ್ತ ಮುತ್ತಲಿನ ನಿವಾಸಿಗಳು ಇಲ್ಲ ಸಲ್ಲದ ಆರೋಪ ಮಾಡಿ ರುದ್ರ ಭೂಮಿಯನ್ನು ರದ್ದು ಮಾಡುವಂತೆ ಮನವಿ ಮಾಡಿದ್ದಾರೆಂದು ತಿಳಿದು ಬಂದಿದೆ ಅದ್ದರಿಂದ ಅವರ ಮನವಿಯನ್ನು ತೆಗೆದು ಹಾಕಬೇಕೆಂದು ವಿನಂತಿಸಿದರು