Breaking News

ಡಿ.ಕೆ. ಶಿವಕುಮಾರ್​ ಖಂಡಿತ ಸಿಎಂ ಆಗ್ತಾರೆ: ವಿನಯ್​ ಗೂರುಜಿ

Spread the love

ಚಿಕ್ಕೋಡಿ(ಬೆಳಗಾವಿ): “ಅಜ್ಜಯ್ಯನ ಮೇಲಿರುವ ಗುರು ನಿಷ್ಠೆ, ಪಕ್ಷ ನಿಷ್ಠೆ, ಹಿರಿಯರ ಮೇಲಿರುವ ಭಕ್ತಿ ಮತ್ತು ನಾಟಕವಿಲ್ಲದ ಮಾತು ನೋಡಿದಾಗ ಡಿ.ಕೆ. ಶಿವಕುಮಾರ್​ ಅವರಿಗೆ ಮುಖ್ಯಮಂತ್ರಿಯಾಗಿ ಸೇವೆ ಮಾಡುವ ಅವಕಾಶ ಭಗವಂತ ಕೊಡಲಿ. ಅವರ ಗುರುಗಳ ದಯೆಯಿಂದ ಅದು ಖಂಡಿತ ಆಗುತ್ತದೆ ಎಂಬುದು ನನ್ನ ನಂಬಿಕೆ” ಎಂದು ಅವಧೂತ ವಿನಯ್ ಗುರೂಜಿ ಹೇಳಿದರು.

 

ಹುಕ್ಕೇರಿ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ” ಸಿದ್ದರಾಮಯ್ಯನವರ ನಂತರ ಸಿಎಂ ಆಗುವ ಅವಕಾಶ ಸಿಗುತ್ತದೆ ಎಂದರೆ ಅದು ಡಿ.ಕೆ. ಶಿವಕುಮಾರ್ ಅವರಿಗೆ. ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಲ್ಲಿದ್ದುಕೊಂಡು ಪಕ್ಷ ಸಂಘಟನೆ, ಪಾದಯಾತ್ರೆಯಿಂದ ಹಿಡಿದು ಒಬ್ಬ ನಾಯಕ ಪಕ್ಷಕ್ಕೆ ಏನೆಲ್ಲಾ ಮಾಡಬಹುದೂ ಅಷ್ಟೂ ತಪಸ್ಸನ್ನು ಅವರು ಮಾಡಿದ್ದಾರೆ” ಎಂದರು.


Spread the love

About Laxminews 24x7

Check Also

ಕೆಪಿಎಸ್‌ಸಿ ನೇಮಕಾತಿ ಅಕ್ರಮ- ಎಸ್‌ಐಟಿ ರಚನೆಗೆ ಸುಪ್ರೀಂ ತಡೆ

Spread the loveನವದೆಹಲಿ: ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಕೆಪಿಎಸ್‌ಸಿ  ನೇಮಕಾತಿ ಹಗರಣದ ತನಿಖೆಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ