ಮೂಡಲಗಿ: ಅರಭಾಂವಿ ಕ್ಷೇತ್ರದಲ್ಲಿ ವಾಸಿಸುತ್ತಿರುವ ಪ್ರತಿಯೊಂದು ಕುಟುಂಬಗಳಿಗೆ ಆಹಾರ ಧಾನ್ಯಗಳನ್ನು ನೀಡುವ ಮೂಲಕ ಮಹಾನ್ ದಾನಿಯಾಗಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸತ್ಕಾರ್ಯ ಇಡೀ ರಾಜ್ಯಕ್ಕೆ ಮಾದರಿಯಾಗಿದೆ.
ಸಮಾಜ ಮುಖಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಬಾಲಚಂದ್ರ ಜಾರಕಿಹೊಳಿ ಅವರು ಕ್ಷೇತ್ರದ ಜನರ ಹೃದಯದಲ್ಲಿ ನೆಲೆಸಿರುವ ಹೃದಯವಂತ.
ರವಿವಾರದಂದು ಗ್ರಾಮಗಳಲ್ಲಿ ಸರ್ವ ಕುಟುಂಬಗಳಿಗೆ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಆಹಾರ ಧಾನ್ಯಗಳ ಕಿಟ್ಟ್ ವಿತರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು
ಅರಭಾಂವಿ ವಿಧಾನ ಸಭಾ ಮತ ಕ್ಷೇತ್ರದಲ್ಲಿ 34 ಗ್ರಾಮ ಪಂಚಾಯತಿಗಳಿದ್ದು, ಇದರಲ್ಲಿ 77 ಗ್ರಾಮಗಳಿವೆ ಕ್ಷೇತ್ರದ ಪ್ರತಿಯೊಂದು ಕುಟುಂಬಗಳಿಗೆ ಬಡವ-ಶ್ರೀಮಂತ ಎಂಬ ಬೇಧ ಭಾವ ಮಾಡದೇ ಸರ್ವ ಕುಟುಂಬಗಳಿಗೆ ಸ್ವಂತ ವೆಚ್ಚದಲ್ಲಿ ನೀಡುತ್ತಿರುವ ಕಾರ್ಯ ಇತರರಿಗೆ ಮಾದರಿಯಾಗಿದೆ. 76258 ಕುಟುಂಬಗಳಿಗೆ ಒಟ್ಟು ಹತ್ತು ದಿನಗಳು ಆಗುವಷ್ಟು ದಿನಸಿ ದಿನ ಬಳಕೆ ವಸ್ತುಗಳನ್ನು ಕ್ಷೇತ್ರದ ಮತದಾರರಿಗೆ ನೀಡುತ್ತಿದ್ದಾರೆ.