ಗೋಕಾಕ:ಬೇರೆ ಜಿಲ್ಲೆ ಹಾಗೂ ಬೇರೆ ರಾಜ್ಯಗಳಿಂದ ಯಾರೆ ನಗರಕ್ಕೆ ಬಂದರೆ ಅಂತವರ ಬಗ್ಗೆ ತಾಲೂಕಾ ಆಡಳಿತಕ್ಕೆ ಅಥವಾ ಪೊಲೀಸ ಇಲಾಖೆಗೆ ತಕ್ಷಣ ಮಾಹಿತಿ ನೀಡಬೇಕೆಂದು ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ಕೋರಿದ್ದಾರೆ
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸರಕಾರದ ಹಾಗೂ ಆಯಾ ಜಿಲ್ಲಾಧಿಕಾರಿಗಳ ಅನುಮತಿ ಹಾಗೂ ವೈದ್ಯಕೀಯ ತಪಾಸಣೆಯೊಂದಿಗೆ ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಂದ ವಲಸೆ ಕಾರ್ಮಿಕರು ಹಾಗೂ ಸಾರ್ವಜನಿಕರು ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ.
ಹಲವರು ಅನುಮತಿ ಪಡೆದು ತಮ್ಮ ಊರುಗಳಿಗೆ ಮರಳಿದರೆ ಕೆಲವರು ಅನುಮತಿ ಪಡೆಯದೇ ತಮ್ಮ ತಮ್ಮ ಊರುಗಳಿಗೆ ಸಂಚರಿಸುತ್ತಿದ್ದಾರೆ ಅಂತಹವರು ಯಾರೆ ಆಗಲಿ ಗೋಕಾಕ ನಗರ ಹಾಗೂ ಗ್ರಾಮಗಳಿಗೆ ಆಗಮಿಸಿದರೆ ಅಂತಹವರ ಬಗ್ಗೆ ಸ್ಥಳೀಯ ಪ್ರಾಧಿಕಾರ , ತಾಲೂಕಾ ಆಡಳಿತ ಹಾಗೂ ಪೊಲೀಸ ಇಲಾಖೆಗೆ ಮಾಹಿತಿ ನೀಡಲು ಕೊರೋನಾ ಸೈನಿಕರು ಶ್ರಮಿಸಬೇಕು.
ಅವರನ್ನು ವೈದ್ಯಕೀಯ ತಪಾಸಣೆ ಮಾಡಿಸಿ ಹೋಂ ಕ್ವಾರಂಟೈನ್ ಮಾಡಿಸುವುದು ಅಗತ್ಯವಿದೆ. ಆದ್ದರಿಂದ ಈ ಬಗ್ಗೆ ನಿಗಾ ವಹಿಸಲು ಗ್ರಾಮ ಹಾಗೂ ನಗರಗಳಲ್ಲಿ ತಯಾರಾದ ಕಾರ್ಯಪಡೆಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ತಿಳಿಸಿದ್ದಾರೆ .