Breaking News

ಚಿನ್ನದ ಅಂಗಡಿಯ ಮಾಲೀಕನ ಪುತ್ರನನ್ನು ಅವರ ಮನೆಯಲ್ಲಿಯೇ ಕೊಲೆ

Spread the love

ಹುಣಸಗಿ: ಪಟ್ಟಣದಲ್ಲಿ ಮಧ್ಯಾಹ್ನ ಚಿನ್ನದ ಅಂಗಡಿಯ ಮಾಲೀಕನ ಪುತ್ರನನ್ನು ಅವರ ಮನೆಯಲ್ಲಿಯೇ ಕೊಲೆ ಮಾಡಿದ ಘಟನೆ ಬುಧವಾರ ನಡೆದಿದೆ.

ಕೊಲೆಯಾದ ಯುವಕನನ್ನು ನರೇಂದ್ರ ಶಿರೂರಿ (22) ಎಂದು ಗುರುತಿಸಲಾಗಿದೆ. ಮಧ್ಯಾಹ್ನ ಮನೆಗೆ ಊಟಕ್ಕೆ ಬಂದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಪಟ್ಟಣ ಸೇರಿದಂತೆ ತಾಲ್ಲೂಕಿನೆಲ್ಲೆಡೆ ಜನ ಭಯಭೀತರಾಗಿದ್ದು, ಜನ ತಂಡೋಪತಂಡವಾಗಿ ಕೊಲೆಯಾದ ಸ್ಥಳದತ್ತ ಆಗಮಿಸುತ್ತಿದ್ದರು.

‘ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಕಿಶೋರ ಕಣ್ಮರೆಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದು, ಮೃತ ಯುವಕನ ತಂದೆ ಜಗದೀಶ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಘಟನೆಯ ವಿಷಯ ತಿಳಿದು ಸ್ಥಳಕ್ಕೆ ಯಾದಗಿರಿ ಎಸ್.ಪಿ ಋಷಿಕೇಶ ಭಗವಾನ್ ಸೋನವಣೆ, ಪ್ರೊಬೇಷನರಿ ಐಪಿಎಸ್ ಅಧಿಕಾರಿ ಶಿವಾಂಶು ರಜಪೂತ್, ಡಿವೈಎಸ್ಪಿ ವೆಂಕಟೇಶ ಉಗಿಬಂಡಿ, ಹುಣಸಗಿ ಸಿಪಿಐ ದೌಲತ್ ಎನ್.ಕೆ, ಪಿಎಸ್‌ಐ ಬಾಪುಗೌಡ ಪಾಟೀಲ, ಬಾಶುಮೀಯಾ ಕೊಂಚೂರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು, ಪೊಲೀಸ್ ಶ್ವಾನದಳ ಆಗಮಿಸಿದ್ದರು.

ಆರೋಪಿ ಪತ್ತೆಗಾಗಿ ಪ್ರತ್ಯೇಕ 4 ತಂಡಗಳನ್ನು ರಚಿಸಿ ವ್ಯಾಪಕ ಜಾಲ ಬೀಸಲಾಗಿದೆ ಎಂದು ಡಿವೈಎಸ್ಪಿ ವೆಂಕಟೇಶ ಉಗಿಬಂಡಿ ಸುದ್ದಿಗಾರರಿಗೆ ತಿಳಿಸಿದ್ದಾರೆ.


Spread the love

About Laxminews 24x7

Check Also

ಅನ್ಯ ರಾಜ್ಯಗಳ ಪೊಲೀಸ್ ಸಿಬ್ಬಂದಿಯ ಕ್ಯಾಪ್‌ ಪರಿಶೀಲಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್​​

Spread the loveಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕಾನ್ಸ್‌ಟೇಬಲ್‌ಗಳು ಬಳಸುತ್ತಿರುವ ಬ್ರಿಟಿಷರ ಕಾಲದ ಕ್ಯಾಪ್‌ಗಳ ಬದಲಾವಣೆಯ ಚರ್ಚೆಗಳು ಚಾಲ್ತಿಯಲ್ಲಿರುವಾಗ, ಅನ್ಯ ರಾಜ್ಯಗಳಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ