Breaking News
Home / ಜಿಲ್ಲೆ / ಚಿತ್ರದುರ್ಗ / ಸ್ಲೀಪರ್ ಕೋಚ್ ಬಸ್ಸೊಂದು ಏಕಾಏಕಿ ಹೊತ್ತಿ ಉರಿದಿರುವ ಘಟನೆ ಚಿದ್ರದುರ್ಗ ಜಿಲ್ಲೆ ಹಿರಿಯೂರು ಬಳಿ ನಡೆದಿದೆ.

ಸ್ಲೀಪರ್ ಕೋಚ್ ಬಸ್ಸೊಂದು ಏಕಾಏಕಿ ಹೊತ್ತಿ ಉರಿದಿರುವ ಘಟನೆ ಚಿದ್ರದುರ್ಗ ಜಿಲ್ಲೆ ಹಿರಿಯೂರು ಬಳಿ ನಡೆದಿದೆ.

Spread the love

ಚಲಿಸುತ್ತಿದ್ದ ಕೆಎಸ್ಆರ್​ಟಿಸಿ ಸ್ಲೀಪರ್ ಕೋಚ್ ಬಸ್ಸೊಂದು ಏಕಾಏಕಿ ಹೊತ್ತಿ ಉರಿದಿರುವ ಘಟನೆ ಚಿದ್ರದುರ್ಗ ಜಿಲ್ಲೆ ಹಿರಿಯೂರು ಬಳಿ ನಡೆದಿದೆ. ಅದೃಷ್ಟವಶಾತ್​ ಬಸ್​ನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 4ರ ಗಿಡ್ಡೋಬನಹಳ್ಳಿ ಸಮೀಪ ಬೆಳಗಾವಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ನೋಡ ನೋಡುತ್ತಿದ್ದಂತೆಯೇ ಇಡೀ ಬಸ್ ಗೆ ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿದೆ. ಅದೃಷ್ಟವಶಾತ್ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ತೊಂದರೆಯಗೈಲ್ಲ.

ಐಮಂಗಲ ಗೇಟ್​​ ಬಳಿ ಬಸ್​ ಬರುತ್ತಿರುವಾಗ ಬಸ್ ನಲ್ಲಿ ಹೊಗೆ ಕಾಣಿಸಿಕೊಂಡಿದೆ. ಹೊಗೆ ಕಂಡು ಚಾಲಕನಿಗೆ ಬೇರೆ ವಾಹನಗಳ ಚಾಲಕರು ತಿಳಿಸಿದ್ದಾರೆ. ಕೂಡಲೇ ಚಾಲಕ ಬಸ್​ ನಿಲ್ಲಿಸಿ, ಪ್ರಯಾಣಿಕರನ್ನು ಬಸ್​​ನಿಂದ ಇಳಿಸಿದ್ದಾರೆ. ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರು ಬಚಾವಾಗಿದ್ದಾರೆ.

ಬಸ್ಸಿನಲ್ಲಿ ಒಟ್ಟು 30 ಜನ ಪ್ರಯಾಣಿಕರು ಇದ್ದರು ಎನ್ನಲಾಗಿದ್ದು, ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುತ್ತಿದ್ದಾರೆ. ಈ ಬಸ್​​ ಬೆಳಗಾವಿ ಕೆಎಸ್​ ಆರ್​​ಟಿಸಿ ಡಿಪೋ ಗೆ ಸೇರಿದ್ದಾಗಿದೆ.


Spread the love

About Laxminews 24x7

Check Also

ಸಾರ್ವಜನಿಕ ಆಸ್ತಿ ಮಾರಿದ್ದೇ ಮೋದಿ ಸಾಧನೆ: ಖರ್ಗೆ ಟೀಕೆ

Spread the love ನವದೆಹಲಿ: ‘ದೇಶದಲ್ಲಿನ ಸಾರ್ವಜನಿಕ ಆಸ್ತಿಗಳನ್ನು ತನ್ನ ಬಂಡವಾಳಶಾಹಿ ಸ್ನೇಹಿತರಿಗೆ ಅತಿ ಕಡಿಮೆ ಬೆಲೆಗೆ ಮಾರಾಟ ಮಾಡಿರುವುದೇ ಪ್ರಧಾನಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ