Breaking News
Home / ಜಿಲ್ಲೆ / ಮುಂದೆ ನನಗೇನಾದರೂ ತೊಂದರೆಯಾದರೆ ಅದಕ್ಕೆ ಆಡಳಿತ ನಡೆಸುತ್ತಿರುವ ಬಿ ಎಸ್ ವೈ ಆಡಳಿತವೇ ಜವಾಬ್ದಾರಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

ಮುಂದೆ ನನಗೇನಾದರೂ ತೊಂದರೆಯಾದರೆ ಅದಕ್ಕೆ ಆಡಳಿತ ನಡೆಸುತ್ತಿರುವ ಬಿ ಎಸ್ ವೈ ಆಡಳಿತವೇ ಜವಾಬ್ದಾರಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

Spread the love

ವಿಜಯಪುರ: ಮುಂದೆ ತನಗೇನಾದರೂ ತೊಂದರೆಯಾದರೆ ಅದಕ್ಕೆ ಆಡಳಿತ ನಡೆಸುತ್ತಿರುವ ತಾವೇ ಜವಾಬ್ದಾರಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯ ಸರ್ಕಾರ, ಗೃಹ ಇಲಾಖೆ ಹಾಗೂ ಡಿಜಿ-ಐಜಿಪಿಗೆ ಪತ್ರ ಬರೆದಿದ್ದಾರೆ.

ತಮಗೆ ನೀಡಲಾಗಿದ್ದ ಪೊಲೀಸ್ ಭದ್ರತೆ ಹಿಂಪಡೆದ ಬೆನ್ನಲ್ಲೇ ಪತ್ರ ಬರೆದಿರುವ ಯತ್ನಾಳ್, ನಾನು ಪ್ರಖರ ಹಿಂದೂ ಪರ ಸಂಘಟನೆ ಹಾಗೂ ಹೋರಾಟದಲ್ಲಿ ತೊಡಗಿಸಿಕೊಂಡಿದ್ದೇನೆ. ನನ್ನ ಮೇಲೆ ಈ ಹಿಂದೆ ಕೆಲ ಹಿಂದೂ ವಿರೋಧಿ ಹಾಗೂ ಮತಾಂಧ ಶಕ್ತಿಗಳು ದಾಳಿ ಮಾಡುವ ಮುನ್ಸೂಚನೆ ನೀಡಿದ್ದವು. ಈ ಹಿನ್ನೆಲೆಯಲ್ಲಿ ಗುಪ್ತಚರ ಇಲಾಖೆ ಆದೇಶದ ಮೇರೆಗೆ ಈವರೆಗೆ ನನಗೆ ಸೂಕ್ತ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.

ಆದರೆ ಈಗ ನಾನು ಸಿಎಂ ಯಡಿಯೂರಪ್ಪ ವಿರುದ್ಧ ಮಾತನಾಡಿದ್ದಕ್ಕಾಗಿ ನನ್ನ ವಿರುದ್ಧ ದ್ವೇಷದ ರಾಜಕಾರಣ ಮಾಡಲು ಯಡಿಯೂರಪ್ಪ ಹೊರಟಿದ್ದಾರೆ.

ಹೀಗಾಗಿ ಪೊಲಿಸ್ ಭದ್ರತೆಯನ್ನು ಏಕಾಏಕಿ ಹಿಂಪಡೆಯಲಾಗಿದೆ. ತಮ್ಮ ಹಳೆಯ ಚಾಳಿ, ವಿಕೃತ ಮನಸ್ಸನ್ನು ಇದು ಬಿಂಬಿಸುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದರಿಂದ ಜನಪರ ನನ್ನ ಹೋರಾಟವಾಗಲಿ, ಹಿಂದೂ ಸಂಘಟನೆಗಳ ಪರ ನನ್ನ ಕೆಲಸವನ್ನಾಗಲಿ ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ. ನನ್ನ ಹೋರಾಟ ನಿರಂತರ ಹೊರತು ಸರ್ಕಾರವನ್ನು ನಂಬಿ ನಾನು ಹೋರಾಟ ನಡೆಸುತ್ತಿಲ್ಲ ಎಂದು ಹೇಳಿದ್ದಾರೆ.


Spread the love

About Laxminews 24x7

Check Also

ಗೋಕಾಕ : ನಗರದ ಶ್ರೀ ಚನ್ನಬಸವೇಶ್ವರ ವಿದ್ಯಾಪೀಠ ಆವರಣದಲ್ಲಿ 16 ನೇ ಶರಣ ಸಂಸ್ಕøತಿ ಉತ್ಸವದ ಯುವ ಸಮಾವೇಶದಲ್ಲಿ ಐಪಿಎಸ್ ರವಿ ಚಣ್ಣನ್ನವರ ಅವರನ್ನು ಶ್ರೀಮಠದಿಂದ ಸನ್ಮಾನಿಸುತ್ತಿರುವುದು.

Spread the loveಗೋಕಾಕ: ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ, ಸಾಧನೆ ಮಾಡುವ ಛಲ ಇರಬೇಕು. ವಿದ್ಯಾರ್ಜನೆಯೇ ನನ್ನ ಕಸಬು ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ