Breaking News

ನೆನಪಿರಲಿ ಪ್ರೇಮ್‌ ಅವರ ತಾಯಿಗೆ ಕೊರೊನಾ ಪಾಸಿಟಿವ್ :ಆಸ್ಪತ್ರೆಯಿಂದ ಸದ್ಯ ಅವರು ಗುಣಮುಖರಾಗಿ ಮನೆಗೆ ಮರಳಿದ್ದಾರೆ

Spread the love

ಬೆಂಗಳೂರು: ನೆನಪಿರಲಿ ಪ್ರೇಮ್‌ ಅವರ ತಾಯಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಆಸ್ಪತ್ರೆಗೆ ದಾಖಲಾಗಿದ್ರು. ಸದ್ಯ ಅವರು ಗುಣಮುಖರಾಗಿ ಮನೆಗೆ ಮರಳಿದ್ದು, ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹರಿಬಿಡುವುದರ ಮೂಲಕ ಈ ಖುಷಿಯನ್ನ ಪ್ರೇಮ್‌ ಹಂಚಿಕೊಂಡಿದ್ದಾರೆ.

ಇನ್‍ಸ್ಟಾಗ್ರಾಂನಲ್ಲಿ ವಿಡಿಯೋವನ್ನು ಶೇರ್ ಮಾಡಿದ ಪ್ರೇಮ್‌, “ನನ್ನ ತಾಯಿ ಮೊದಲಿಗಿಂತಲೂ ಹೆಚ್ಚು ಆರೋಗ್ಯವಂತರಾಗಿ ಮತ್ತೆ ಮನೆಗೆ ಮರಳಿದ್ದಾರೆ. ಇದಕ್ಕೆ ಕಾರಣರಾದ ಆರೈಕೆ ಮಾಡಿ, ಔಷಧ ನೀಡಿ ಗುಣಪಡಿಸಿದ ವೈದ್ಯರಿಗೆ ಧನ್ಯವಾದಗಳು. ಜೊತೆಗೆ ನಮ್ಮ ತಾಯಿ ಆರೋಗ್ಯವಂತರಾಗಿ ಬರುವಂತೆ ಹಾರೈಕೆ ಮಾಡಿದ ಎಲ್ಲ ಮನಸುಗಳಿಗೂ ಧನ್ಯವಾದ” ಎಂದಿದ್ದಾರೆ.

ಇನ್ನು “60 ವರ್ಷ ಮೇಲ್ಪಟ್ಟವರು, ಬಿಪಿ, ಶುಗರ್ ಇರುವವರಿಗೆ ಕೊರೊನಾ ಬಂದರೆ ಅವರು ಮತ್ತೆ ವಾಪಸ್ ಜೀವಂತವಾಗಿ ಬರುವುದಿಲ್ಲ ಎಂದು ವದಂತಿ ಹರಡಿದೆ.ಆದರೆ ಇದೆಲ್ಲವೂ ಸುಳ್ಳು ಸುದ್ದಿ. ನನ್ನ ತಾಯಿಗೆ 66 ವರ್ಷ, ಅವರಿಗೂ ಬಿಪಿ, ಶುಗರ್ ಇದೆ. ಆದರೂ ಧೈರ್ಯವಾಗಿ ಕೊರೊನಾ ಎದುರಿಸಿ ಮನೆಗೆ ನಗು ನಗುತ್ತಾ ವಾಪಸ್ ಬಂದಿದ್ದಾರೆ. ಹಾಗಾಗಿ ಸೋಂಕಿನ ಬಗ್ಗೆ ಯಾರೂ ಕೂಡ ಆತಂಕ ಪಡುವುದು ಬೇಡ. ಧೈರ್ಯವಾಗಿರಿ” ಎಂದಿದ್ದಾರೆ.


Spread the love

About Laxminews 24x7

Check Also

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಕೊರತೆ – ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

Spread the loveಬೆಂಗಳೂರು: ರಾಜ್ಯಕ್ಕೆ ಈ ಬಾರಿ ಮುಂಗಾರು ಆತಂಕ ದೊಡ್ಡ ಮಟ್ಟದಲ್ಲಿ ತಟ್ಟಲಿದೆ. ವಾಡಿಕೆಗಿಂತ ಈ ಬಾರಿ ಮಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ