Breaking News

ವರ್ಷದ ಹಿಂದೆ ಕಟ್ಟಿದ ಮನೆ ಬೀಳುವ ಆತಂಕ- ಕೊಚ್ಚಿ ಹೋದ ಅಡಿಪಾಯ

Spread the love

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಭಾರೀ ಅವಾಂತರಗಳನ್ನು ಸೃಷ್ಟಿಸುತ್ತಿದೆ. ಇದೀಗ ಕಳೆದವರ್ಷವಷ್ಟೇ ಕಟ್ಟಿದ ಮನೆ ಸಹ ಬೀಳುವ ಹಂತ ತುಲುಪಿದ್ದು, ಅಡಿಪಾಯ ಕೊಚ್ಚಿ ಹೋಗಿದೆ.ಜಿಲ್ಲೆಯ ಮೂಡಿಗೆರೆ ಪಟ್ಟಣದ ಛತ್ರ ಮೈದಾನದಲ್ಲಿ ಮನೆಯ ಅಡಿಪಾಯ ಕುಸಿದು ಬೀಳುವ ಹಂತ ತಲುಪಿದೆ. ನಾಗಮ್ಮ ಅವರಿಗೆ ಸೇರಿದ ಮನೆ ಇದಾಗಿದ್ದು, ಮೂಡಿಗೆರೆಯಲ್ಲಿ ಮಳೆ-ಗಾಳಿ ಅಬ್ಬರದ ಹಿನ್ನೆಲೆ ಮಣ್ಣು ಹೆಚ್ಚು ಕುಸಿಯುತ್ತಿದೆ. ಹೀಗಾಗಿ ಅಡಿಪಾಯ ಸಹ ಕೊಚ್ಚಿ ಹೋಗಿದೆ. ಕಳೆದ ವರ್ಷ ಕಟ್ಟಿದ ಮನೆ, ಇದೀಗ ಬೀಳುವ ಆತಂಕ ಎದುರಾಗಿದೆ. ಮನೆಯ ಸುತ್ತಲಿನ ಮಣ್ಣು ಕೊಚ್ಚಿಕೊಂಡು ಹೋಗಿದೆ.

 

ಮನೆ ಗೃಹ ಪ್ರವೇಶವಾಗಿ ವರ್ಷವೂ ಕಳೆದಿಲ್ಲ. ಸಾಲ ಮಾಡಿ ಕಟ್ಟಿದ ಮನೆ ಸ್ಥಿತಿ ಕಂಡು ನಾಗಮ್ಮ ಕಂಗಾಲಾಗಿದ್ದಾರೆ. ಮನೆಯನ್ನು ಹೇಗೆ ಕಾಪಾಡಿಕೊಳ್ಳುವುದು ಎಂಬ ಆತಂಕದಲ್ಲಿದ್ದಾರೆ. ಇದರಿಂದಾಗಿ ನಾಗಮ್ಮರ ಅಕ್ಕಪಕ್ಕದ ಮನೆಯವರಲ್ಲೂ ಆತಂಕ ಮನೆ ಮಾಡಿದೆ.


Spread the love

About Laxminews 24x7

Check Also

ಜೋಕಾಲಿ ಹಾಕಿದ್ದ ಸೀರೆ ಕೊರಳಿಗೆ ಸುತ್ತಿಕೊಂಡು 10 ವರ್ಷದ ಬಾಲಕಿ ಸಾವು

Spread the loveಚಿಕ್ಕಮಗಳೂರು: ಮನೆಯಲ್ಲಿ ಜೋಕಾಲಿ ಹಾಕಿದ್ದ ಸೀರೆ ಕೊರಳಿಗೆ ಸುತ್ತಿಕೊಂಡು 10 ವರ್ಷದ ಬಾಲಕಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ