Breaking News
Home / ರಾಜಕೀಯ / ನಾಳೆ ಸಂಜೆ 4.30ಕ್ಕೆ ಪಿಯು ಫಲಿತಾಂಶ; ರಿಜಿಸ್ಟರ್​​ ನಂಬರ್​​, ರಿಸ್ಟಲ್ಟ್​​​​ ಪಡೆಯುವ ವಿಧಾನ ಇಲ್ಲಿದೆ

ನಾಳೆ ಸಂಜೆ 4.30ಕ್ಕೆ ಪಿಯು ಫಲಿತಾಂಶ; ರಿಜಿಸ್ಟರ್​​ ನಂಬರ್​​, ರಿಸ್ಟಲ್ಟ್​​​​ ಪಡೆಯುವ ವಿಧಾನ ಇಲ್ಲಿದೆ

Spread the love

2020-21ನೇ ಸಾಲಿನ ಪಿಯುಸಿ ಫಲಿತಾಂಶ (PU Result) ನಾಳೆ ಸಂಜೆ ಪ್ರಕಟವಾಗಲಿದೆ ಎಂದು ಪಿಯು ಮಂಡಳಿ ನಿರ್ದೇಶಕಿ ಸ್ನೇಹಲ್ ತಿಳಿಸಿದ್ದಾರೆ. ನಾಳೆ ಸಂಜೆ 4. 30ಕ್ಕೆ ಪಿಯು ಮಂಡಳಿ ಜಾಲತಾಣದಲ್ಲಿ ಫಲಿತಾಂಶ ಪ್ರಕಟವಾಗಿದೆ. https://pue.kar.nic.in/ ವೈಬ್ ಸೈಟ್ ಮೂಲಕ ಫಲಿತಾಂಶ ಪ್ರಕಟವಾಗಲಿದ್ದು, ಫಲಿತಾಂಶಕ್ಕೂ ಮುನ್ನ Know my register numbar ಮೂಲಕ ರಿಜಿಸ್ಟರ್​ ನಂಬರ್ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಕೊರೋನಾ ಹಿನ್ನಲೆ ಈ ಬಾರಿ ಪರೀಕ್ಷೆ ನಡೆಸದೇ ಎಸ್​ಎಸ್​ಎಲ್​ಸಿ ಮತ್ತು ಪ್ರಥಮ ಪಿಯುಸಿ ಫಲಿತಾಂಶ ಹಾಗೂ ಆಂತರಿಕ ಅಂಕಗಳ ಮೌಲ್ಯ ಮಾಪನ ನಡೆಸಿ ಫಲಿತಾಂಶ ಪ್ರಕಟ ಮಾಡಲಾಗುತ್ತಿದೆ. ನಾಳೆ ಪ್ರಕಟವಾಗುವ ಫಲಿತಾಂಶ ವಿದ್ಯಾರ್ಥಿಗಳು ಒಪ್ಪಿಗೆ ಇಲ್ಲವಾದರೆ ಅವರು ಆಗಸ್ಟ್ ನಲ್ಲಿ ಪರೀಕ್ಷೆ ಬರೆಯಬಹುದಾಗಿದೆ. ಪರೀಕ್ಷಾ ಫಲಿತಾಂಶ ತಿರಸ್ಕರಿಸುವ ವಿದ್ಯಾರ್ಥಿಗಳು ಮತ್ತೆ ಹಳೆ ಅಂಕ ಪಡೆಯಲು ಅವಕಾಶ ಇಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿದೆ. ಈ ವರ್ಷ 5 ಲಕ್ಷ 90 ಸಾವಿರದ 153 ಹೊಸ ವಿದ್ಯಾರ್ಥಿಗಳು ಮತ್ತು 76 ಸಾವಿರ 344 ರಿಪೀಟರ್ಸ್ ಸೇರಿದಂತೆ ಒಟ್ಟು 6 ಲಕ್ಷ 66 ಸಾವಿರದ 497 ವಿದ್ಯಾರ್ಥಿಗಳ ಫಲಿತಾಂಶ ನಾಳೆ ಪ್ರಕಟವಾಗಲಿದೆ.

ಫಲಿತಾಂಶ ನೋಡುವುದು ಹೇಗೆ? (how to Check PU Result)
ಪ್ರತಿ ವರ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದ ರಿಜಿಸ್ಟರ್​ ನಂ ಮೂಲಕ ಫಲಿತಾಂಶವನ್ನು ನೋಡುತ್ತಿದ್ದರು. ಆದರೆ, ಈ ಬಾರಿ ಪರೀಕ್ಷೆ ಬರೆಯದೇ ಯಾವ ರಿಜಿಸ್ಟರ್​ ನಂಬರ್​ ಮೂಲಕ ಫಲಿತಾಂಶ ನೋಡುವುದು ಎಂಬ ಅನುಮಾನ ಇದೆ. ಇದೇ ಕಾರಣಕ್ಕೆ ಪಿಯು ಮಂಡಳಿ ಈ ಬಾರಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಪ್ರತ್ಯೇಕ ರಿಜಿಸ್ಟರ್​ ನಂಬರ್​ ಸೃಷ್ಟಿಸಿದೆ. ಇದನ್ನು ಕೂಡ ಮಂಡಳಿಯ ವೆಬ್​ಸೈಟ್​ ಮೂಲಕವೇ ಪಡೆಯ ಬೇಕಾಗಿದೆ, ಈಗಾಗಲೇ ಈ ರಿಜಿಸ್ಟರ್​ ನಂಬರ್​ ಪಡೆಯಲು ಅವಕಾಶ ನೀಡಲಾಗಿದೆ.

ಮಂಡಳಿಯ ವೆಬ್​ಸೈಟ್ http://pue.kar.nic.in/​ ತೆರೆದಾಕ್ಷಣ ನಿಮಗೆ Know my register numbar ಎಂಬ ಲಿಂಕ್​ ಸಿಗುತ್ತದೆ. ಅದನ್ನು ಕ್ಲಿಕ್​ ಮಾಡಿದರೆ ಅದರ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ರಿಜಿಸ್ಟರ್ ನಂಬರ್​ ಸಿಗಲಿದೆ. ಈ ಲಿಂಕ್​ ಮೂಲಕ ವಿದ್ಯಾರ್ಥಿಗಳು ಫಲಿತಾಂಶ ಪಡೆಯಬಹುದು.

ಪಿಯು ಫಲಿತಾಂಶ ಪಡೆಯಲು ಇಲ್ಲಿ ಕ್ಲಿಕ್​ ಮಾಡಿ. https://dpue-exam.karnataka.gov.in/iipu2021_registrationnumber/regnumber


Spread the love

About Laxminews 24x7

Check Also

ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ.: ಲಕ್ಷ್ಮೀ ಹೆಬ್ಬಾಳ್ಕರ್

Spread the love ಬೆಳಗಾವಿ: ರಾಜ್ಯದ ರಾಜಕಾರಣ, ದೇಶದ ರಾಜಕಾರಣ ತಲೆ ತಗ್ಗಿಸುವ ಘಟನೆಯಿದು. ನಾಗರಿಕ ಸಮಾಜ ತಲೆ ತಗ್ಗಿಸುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ