Breaking News
Home / ಜಿಲ್ಲೆ / ಬೆಂಗಳೂರು / ಮೇದಾರ ಸಮಾಜದ ಮಗಳ ವಾಕ್ಚಾತುರ್ಯ ಮೆಚ್ಚಿ ಶಹಬಾಶ್.. ತಂಗಿ ಎಂದ ಕರುನಾಡು..!!

ಮೇದಾರ ಸಮಾಜದ ಮಗಳ ವಾಕ್ಚಾತುರ್ಯ ಮೆಚ್ಚಿ ಶಹಬಾಶ್.. ತಂಗಿ ಎಂದ ಕರುನಾಡು..!!

Spread the love

ಮಾತುಗಳಲ್ಲಿ ತೊದಲಿಕೆ ಇರಲಿಲ್ಲ,ಮಾಧ್ಯಮ ಮುಂದೆ ತನ್ನ ಕಷ್ಟ ಹೇಳಿಕೊಳ್ಳಲು ಹಿಂಜರಿಕೆ ತೊರಲಿಲ್ಲ, ಬಡತನ ಕಲಿಸಿದ್ದ ಪಾಠದ ಪದಗಳು ಜಲಪಾತದಲ್ಲಿ ಹರಿಯುವ ನೀರಿನಂತೆ ಮಾತಿನ ಮೂಲಕ ಹರಿಯ ತೊಡಗಿದ್ದವು,ಮನದಲ್ಲಿ ತುಂಬಿದ್ದ ನೋವುಗಳು ಸಾಲು ಸಾಲಾಗಿ ಪದಗಳ ಮೂಲಕ ಹೊರಹೊಮ್ಮುತ್ತಿದ್ದವು,ಸಂಕಷ್ಟದ ಸಮಯದಲ್ಲಿ ಎದುರಿಸಿದ ಸವಾಲುಗಳು ಆ ದಿಟ್ಟ ನೊಟದ ಮೂಲಕ ಎದ್ದು ಕಾಣುತ್ತಿದ್ದವು.ನಾಲ್ಕೇ… ನಾಲ್ಕು… ಸಾಲಿನಲ್ಲಿ ಉದುರಿದ ಆ ಪದಗಳು ಕರುನಾಡಿನಲ್ಲಿ ಮನೆ ಮಾತಾಯಿತು.ಲಕ್ಷಾಂತರ ಜನರು ಭಲೇ… ಸಹೋದರಿ ನಿನ್ನ ಈ ದಿಟ್ಟ ಮಾತುಗಳು ನಮ್ಮ ಆತ್ಮಸಾಕ್ಷಿಯನ್ನೇ ಬಡೆದೆಬಿಸಿದವು ಎಂದು ಆಡಳಿಕೊಳ್ಳುವಂತೆ ಮಾಡಿದವು.ಆ ತೀಕ್ಷ್ಣ ನುಡಿಗಳು
ಸೋಷಿಯಲ್ ಮಿಡಿಯಾದಲ್ಲಿ ಬಿರುಗಾಳಿನೇ ಎಬ್ಬಿಸಿತು.ಲಕ್ಷಾಂತರ ಕಾಮೆಂಟ್ ಗಳು ಹೊಗಳಿಕೆಗಳಿಂದ ಸುರಿಮಳೆಗೈದವು.ಆ ನೊಂದ ಜೀವ ತನ್ನ ಮುಗ್ದ ಮನಸ್ಸಿನಿಂದ ಹಂಚಿಕೊಂಡ ಕಷ್ಟಕ್ಕೆ ಸ್ಪಂದಿಸಲು ಹಲವಾರು ಸಂಘ ಸಂಸ್ಥೆಗಳು ಮುಂದೆ ಬಂದವು.ಆಕೆಯ ವಾಕ್ಚಾತುರ್ಯ ಮೆಚ್ಚಿ ಶಹಬಾಶ್ ತಂಗಿ ಎಂದು ಕರ್ನಾಟಕವೇ ಹೇಳತೊಡಗಿತು.ಯಾರಿಗೂ ಪರಿಚಯವಿಲ್ಲದ ಈ ಸಹೋದರಿ ರಾಜ್ಯ ರಾಜಕೀಯದಲ್ಲಿ ಬದಲಾವಣೆ ತರುವ ಮಟ್ಟಕ್ಕೆ ಯುವಜನತೆಯನ್ನು ಜಾಗೃತಿ ಗೊಳಿಸಿದಳು.ಮೈಸೂರಿನ ಜನತಾ ನಗರದ ನಿವಾಸಿ ಶಶಿರೇಖಾ ಎಂಬ ಮೇದಾರ ಸಮಾಜದ ಮಗಳು ತೋರಿದ ಸಾಹಸ ಕರುನಾಡಿನ ಜನರ ಮನ ಗೆದ್ದಿತು.ಶಶಿರೇಖಾ ಇಂತಹದೊಂದು ಧೈರ್ಯ ತೋರಿದ್ದರಿಂದ ಈ ವ್ಯವಸ್ಥೆ ಬದಲಾಗದೆ ಇದ್ದರೂ ಸಾಮಾಜಿಕ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ.

 

ಬಡವರಿಗಾಗುವ ಅನ್ಯಾಯಗಳ ಬಗ್ಗೆ ಪ್ರತಿಯೊಬ್ಬರು ಧ್ವನಿ ಎತ್ತಬೇಕೆಂದು ತಿಳಿಸಿಕೊಟ್ಟಿದೆ.

ಇನ್ನಾದರೂ ನಮ್ಮ ಸಮಾಜ ಎಚ್ಚೆತ್ತುಕೊಳ್ಳದಿದ್ದರೆ ಶಶಿರೇಖಾ ತರಹ ಪ್ರತಿಯೊಬ್ಬ ಹೆಣ್ಣು ಮಕ್ಕಳ ಸಹನೆಯ ಕಟ್ಟೆ ಒಡೆದು ಹೊಗುವ್ರದಲ್ಲಿ ಸಂದೇಹವೇ ಇಲ್ಲ.ಆದರೂ ಎಲ್ಲ ಹೆಣ್ಣು ಮಕ್ಕಳು ಶಶಿರೇಖಾ ತರಹ ಧೈರ್ಯಶಾಲಿ ಹಾಗೂ ಸಾಮಾಜಿಕ ಪ್ರಜ್ಞೆ ಉಳ್ಳವರಾಗಿರಲ್ಲ.ನಮಗೆ ಅನ್ಯಾಯ ಆದಾಗ ಮತ್ತೊಬ್ಬ ಶಶಿರೇಖಾ ಬರುವ ವರೆಗೆ ನಾವು ಕಾಯಬೇಕಾಗುತ್ತದೆ.ಹೀಗಾದರೆ ನಾವು ಮುಂದೆ ಬರುವುದು ಯಾವಾಗ..? ಸಮಾಜದಲ್ಲಿನ ಸಮಸ್ಯೆಗಳಿಗೆ ಪರಿಹಾರ ಸಿಗುವುದ್ಯಾವಾಗ..? ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಪರದಾಡುವ ಕುಟುಂಬಗಳಿಗೆ ನೆರವು ಆಗುವುದ್ಯಾವಾಗ..? ಸರ್ಕಾರದ ಸೌಲಭ್ಯಗಳು ಪ್ರತಿಯೊಬ್ಬರಿಗೂ ತಲುಪುವುದ್ಯಾವಾಗ..? ಹೀಗೆ ಮಾಧ್ಯಮಗಳ ಮುಂದೆ ನಾವು ಪಡುವ ಕಷ್ಟಗಳ ಬಗ್ಗೆ ಮಾತನಾಡುವುದು ತಪ್ಪುವುದ್ಯಾವಾಗ..? ಕಡು ಬಡತನದಿಂದ ಬಳಲುತ್ತಿರುವ ಹಲವಾರು ಕುಟುಂಬಗಳು ಹೊಟ್ಟೆ ತುಂಬ ಊಟ ಮಾಡವುದ್ಯಾವಾಗ..? ಮೇದಾರಿಕೆಯನ್ನೇ ನಂಬಿ ಬದುಕುತ್ತಿರುವ ಜನರ ಶ್ರಮಕ್ಕೆ ತಕ್ಕ ಫಲ ಸಿಗುವುದ್ಯಾವಾಗ..? ಉನ್ನತ ಶಿಕ್ಷಣ ಪಡೆದು ಸಮಾಜದ ಯುವ ಪೀಳಿಗೆ ಸರ್ಕಾರಿ ನೌಕರಸ್ಥರಾಗುವುದ್ಯಾವಾಗ..?

ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡು ಕೊಳ್ಳಲು ನಾವು ಶಾಂತ ಚಿತ್ತದಿಂದ ಯೋಚನೆ ಮಾಡಬೇಕಾಗಿದೆ.ಯುವಕರು ಸಮಾಜದ ಏಳಿಗೆಗೆ ಶ್ರಮಿಸಬೇಕಾಗಿದೆ.ಪ್ರತಿಯೊಂದು ಗ್ರಾಮ,ತಾಲೂಕಿನಲ್ಲಿ ನಾವು ಸಂಘಟಿತರಾಗಬೇಕಾಗಿದೆ.ನಿಸ್ವಾರ್ಥ ದಿಂದ ಸಮಾಜ ಕಟ್ಟುವ ಕಾರ್ಯದಲ್ಲಿ ಕೈ ಜೋಡಿಸಬೇಕಾಗಿದೆ.ನಾವು ಉದ್ದಾರ ಆದರೆ ಸಾಕು ಬೇರೆಯವರ ಚಿಂತೆ ನಮಗ್ಯಾಕೆ ಅನ್ನುವ ಮನಸ್ಥಿತಿಯಿಂದ ಹೊರಗೆ ಬರಬೇಕಾಗಿದೆ.ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಡಿ ನಮಗೆ ಸರ್ಕಾರದಿಂದ ಸಿಗಬೇಕಾದ ಹಕ್ಕುಗಳನ್ನು ಪಡೆದುಕೊಳ್ಳಬೇಕಾಗಿದೆ.ಸಮಾಜ ನನಗೆ ಏನು ಕೊಟ್ಟಿದೆ ಅನ್ನುವುದಕ್ಕಿಂತ ಮುಂಚೆ ನಾವು ಸಮಾಜಕ್ಕೆ ಏನು ಕೊಟ್ಟೆವು ಎಂದು ಯೋಚಿಸಬೇಕಾಗಿದೆ.ಪ್ರಗತಿ ಹೊಂದಿದ ಸಮಾಜಗಳ ಸಾಲಿನಲ್ಲಿ ನಮ್ಮ ಮೇದಾರ ಸಮಾಜವನ್ನು ನಿಲ್ಲಿಸುವಲ್ಲಿ ತನು,ಮನ ಅರ್ಪಿಸುವ ಮನೋಭಾವ ಎಲ್ಲರಲ್ಲೂ ಬೆಳೆಯಬೇಕಾಗಿದೆ.

ಈ ಎಲ್ಲ ಬದಲಾವಣೆಗಳು ನಮ್ಮಲ್ಲಿ‌ ನಾವು ಮಾಡಿಕೊಂಡರೇ ನಮ್ಮ ಸಮಾಜ ಅಭಿವೃದ್ಧಿ ಆಗುವುದ್ರಲ್ಲಿ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ.ನಮ್ಮ ನಮ್ಮಲ್ಲಿರುವ ವೈರತ್ವ,ವೈಮನಸ್ಸನ್ನು ಬದಿಗಿಟ್ಟು ಸಮಾಜಕ್ಕಾಗಿ ನಾವೆಲ್ಲರೂ ಒಂದಾದರೇ ನಮ್ಮ ಮಕ್ಕಳ ಭವಿಷ್ಯ ಉಜ್ವಲವಾಗೊದ್ರಲ್ಲಿ ಎರಡು ಮಾತಿಲ್ಲ. ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದಂತ ಶಶಿರೇಖಾ ಅಂತ ಮಗಳಿಗೆ ಇದ್ದ ಬದ್ದತೆ ನಮಗ್ಯಾಕಿಲ್ಲ ಎನ್ನುವ ಪ್ರಶ್ನೆ ನಮಗೆ ನಾವೇ ಮಾಡಿಕೊಳ್ಳಬೇಕಾಗಿದೆ.ಆ ದಿಟ್ಟ ಯುವತಿಯೇ ಈಗ ನಮ್ಮೆಲ್ಲರ ಕಣ್ಣು ತೆರೆದಿದ್ದಾಳೆ.ಆಕೆ ತೊರಿದ ಧೈರ್ಯ ನಿಜಕ್ಕೂ ಶ್ಲಾಘನೆಗೆ ಅರ್ಹವಾಗಿದೆ.ಅವಳಿಂದ ನಮ್ಮ ಸಮಾಜದ ಯುವಕರು ಸಾಕಷ್ಟು ಕಲಿಯಬೇಕಾಗಿದೆ.ಮುಂದೆ ಬಂದು ಹೋರಾಡಬೇಕಾಗಿದೆ.ನನ್ನಿಂದ ಏನಾದರೂ ಸಮಾಜಕ್ಕೆ ಕೊಡುಗೆ ನೀಡಬೇಕೆಂದು ಪಣ ತೊಡಬೇಕಾಗಿದೆ.ವಾಟ್ಸ್ ಆಪ್,ಫೇಸ್ ಬುಕ್ ಅಂತ ಮೊಬೈಲ್ ನಲ್ಲಿ ಕಾಲಹರಣ ಮಾಡುವುದನ್ನು ಬಿಟ್ಟು ಸಮಾಜ ಸೇವೆಗೆ ಕೈಲಾದಷ್ಟು ಸಮಯ ಮೀಸಲಿಡಬೇಕಾಗಿದೆ.ಈ ಎಲ್ಲ ಮಾತುಗಳು ನಾನ್ಯಾಕೆ ಹೇಳುತ್ತಿದ್ದೆನೆಂದರೆ ನಾವು ಹೊಟ್ಟೆ ತುಂಬಿರುವ ಜನರಲ್ಲ.ಸರ್ಕಾರದಿಂದ ಸೌಲಭ್ಯಗಳನ್ನು ಪಡೆದ ಬಲಿಷ್ಠ ಸಮುದಾಯದವರಲ್ಲ.ಶೈಕ್ಷಣಿಕ, ಆರ್ಥಿಕ,ಸಾಮಾಜಿಕ,ರಾಜಕೀಯ ಕ್ಷೇತ್ರಗಳಲ್ಲಿ ಮುಂದೆ ಬಂದವ್ರಲ್ಲ.ನಾವು ಹೀಗೆ ಕೈ ಕಟ್ಟಿ ಕುಳಿತರೆ ನಮ್ಮ ಕೂಗು ಸರ್ಕಾರಕ್ಕೆ ಕೇಳಿಸಲ್ಲ.ಸರ್ಕಾರ ನಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಡುತ್ತದೆ ಎಂದು ನಾವು ಸುಮ್ಮನ್ನೆ ಕೂತರೆ ಅದು ಖಂಡಿತ ನೆರವೆರಲ್ಲ.ಅದು ಅವರ ಕರ್ತವ್ಯ ಅಲ್ಲ,ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿದೆ.

“ಬನ್ನಿ ಸಂಘಟಿತರಾಗೊಣ,ದುರ್ಬಲ ಸಮಾಜವನ್ನು ಪ್ರಗತಿಪರ ಸಾಲಿನಲ್ಲಿ ನಿಲ್ಲಿಸೊಣ”

ಗೌತಮ್ ಕುಕಡೆ (ಮೇದಾರ)
ಪತ್ರಕರ್ತರು ಹಾಗೂ ಪ್ರಧಾನ ಸಂಪಾದಕರು
(ಮೇದಾರವಾಣಿ ವೆಬ್ ನ್ಯೂಸ್ )
ಬೆಳಗಾವಿ. ಮೊ.9945780244


Spread the love

About Laxminews 24x7

Check Also

ಬತ್ತಿದ ಜೀವನದಿ; ಹೆಚ್ಚಿದ ದುಗುಡ

Spread the love ಚಿಕ್ಕೋಡಿ: ಉತ್ತರ ಕರ್ನಾಟಕದ ಜೀವನದಿ ಕೃಷ್ಣೆಯಲ್ಲಿ ನೀರಿನ ಪ್ರಮಾಣ ತೀವ್ರ ಕುಸಿತ ಕಂಡಿದೆ. ಇದರಿಂದ ಮನುಷ್ಯರು ಮಾತ್ರವಲ್ಲ; …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ