Breaking News

ಲಾಕ್‌ಡೌನ್: ಪೊಲೀಸ್ ಹೊಡೆತ ತಪ್ಪಿಸಲು ಸೈಕ್ಲಿಸ್ಟ್‌ಗಳ ಮಾಸ್ಟರ್ ಪ್ಲಾನ್

Spread the love

ಉಡುಪಿ, ಮೇ 12: ರಾಜ್ಯದಲ್ಲಿ ಲಾಕ್‌ಡೌನ್ ಜಾರಿಯಲ್ಲಿದ್ದು, ಯಾರಾದರೂ ಬೈಕ್ ಅಥವಾ ವಾಹನಗಳಲ್ಲಿ ಹೊರಬಂದರೆ ಪೊಲೀಸರ ಲಾಠಿ ಏಟು ಬೀಳುವುದು ಗ್ಯಾರಂಟಿಯಾಗಿತ್ತು.

ಆದರೆ, ಪೊಲೀಸರಿಂದ ಲಾಠಿ ಏಟು ತಪ್ಪಿಸುವುದಕ್ಕಾಗಿ ಉಡುಪಿಯ ವ್ಯಕ್ತಿಯೊಬ್ಬರು ತಾತ್ಕಾಲಿಕ ಹಿಂಭಾಗದ ರಕ್ಷಣೆ, ಹೆಲ್ಮೆಟ್ ಮತ್ತು ಮಾಸ್ಕ್ ನೊಂದಿಗೆ ಸೈಕಲ್ ಸವಾರಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಪತ್ರಕರ್ತ ನೋಲನ್ ಪಿಂಟೊ ಅವರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ, ಸೈಕಲ್‌ನಲ್ಲಿ ಹೋಗುವಾಗ ವ್ಯಕ್ತಿಯೊಬ್ಬ ತನ್ನ ಬೆನ್ನಿಗೆ ಅಲ್ಯೂಮಿನಿಯಂ ರೂಫಿಂಗ್ ಶೀಟ್ ಅನ್ನು ಕಟ್ಟಿಕೊಂಡು ಪೊಲೀಸರ ಲಾಠಿ ಏಟಿನಿಂದ ರಕ್ಷಣೆ ಪಡೆದಿದ್ದಾನೆ.

ಟ್ವೀಟ್ ಪ್ರಕಾರ, ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿ ವಾಹನ ಚಾಲಕರು ಪೊಲೀಸರಿಂದ ಹೊಡೆತ ತಿಂದ ಹಲವಾರು ವರದಿಗಳಲ ನಂತರ ಈ ಪ್ಲಾನ್ ಮಾಡಲಾಗಿದೆಯಂತೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ