Breaking News

ಅಥಣಿ ತಾಲ್ಲೂಕಿನ ವ್ಯಕ್ತಿಯೊಬ್ಬನಿಗೆ ಕೊರೊನಾ ಪಾಸಿಟಿವ್ ಮತ್ತು ನೆಗೆಟಿವ್  ಎರಡು ರಿಪೋರ್ಟ್

Spread the love

ಬೆಳಗಾವಿ: ಜಿಲ್ಲೆ ಅಥಣಿ ತಾಲ್ಲೂಕಿನ ವ್ಯಕ್ತಿಯೊಬ್ಬನಿಗೆ ಕೊರೊನಾ ಪಾಸಿಟಿವ್ ಮತ್ತು ನೆಗೆಟಿವ್  ಎರಡು ರಿಪೋರ್ಟ್ ನೀಡಿ ಅಧಿಕಾರಿಗಳು ನಿನ್ನೆ ಎಡವಟ್ಟು ಮಾಡಿದ್ದಾರೆ.

ಜುಲೈ 15ರಂದು ಅಥಣಿಯಲ್ಲಿ ಗಂಟಲು ದ್ರವದ ಮಾದರಿಯನ್ನು ನೀಡಿದ್ರು. ಜುಲೈ 16ರಂದು ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆಗೆ ಒಳಗಾಗಿ ಅಲ್ಲಿಯೇ ದಾಖಲಾಗಿದ್ದರು.

ಜುಲೈ 18ರಂದು ಬೆಳಗಾವಿ ಬಿಮ್ಸ್ ಕೊರೊನಾ ನೆಗೆಟಿವ್ ರಿಪೋರ್ಟ್ ನೀಡಿದ  ಹಿನ್ನೆಲೆ ಅಂದೇ ಡಿಸ್ಚಾರ್ಜ್ ಮಾಡಿತ್ತು. ಕೊರೊನಾ ನೆಗೆಟಿವ್ ವರದಿ ಪಡೆದು ವ್ಯಕ್ತಿ ಮನೆಗೆ ಹಿಂದಿರುಗಿದ್ದರು.

ಜುಲೈ 15ರಂದು ನೀಡಿದ್ದ ಸ್ವ್ಯಾಬ್ ರಿಪೋರ್ಟ್ ಜುಲೈ 25ರಂದು( ಭಾನುವಾರ) ಬಂದಿದೆ. ಜುಲೈ 25ರಂದು ಕರೆ ಮಾಡಿದ ಅಧಿಕಾರಿಗಳು ಕೊರೊನಾ ಸೋಂಕು ತಗುಲಿದೆ ಎಂದು ಹೇಳಿದ್ದಾರೆ. ಇದರಿಂದ ಗಾಬರಿಗೊಂಡ ವ್ಯಕ್ತಿ ಆಸ್ಪತ್ರೆಗೆ ತೆರಳಿದ ವ್ಯಕ್ತಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕೇವಲ ಒಂದು ದಿನದ ಅಂತರದಲ್ಲಿ ಸ್ವ್ಯಾಬ್ ಟೆಸ್ಟ್ ಮಾಡಿಸಿಕೊಂಡಿದ್ದು, ರಿಪೋರ್ಟ್ ಭಿನ್ನವಾಗಿರಲು ಹೇಗೆ ಸಾಧ್ಯ ಎಂದು ವ್ಯಕ್ತಿ ಪ್ರಶ್ನೆ ಮಾಡಿದ್ದಾರೆ. ಅಧಿಕಾರಿಗಳು ಮಾತ್ರ ಯಾವುದೇ ಉತ್ತರ ನೀಡದೇ ಮೌನಕ್ಕೆ ಜಾರಿದ್ದಾರೆ


Spread the love

About Laxminews 24x7

Check Also

ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು

Spread the love ಬೆಳಗಾವಿ: ಡಾ.ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು. ಹೀಗಾಗಿ, ಅವರ ಕೃತಿಗಳಲ್ಲಿ ಸ್ತ್ರೀತ್ವದ ಅಂಶಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ