Breaking News

ನ.13 ರಂದೇ ಪಿಂಕ್ ಲೈನ್ ಮೆಟ್ರೋ ಉದ್ಘಾಟನೆ – ತೇಜಸ್ವಿ ಸೂರ್ಯ

Spread the love

ಬೆಂಗಳೂರು: ಬಹುನಿರೀಕ್ಷಿತ ನಮ್ಮ ಮೆಟ್ರೋ ಗುಲಾಬಿ ಮಾರ್ಗ ಉದ್ಘಾಟನೆ ಕುರಿತು ಹೊಸ ಅಪ್ಡೇಟ್‌ ಬಂದಿದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ನ.13ಕ್ಕೆ ಪಿಂಕ್ ಲೈನ್ ಅನಾವರಣದ ಸುಳಿವು ನೀಡಿದ್ದಾರೆ.

ಸಿಎಂ ಹೇಳಿಕೆಗಿಂತ ಮುಂಚಿತವಾಗಿಯೇ ಉದ್ಘಾಟನೆ?
ಗುಲಾಬಿ ಮಾರ್ಗದ ಮೊದಲ ಹಂತದ (ಕಾಳೇನ ಅಗ್ರಹಾರದಿಂದ ತಾವರೆಕೆರೆ) ಉದ್ಘಾಟನೆಗೆ ಸಂಬಂಧಿಸಿದಂತೆ ಈ ಹಿಂದೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ನವೆಂಬರ್ 15 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಈ ಮಾರ್ಗ ಉದ್ಘಾಟನೆಯಾಗುತ್ತದೆ ಎಂದು ತಿಳಿಸಿದ್ದರು. ಆದರೆ, ಸಿಎಂ ಅವರು ಹೇಳಿದ್ದ ದಿನಾಂಕಕ್ಕಿಂತ ಎರಡು ದಿನ ಮುಂಚಿತವಾಗಿ, ಅಂದರೆ ನವೆಂಬರ್ 13 ರಂದೇ ಪಿಂಕ್ ಲೈನ್ ಉದ್ಘಾಟನೆಯಾಗಲಿದೆ ಎಂದು ಸಂಸದ ತೇಜಸ್ವಿ ಸೂರ್ಯ ಮಾಹಿತಿ ಹಂಚಿಕೊಂಡಿದ್ದಾರೆ.

ಎಕ್ಸ್‌ನಲ್ಲಿ #ಪಿಂಕ್‌ಲೈನ್‌
ಎಕ್ಸ್‌ನಲ್ಲಿ ತೇಜಸ್ವಿ ಸೂರ್ಯ ಅವರು ʻನವೆಂಬರ್ 13 #ಪಿಂಕ್‌ಲೈನ್‌ʼ ಬರೆಯುವ ಮೂಲಕ ಪಿಂಕ್‌ ಲೈನ್‌ ಅನಾವರಣದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಬಹುನಿರೀಕ್ಷಿತ ಈ ಗುಲಾಬಿ ಮಾರ್ಗದ ಉದ್ಘಾಟನಾ ದಿನಾಂಕ ಬಹುತೇಕ ಫಿಕ್ಸ್ ಆದಂತಿದೆ. ನವೆಂಬರ್ 13 ರಂದು ಈ ಯೋಜನೆಗೆ ಅಧಿಕೃತವಾಗಿ ಚಾಲನೆ ಸಿಗಲಿದೆ ಎಂದು ಅವರು ಸೂಚಿಸಿದ್ದಾರೆ. ಈಗಾಗಲೇ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರಿಂದ (CMRS) ಗ್ರೀನ್ ಸಿಗ್ನಲ್ ಸಿಕ್ಕಿರುವುದರಿಂದ ತಾಂತ್ರಿಕವಾಗಿ ಮಾರ್ಗ ಸಿದ್ಧವಾಗಿದೆ.


Spread the love

About Laxminews 24x7

Check Also

ನ.13 ರಂದೇ ಪಿಂಕ್ ಲೈನ್ ಮೆಟ್ರೋ ಉದ್ಘಾಟನೆ – ತೇಜಸ್ವಿ ಸೂರ್ಯ

Spread the loveಬೆಂಗಳೂರು: ಬಹುನಿರೀಕ್ಷಿತ ನಮ್ಮ ಮೆಟ್ರೋ ಗುಲಾಬಿ ಮಾರ್ಗ ಉದ್ಘಾಟನೆ ಕುರಿತು ಹೊಸ ಅಪ್ಡೇಟ್‌ ಬಂದಿದೆ. ಬೆಂಗಳೂರು ದಕ್ಷಿಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ