Breaking News
Home / ಜಿಲ್ಲೆ / ಬೆಳಗಾವಿ ಜಿಪಂ‌ ಸಭಾಂಗಣದಲ್ಲಿ ಬಿಎಸ್ ವೈ ಸರಕಾರದ ನೇರ ಪ್ರಸಾರ ಕಣ್ತುಂಬಿಕೊಂಡ ಜನತೆ

ಬೆಳಗಾವಿ ಜಿಪಂ‌ ಸಭಾಂಗಣದಲ್ಲಿ ಬಿಎಸ್ ವೈ ಸರಕಾರದ ನೇರ ಪ್ರಸಾರ ಕಣ್ತುಂಬಿಕೊಂಡ ಜನತೆ

Spread the love

ಬೆಳಗಾವಿ ಜಿಪಂ‌ ಸಭಾಂಗಣದಲ್ಲಿ ಬಿಎಸ್ ವೈ ಸರಕಾರದ ನೇರ ಪ್ರಸಾರ ಕಣ್ತುಂಬಿಕೊಂಡ ಜನತೆ

ಕೋವಿಡ್-19 ಲಾಕ್ ಡೌನ್ ವೇಳೆ ತಾಯಿಗೆ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ಅವರು ಔಷಧಿಗಳನ್ನು ಪೂರೈಕೆ ಮಾಡಿದ್ದಕ್ಕೆ ರಾಮದುರ್ಗದ ಪವಿತ್ರಾ ಹಾಲಬಾವಿ ಸಿಎಂ ಯಡಿಯೂರಪ್ಪ ಅವರಿಗೆ ಧನ್ಯವಾದ ತಿಳಿಸಿದರು.

ಬೆಳಗಾವಿ ಜಿಪಂ ಸಭಾಂಗಣದಲ್ಲಿ ಸೋಮವಾರ ರಾಜ್ಯ ಸರಕಾರದ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ನೇತೃತ್ವದಲ್ಲಿ ವಿಧಾನಸೌಧದಲ್ಲಿ “ಸವಾಲುಗಳ ವರ್ಷ; ಪರಿಹಾರದ ಸ್ಪರ್ಶ” ಕಾರ್ಯಕ್ರಮ ನಡೆಯಿತು. ಇದರ ನೇರ ಪ್ರಸಾರದಲ್ಲಿ ಸಿಎಂ ಜತೆ ಮಾತನಾಡಿದರು.

ಕೋವಿಡ್-19 ಲಾಕ್ ಡೌನ್ ವೇಳೆಯಲ್ಲಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ನನ್ನ ತಾಯಿಗೆ ಸೂಕ್ತ ಚಿಕಿತ್ಸೆ ನೀಡಿಸಿದ್ದಕ್ಕೆ ಸಿಎಂಗೆ ಹಾಗೂ ಸರಕಾರಕ್ಕೆ ಶ್ಲಾಘನೀಯ ವ್ಯಕ್ತಪಡಿಸಿದರು.

ಸಿಎಂ ಯಡಿಯೂರಪ್ಪ ಇದಕ್ಕೆ ಸಕಾರಾತ್ಮಕವಾಗಿ ಉತ್ತರಿಸಿ, ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವುದೇ ಸರಕಾರದ ಕೆಲಸ ಯಾವುದಕ್ಕೂ ಎದೆಗುಂದಬೇಡಿ ಎಂದು ಅಭಯ ಹಸ್ತ‌‌ ನೀಡಿದರು.

ಜಿಲ್ಲಾಮಟ್ಟದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಸರಕಾರದ ವರ್ಷದ ಪ್ರಗತಿ ವರದಿ ವಿಶೇಷ ಪುಸ್ತಕವನ್ನು ಬಿಡುಗಡೆಗೊಳಿಸಿದರು.

ರೈಲ್ವೆ ಇಲಾಖೆಯ ರಾಜ್ಯ ಸಚಿವ ಸುರೇಶ್ ಅಂಗಡಿ, ವಿಧಾನಸಭೆಯ ಉಪ ಸಭಾಧ್ಯಕ್ಷ ಆನಂದ ಮಾಮನಿ, ವಿಧಾನಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ, ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಹೇಶ್ ಕುಮಠಳ್ಳಿ, ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ್, ಶಾಸಕರಾದ ದುರ್ಯೋಧನ ಐಹೊಳೆ, ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಸ್ವಾಸ್, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಪೊಲೀಸ್ ಆಯುಕ್ತ ತ್ಯಾಗರಾಜನ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ., ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮತ್ತಿತರರು ಉಪಸ್ಥಿತರಿದ್ದರು. ವಿವಿಧ ಯೋಜನೆಗಳ ಫಲಾನುಭವಿಗಳು ಕೂಡ ಹಾಜರಿದ್ದರು.

ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ದೆಹಲಿ ಭೇಟಿ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಅವರು, ಮುಖ್ಯಮಂತ್ರಿ ಬದಲಾವಣೆ ಯಾವುದೇ ಕಾರಣಕ್ಕೂ ಇಲ್ಲ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ನನ್ನ ಭೇಟಿ ಮಾಡಿದ್ದು ಅವರು ನಮ್ಮ ಪಕ್ಷದ ನಾಯಕರು ಯಾವುದೇ ಕಾರಣಕ್ಕೂ ಬಿ.ಎಸ್.ಯಡಿಯೂರಪ್ಪ ಬದಲಾವಣೆ ಮಾಡುವುದಲ್ಲ. ಅದು ಮಾಧ್ಯಮದವರ ಸೃಷ್ಟಿ ಎಂದರು.

ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಕೇಂದ್ರ ಸಚಿವ ನಿತೀನ್ ಗಡ್ಕರ್ ಭೇಟಿ ವಿಚಾರವಾಗಿ ಉತ್ತರಿಸಿದ ಅವರು, ಅವರ ಇಲಾಖೆಯ ವಿಚಾರವಾಗಿ ದೆಹಲಿಗೆ ಹೋಗಿದ್ದಾರೆ. ಇದರಲ್ಲಿ ಯಾವುದೇ ವಿಶೇಷತೆ ಇಲ್ಲ ಎಂದರು.

ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾಗೆ ಸಾವಿನ ಸಂಖ್ಯೆ ಹೆಚ್ಚಳ ಆಗ್ತಾ ಇದೆ ಇದನ್ನು ತಡೆಯೋಕೆ ಜಿಲ್ಲಾಡಳಿತದ ಕ್ರಮ ಏನು ಎಂದು ಮಾದ್ಯಮಗಳ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ,ಕೊರೋನಾ ದೊಡ್ಡ ರೋಗ ಅಲ್ಲ ಅದಕ್ಕೆ ಹೆದರಬೇಕಾಗಿಲ್ಲ ,ನಾವು ಕೋವೀಡ್ ಜೊತೆ ಬದುಕುವದನ್ನು ಕಲಿಯಬೇಕು.ಸಾವು ಬದುಕು ನಮ್ಮ ಕೈಯಲ್ಲಿಲ್ಲ, ಹೋರಾಟ ಮಾಡಿ ಉಳಿಸುವ ಯತ್ನ ಮಾಡಬೇಕು ಎಂದು ಸಚವ ರಮೇಶ್ ಹೇಳಿದ್ದಾರೆ.

ಈ ವೇಳೆ ಬಿಮ್ಸ್ ಅವಾಂತರ ಬಗ್ಗೆ ಚರ್ಚಿಸುತ್ತೇನೆ ಎಂದ ರಮೇಶ್ ಜಾರಕಿಹೊಳಿ ಬಿಮ್ಸ್ ಬಳಿ ಆ್ಯಂಬುಲೆನ್ಸ್‌ ಸುಟ್ಟ ಪ್ರಕರಣ ಬಗ್ಗೆಯೂ ಚರ್ಚೆ ನಡೆಸುತ್ತೇವೆ. ಅಧಿಕಾರಿಗಳು ಯಾರಾದರೂ ತಪ್ಪು ಮಾಡಿದ್ರೆ ಕ್ರಮ ಕೈಗೊಳ್ಳುತ್ತೇವೆ.ಕೋವಿಡ್ ಜೊತೆ ಬದುಕೋದನ್ನು ನಾವು ಕಲಿಯಬೇಕು.ಕೋವಿಡ್ ಗಂಭೀರ ಖಾಯಿಲೆ ಅಲ್ಲ, ಜನ ಪ್ಯಾನಿಕ್ ಆಗಬಾರದು. ನಾವು ಸರಿಯಾಗಿ ಸ್ಪಂದನೆ ಮಾಡಿದ್ರೆ ರಿಕವರಿ ಆಗುತ್ತೆ. ಬಿಮ್ಸ್ ಆಡಳಿತ ಮಂಡಳಿ ಶೀಘ್ರ ಸರ್ಜರಿ ಮಾಡ್ತೇವೆ.ಅಲ್ಲಿಯ ವ್ಯೆವಸ್ಥೆ ಸುಧಾರಣೆ ಮಾಡುತ್ತೇವೆ ಎಂದು ರಮೇಶ್ ಜಾರಕಿಹೊಳಿ ಭರವಸೆ ನೀಡಿದರು.

ಇಂತಹ ಸಂದರ್ಭದಲ್ಲಿ ವರ್ಗಾವಣೆ ಮಾಡಿದ್ರೆ ತಪ್ಪು ಸಂದೇಶ ಹೋಗುತ್ತೆ ಅಂತಾ ಬಿಟ್ಟಿದ್ದೀವಿ. ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಡಿಸಿಗೆ ಸೂಚನೆ ನೀಡಿದ್ದೇವೆ.ಎಂದರು
ರಾಜ್ಯದ ಜನತೆ ಆಶೀರ್ವಾದದಿಂದ ಒಂದು ವರ್ಷ ಪೂರೈಸಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ವಿಶೇಷ ಸಂದರ್ಭದಲ್ಲಿ ಬಿಎಸ್‌ವೈ ಅಧಿಕಾರ ಚುಕ್ಕಾಣಿ ಹಿಡಿದಿದ್ದಾರೆ.ಸರಣಿ ಸರಣಿ ಸವಾಲುಗಳನ್ನು ಎದುರಿಸಿ ಗಟ್ಟಿಯಾಗಿ ನಿಂತಿದ್ದಾರೆ. ರಾಜ್ಯದ ಜನರ ಮನಸ್ಸು ಗೆದ್ದು ಇಂದು ಒಂದು ವರ್ಷ ಪೂರೈಸಿದ್ದಾರೆ. ಮುಂದಿನ ಎರಡೂವರೆ ವರ್ಷ ಇನ್ನು ಹೆಚ್ಚಿನ ಅಭಿವೃದ್ಧಿ ಮಾಡುತ್ತಾರೆ. 2023ರಲ್ಲಿ ಮತ್ತೆ ಅಧಿಕಾರಕ್ಕೆ ಏರಲು ಎಲ್ಲಾ ತಯಾರಿ ನಡೆದಿದೆ, ಸಂಪುಟ ವಿಸ್ತರಣೆ ಬಗ್ಗೆ ನನಗೆ ಗೊತ್ತಿಲ್ಲ, ನಾನು ಸಾಮಾನ್ಯಕಾರ್ಯಕರ್ತ,ಎಂದುಬೆಳಗಾವಿಯಲ್ಲಿ ಸಚಿವ ರಮೇಶ್ ಜಾರಕಿಹೊಳಿ‌ ಹೇಳಿದರು

 


Spread the love

About Laxminews 24x7

Check Also

ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಕ್ಕೆ ಚಾನ್ಸೇ ಇಲ್ಲ

Spread the love ಹಾವೇರಿ : ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಎಲ್ಲಾ ಪಕ್ಷದ ನಾಯಕರುಗಳು ಅಭ್ಯರ್ಥಿಗಳು ಪರಸ್ಪರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ