Breaking News

ನಿಟ್ಟೆ :ಕಸ ಹಾಕಿದವರಿಂದಲೇ ವಿಲೇವಾರಿ : ನಿಟ್ಟೆ ಗ್ರಾ.ಪಂ. ಸದಸ್ಯೆಯ ದಿಟ್ಟತನಕ್ಕೆ ಮೆಚ್ಚುಗೆ

Spread the love

ಬೆಳ್ಮಣ್: ಸ್ವತ್ಛ ಭಾರತದ ಪರಿಕಲ್ಪನೆ ಕೇವಲ ಭಾಷಣ, ಬ್ಯಾನರ್‌ಗಳ ಪ್ರಚಾರಕ್ಕೆ ಸೀಮಿತವಾಗಿರದೆ ಕಾರ್ಯ ರೂಪದಲ್ಲಿಯೂ ಅಳವಡಿಕೆಯಾಗಬೇಕು ಎಂಬ ಚಿಂತನೆಯೊಂದಿಗೆ ನಿಟ್ಟೆ ಗ್ರಾ.ಪಂ. ಸ‌ದಸ್ಯೆಯೋರ್ವರು ಕಸ ಹಾಕುತ್ತಿದ್ದವರನ್ನು ಹಿಡಿದು ಅವರಿಂದಲೇ ಕಸ ವಿಲೇವಾರಿ ಗೊಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ನಿಟ್ಟೆ ಗ್ರಾ.ಪಂ. ಸದಸ್ಯೆ ರಶ್ಮಿ ಸದಾನಂದ ಶೆಟ್ಟಿ ಅವರು ರಸ್ತೆ ಬದಿಯಲ್ಲಿ ಕಸ ಹಾಕುತ್ತಿದ್ದವರನ್ನು ಪತ್ತೆ ಹಚ್ಚಿ ಅವರಿಂದಲೇ ಕಸ ವಿಲೇವಾರಿಗೊಳಿಸಿ ಪಂಚಾಯತ್‌ಗೆ ದಂಡ ಕಟ್ಟಿಸಿದ್ದಾರೆ.

ಪಂಚಾಯತ್‌ ಸದಸ್ಯೆ ರಶ್ಮಿಯವರ ಈ ಸಾಧನೆಗೆ ಪಂ. ಅಧ್ಯಕ್ಷ ಸತೀಶ್‌ ಪೂಜಾರಿ, ಪಂಚಾಯತ್‌ ಪಿಡಿಒ ಶೇಖರ ಪೂಜಾರಿ ಹಾಗೂ ಇತರ ಎಲ್ಲ ಸದಸ್ಯರೂ ಬೆಂಬಲ ನೀಡಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ