Home / ಜಿಲ್ಲೆ / ಬೆಂಗಳೂರು / ಚುನಾವಣಾ ಪ್ರಚಾರದಲ್ಲಿದ್ದ ಕೆಲವರಿಗೆ ಸೋಂಕು: ಲಕ್ಷ್ಮಣ್ ಸವದಿಗೆ ಕ್ವಾರಂಟೈನ್ ಆಗಲು ಸೂಚನೆ

ಚುನಾವಣಾ ಪ್ರಚಾರದಲ್ಲಿದ್ದ ಕೆಲವರಿಗೆ ಸೋಂಕು: ಲಕ್ಷ್ಮಣ್ ಸವದಿಗೆ ಕ್ವಾರಂಟೈನ್ ಆಗಲು ಸೂಚನೆ

Spread the love

ಬೆಂಗಳೂರು : ಬಸವಕಲ್ಯಾಣ ಉಪಚುನಾವಣೆಯ ಪ್ರಚಾರ ಪಾಲ್ಗೊಂಡಗೊಂಡಿದ್ದ ಪಕ್ಷದ ಕೆಲವರಿಗೆ ಕೋವಿಡ್ ಸೋಂಕು ತಗುಲಿದ್ದು ಮುಂಜಾಗ್ರತ ಕ್ರಮವಾಗಿ ವೈದ್ಯರ ಸಲಹೆಯಂತೆ ಕ್ವಾರಂಟೈನ್ ಆಗಲು ಸೂಚಿಸಿದ್ದಾರೆ ಎಂದುಸಾರಿಗೆ ಸಚಿವ ಲಕ್ಷ್ಮಣ್ ಸವದಿ ಎಂದಿದ್ದಾರೆ.

ಈ ಕುರಿತು ಬಗ್ಗೆ ಸ್ವತಃ ಸಚಿವರೇ ಟ್ವೀಟ್ ಮಾಡಿದ್ದು ಬಸವಕಲ್ಯಾಣ ಉಪಚುನಾವಣೆಯ ಪ್ರಚಾರದಲ್ಲಿ ನಾನು ಕೆಲವು ದಿನಗಳ ಕಾಲ ತೊಡಗಿದ್ದ ಸಂದರ್ಭದಲ್ಲಿ ನನ್ನೊಂದಿಗೆ ಭಾಗವಹಿಸಿದ್ದ ಕೆಲವರಿಗೆ ಕೋವಿಡ್ ಸೋಂಕು ತಗುಲಿದ್ದು ಕಂಡುಬಂದಿದೆ. ಅಷ್ಟೇ ಅಲ್ಲ, ನನ್ನ ಗನ್‍ಮ್ಯಾನ್‍ಗೂ ಕೂಡಾ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ.

ಈ ಹಿನ್ನೆಲೆಯಲ್ಲಿ ನಾನು ವೈದ್ಯರ ಸಲಹೆ ಪಡೆದಿದ್ದು, ಕೆಲವು ದಿನಗಳ ಕಾಲ ನನಗೆ ಕ್ವಾರಂಟೈನ್ ಆಗಲು ವೈದ್ಯರು ಸೂಚಿಸಿದ್ದಾರೆ. ಆ ಪ್ರಕಾರ ನಾನು ಮುನ್ನೆಚ್ಚರಿಕೆ ವಹಿಸುತ್ತಿದ್ದೇನೆ. ಈಗಾಗಲೇ ನಾನು ಕೋವಿಡ್ ಲಸಿಕೆಯನ್ನೂ ಹಾಕಿಸಿಕೊಂಡಿದ್ದೇನೆ. ಈ ಬಗ್ಗೆ ಯಾರೂ ಆತಂಕ ಪಡಬೇಕಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ