Breaking News

ವಕೀಲ್ ಸಾಬ್ ಸಿನಿಮಾ ರಿಲೀಸ್ ದಿನವೇ ಥಿಯೇಟರ್ ಧ್ವಂಸಗೊಳಿಸಿದ ಫ್ಯಾನ್ಸ್..!

Spread the love

ತೆಲಂಗಾಣ : ವಕೀಲ್ ಸಾಬ್ ಸಿನಿಮಾ ರಿಲೀಸ್ ಆದ ದಿನವೇ ಥಿಯೇಟರ್ ಗಳಲ್ಲಿ ಪವನ್ ಕಲ್ಯಾಣ್ ಅಭಿಮಾನಿಗಳ ಅವಾಂತರ ಸೃಷ್ಟಿಮಾಡಿದ್ದರು. ತಾಂತ್ರಿಕ ದೋಷದಿಂದಾಗಿ ವಕೀಲ್ ಸಾಬ್ ಚಿತ್ರದ ಸ್ಕ್ರೀನಿಂಗ್ ಗೆ ಅಡ್ಡಿಯಾದ ಹಿನ್ನಲೆಯಲ್ಲಿ ಪವನ್ ಕಲ್ಯಾಣ್ ಅವರ ಅಭಿಮಾನಿಗಳು ಥಿಯೇಟರ್ ನ್ನು ಧ್ವಂಸಗೊಳಿಸಿದ್ದಾರೆ.

ತೆಲಂಗಾಣದ ಜೋಗುಲಂಬಾ ಗಡ್ವಾಲ್ ನ ಥಿಯೇಟರ್ ನಲ್ಲಿ ನಿನ್ನೆ ಬೆಳಿಗ್ಗೆ ಕಾರ್ಯಕ್ರಮದಲ್ಲಿ ಅಡ್ಡಿ ಉಂಟಾಗಿದೆ. ಆಗ ಥಿಯೇಟರ್ ಮ್ಯಾನೇಜ್ ಮೆಂಟ್ ಕೆಲವು ನಿಮಿಷ ಕಾಯುವಂತೆ ಮನವಿ ಮಾಡಿದ್ದಾರೆ. ಆದರೆ ಕೋಪಗೊಂಡ ಪವನ್ ಕಲ್ಯಾಣ್ ಅಭಿಮಾನಿಗಳು ಥಿಯೇಟರ್ ನ ಗೋಡೆ, ಬಾಗಿಲುಗಳನ್ನು ಧ್ವಂಸ ಮಾಡಿದ್ದಾರೆ. ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.


Spread the love

About Laxminews 24x7

Check Also

ಕೆಪಿಎಸ್‌ಸಿ ನೇಮಕಾತಿ ಅಕ್ರಮ- ಎಸ್‌ಐಟಿ ರಚನೆಗೆ ಸುಪ್ರೀಂ ತಡೆ

Spread the loveನವದೆಹಲಿ: ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಕೆಪಿಎಸ್‌ಸಿ  ನೇಮಕಾತಿ ಹಗರಣದ ತನಿಖೆಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ