ಯಳಂದೂರು: ತಾಲೂಕಿನ ಕೃಷ್ಣಾಪುರ ಬಳಿ ಸಣ್ಣ ನೀರಾವರಿ ಇಲಾಖೆಯಿಂದ ನಡೆದಿರುವ ಯರಗಂಬಳ್ಳಿ ಎಲೆಕೆರೆಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಯಡಿ ಕಾಮಗಾರಿಯನ್ನೇ ಪೂರ್ಣಗೊಳಿಸಿಲ್ಲ. ಆದರೂ ಹಣವನ್ನು ಡ್ರಾ ಮಾಡಲಾಗಿದೆ ಎಂದು ರೈತರು ಆರೋಪಿಸಿದರು.
ಸೋಮವಾರ ಈ ಸಂಬಂಧ ರೈತರು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಕತ್ಯಾ ಯಿನಿ ನೇತೃತ್ವದ ತಂಡ ಯಳಂದೂರು ತಾಲೂಕಿನ ಕೃಷ್ಣಾಪುರ ಬಳಿ ನಿರ್ಮಾಣಗೊಂಡಿರುವ ಜಾಕ್ ವೆಲ್ ಹಾಗೂ ಯರ ಗಂಬಳ್ಳಿ ಗ್ರಾಮದ ಎಲೆಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ಸಂದರ್ಭದಲ್ಲಿ ರೈತರು ದೂರುಗಳ ಸುರಿಮಳೆ ಗೈದರು.
ಕೆರೆ ತುಂಬಿಸುವಷ್ಟು ನೀರೇ ಇಲ್ಲ: ಇಲ್ಲಿರುವ ಚೆಕ್‌ಡ್ಯಾಂನಲ್ಲಿ ಕೆರೆಯನ್ನು ತುಂಬಿಸುವಷ್ಟು ನೀರು ಸಂಗ್ರಹವಾಗುವುದೇ ಇಲ್ಲ. ಅವೈಜ್ಞಾನಿಕ ಯೋಜನೆರೂಪಿಸಲಾಗಿದೆ. ಯರಗಂಬಳ್ಳಿ ಎಲೆ ಕೆರೆಗೆ ನೀರು ತುಂಬಿಸಲು ಪಕ್ಕದಲ್ಲೇಇರುವ ಕಬಿನಿ ನಾಲೆ ಯನ್ನು ಬಿಟ್ಟು ಇಷ್ಟು ದೂರದಿಂದ ನೀರು ತುಂಬಿಸಲು ಸಾಧ್ಯವೇ ಇಲ್ಲ. ಅಲ್ಲದೆ ಇಲ್ಲಿನ ನೀರು ಕೆರೆಗೆ ಹೋದರೆ ಇದರ ಅಚ್ಚುಕಟ್ಟಿನಲ್ಲಿಬರುವ ಕೃಷ್ಣಾಪುರ ಹಾಗೂ ಗಣಿಗನೂರು ಗ್ರಾಮದ ಹತ್ತಾರು ರೈತರಿಗೆತೊಂದರೆಯಾಗಲಿದೆ ಎಂಬುದು ಇಲ್ಲಿನ ರೈತರ ದೂರು.
ಸರ್ಕಾರಿ ಹಣ ದುರುಪಯೋಗ: 3.45 ಕೋಟಿ ರೂ. ವೆಚ್ಚ ದಲ್ಲಿ ಕೃಷ್ಣಾಪುರದ ಬಳಿ ಇರುವ ಚೆಕ್‌ಡ್ಯಾಂನಿಂದ ಯರಗಂಬ ಳ್ಳಿಯ ಎಲೆಕೆರೆಗೆ ನೀರು ತುಂಬಿಸುವ ಯೋಜನೆ ಇದಾಗಿದೆ. ಇದಕ್ಕೆ 3.25 ಕಿ.ಮೀ. ಉದ್ದದ್ದ ಪೈಪ್‌ಲೈನ್ ಮಾಡಲು ಹಾಗೂ ಇಲ್ಲಿ ಒಂದು ಜಾಕ್‌ವೆಲ್ ನಿರ್ಮಿಸಲಾಗಿದೆ. ಇದಕ್ಕೆ ವಿದ್ಯುತ್ ಸಂಪರ್ಕ, ಟಿಸಿ ಅಳವಡಿಕೆ ಸೇರಿದಂತೆ ಹಲವು ಅಂಶಗಳು ಇದರಲ್ಲಿವೆ. ಆದರೆ ಇದಕ್ಕಾಗಿ ಕಾಮಗಾರಿಗೆ ಮುಂಚೆಯೇ ಬಿಲ್ ಪಾವತಿಸಿಕೊಳ್ಳಲಾಗಿದೆ. ಸಂತೆಮರಹಳ್ಳಿ ವಿದ್ಯುತ್ ಉಪ ಕೇಂದ್ರದಿಂದ 40 ಕಂಬ ಅಳವಡಿಸಿಕೊಂಡು ವಿದ್ಯುತ್ ಪಡೆದು ಕೊಳ್ಳಲಾಗಿದೆ ಎಂದು ನಮೂದಾಗಿದೆ. ಆದರೆ, ಇಲ್ಲಿ 8 ಕಂಬಮಾತ್ರ ಅಳವಡಿಸಲಾಗಿದೆ. ಕೃಷ್ಣಾಪುರದ ರೈತ ಚಿಕ್ಕಬಸವಶೆಟ್ಟಿ ಎಂಬು ವವರಸರ್ವೆ ನಂ 673ರ ಜಮೀನಿನಲ್ಲಿ ಜಾಕ್‌ವೆಲ್‌ನ ಪಂಪ್‌ಹೌಸ್ ನಿರ್ಮಾಣಮಾಡಿ ಮೋಟಾರ್ ಅಳವಡಿಸಿ ದ್ದರೂ ಇದಕ್ಕೆ ವಿದ್ಯುತ್ ಸಂಪರ್ಕ ನೀಡಿಲ್ಲ.
ಪೈಪ್‌ಲೈನ್ ಮಾಡದೆ ಹಣ ಡ್ರಾ: ಒಟ್ಟು 3.25 ಕಿ.ಮೀ. ದೂರಕ್ಕೆ ಇಲ್ಲಿಂದ ಪೈಪ್‌ಲೈನ್ ಮಾಡಲು ಹಣವನ್ನು ಡ್ರಾ ಮಾಡಲಾಗಿದೆ. 1,900 ಮೀಟರ್ ಪೈಪ್‌ಲೈನ್ ಮಾಡಲಾಗಿದೆ ಎಂದು ಸರ್ಕಾರಿ ದಾಖಲೆಗಳಲ್ಲಿ ಇದೆ. ಇದಕ್ಕಾಗಿ 17 ಲಕ್ಷ ರೂ. ಡ್ರಾ ಮಾಡಲಾಗಿದೆ. ಆದರೆ ಇಲ್ಲಿ ಕೇವಲ 170 ಮೀಟರ್ ಪೈಪ್ ಮಾತ್ರ ಅಳವಡಿಸಲಾಗಿದೆ. ಅಲ್ಲದೆ ಈ ಪೈಪ್ ರೈತರ ಜಮೀನಿಂದ ಹಾದು ಹೋಗಬೇಕು. ಇದಕ್ಕೆ ಇಲ್ಲಿನ ಕೆಲ ರೈತರು ಅನುಮತಿಯನ್ನೇ ಕೊಟ್ಟಿಲ್ಲ. ಸುಳ್ಳು ದಾಖಲೆ ನೀಡಿ ಹಣ ಪಡೆಯಲಾಗಿದೆ. ಕಾಮಗಾರಿ ಪೂರ್ಣವಾಗದಿದ್ದರೂ 2.10 ಕೋಟಿ ರೂ. ಹಣವನ್ನು ಇಲಾಖೆಯಿಂದ ಸಂದಾಯ ವಾಗಿದೆ ಎಂದು ರೈತರು ಆರೋಪಿಸಿದರು.
ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್, ತಹಶೀಲ್ದಾರ್ ಸಲಾಂಹುಸೇನ್, ಶರತ್ ಸೇರಿದಂತೆ ನೀರಾವರಿ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ಎಂಜಿನಿಯರ್‌ಗಳು ಹಾಗೂ ರೈತರು ಹಾಜರಿದ್ದರು.
ಸೂಕ್ತ ಕ್ರಮ ವಹಿಸುವ ಭರವಸೆ :
ಈ ಬಗ್ಗೆ ಹೆಚ್ಚುವರಿ ಜಿಲ್ಲಾಧಿಕಾರಿ ಕತ್ಯಾಯಿನಿ ಪ್ರತಿಕ್ರಿಯಿಸಿ, ಈ ಕುರಿತು ಸ್ಥಳೀಯ ರೈತರಿಂದ ಮಾಹಿತಿಪಡೆದುಕೊಳ್ಳಲಾಗಿದೆ. ಲಿಖೀತವಾಗಿ ಅವರಿಂದ ಇಲ್ಲಿ ನಡೆದಿರುವ ಕಾಮಗಾರಿಯ ಮಾಹಿತಿ ಸಂಗ್ರಹಿಸಲಾಗಿದೆ. ಜಾಕ್‌ವೆಲ್‌ನ ಪಂಪ್‌ಹೌಸ್, ಚೆಕ್‌ಡ್ಯಾಂ ಹಾಗೂ ಕೆರೆ ಇರುವ ಸ್ಥಳವನ್ನುಪರಿಶೀಲಿಸಲಾಗಿದೆ. ಈ ಬಗ್ಗೆ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕಿ ಸೂಕ್ತ ಕ್ರಮ ವಹಿಸಲಾಗುವುದು ಎಂದರು.