Home / ಜಿಲ್ಲೆ / ಬೆಂಗಳೂರು / ಯಾರಿಗೆ ಎಲ್ಲಿ ಅನುಕೂಲವಾಗುತ್ತೋ ಅಲ್ಲಿ ಲಸಿಕೆ ಹಾಕಿಸಿಕೊಳ್ಳಲಿ: ಸಿಎಂ ಯಡಿಯೂರಪ್ಪ

ಯಾರಿಗೆ ಎಲ್ಲಿ ಅನುಕೂಲವಾಗುತ್ತೋ ಅಲ್ಲಿ ಲಸಿಕೆ ಹಾಕಿಸಿಕೊಳ್ಳಲಿ: ಸಿಎಂ ಯಡಿಯೂರಪ್ಪ

Spread the love

ಬೆಂಗಳೂರು: ಕೊರೊನಾ ಮೂರನೇ ಹಂತದ ಲಸಿಕೆ ನೀಡಿಕೆ ಆರಂಭವಾಗಿದೆ. ಎಲ್ಲರೂ ಲಸಿಕೆ ಪಡೆಯುವುದು ಮುಖ್ಯ. ಹೀಗಾಗಿ ಯಾರು ಯಾರು ಎಲ್ಲೆಲ್ಲಿ ಅನುಕೂಲ ಆಗುತ್ತೋ ಅಲ್ಲಿ ಲಸಿಕೆ ಪಡೆದುಕೊಳ್ಳಲಿ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ, ಇನ್ನೆರಡು ದಿನಗಳಲ್ಲಿ ನಾನೂ ಕೂಡ ಲಸಿಕೆ ಹಾಕಿಸಿಕೊಳ್ಳಲಿದ್ದೇನೆ. ಮನೇಲಿ ಹಾಕಿಸಿಕೊಳ್ಳಬೇಕಾ ಅಥವಾ ಆಸ್ಪತ್ರೆಯಲ್ಲಿ ಹಾಕಿಸಿಕೊಳ್ಳಬೇಕಾ ಎಂದು ನೋಡುತ್ತೇನೆ ಎಂದರು.

ಇದೇ ವೇಳೆ ನಾನು ರಾಘವೇಂದ್ರ ಸ್ವಾಮಿಗಳ ಭಕ್ತ. ಹಾಗಾಗಿಯೇ ನನ್ನ ಇಬ್ಬರು ಮಕ್ಕಳಿಗೂ ರಾಯರ ಹೆಸರನ್ನು ಇಟ್ಟಿದ್ದೇನೆ. ಒಂದು ದಿನವೂ ಗುರುರಾಯರ ಸ್ಮರಣೆ ಮಾಡದೇ ಇರುವುದಿಲ್ಲ. ಅವರ ಆಶೀರ್ವಾದದಿಂದಲೇ ನಾನಿಂದು ಈ ಹುದ್ದೆಗೆ ಬಂದಿದ್ದೇನೆ ಎಂದು ತಿಳಿಸಿದರು.

ಮಾರ್ಚ್ 8ರಂದು ನಾನು ಬಜೆಟ್ ಮಂಡಿಸುತ್ತೇನೆ. ಈ ಬಜೆಟ್ ನ ಪೂರ್ಣ ಫಲ ರಾಜ್ಯದ ಜನತೆಗೆ ಸಿಗಲಿ. ಈ ಬಾರಿ ಬಜೆಟ್ ಎಲ್ಲ ವರ್ಗದ ಜನರಿಗೂ ಅನುಕೂಲವಾಗುವಂತಹ ಬಜೆಟ್ ಆಗಿರುತ್ತದೆ ಎಂದರು.


Spread the love

About Laxminews 24x7

Check Also

ಕಾಂಗ್ರೆಸ್‌ ಭದ್ರಕೋಟೆಗೆ ಹೊಸ ಮುಖಗಳ ಲಗ್ಗೆ

Spread the love ಚಿಕ್ಕಬಳ್ಳಾಪುರ: ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ರೇಷ್ಮೆ, ಹೈನುಗಾರಿಕೆ, ದ್ರಾಕ್ಷಿ ಮತ್ತು ತರಕಾರಿ ಉತ್ಪಾದನೆಯಲ್ಲಿ ಅಗ್ರಸ್ಥಾನ ಹೊಂದಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ