Home / ಸಿನೆಮಾ / ಸಿನಿಮಾ ಕ್ಷೇತ್ರದಲ್ಲಿ ರಾಜಕೀಯ ಆರಂಭವಾಗಿದೆ. ಇದೊಂದು ದೊಡ್ಡ ಹುನ್ನಾರ: ಜಗ್ಗೇಶ್​

ಸಿನಿಮಾ ಕ್ಷೇತ್ರದಲ್ಲಿ ರಾಜಕೀಯ ಆರಂಭವಾಗಿದೆ. ಇದೊಂದು ದೊಡ್ಡ ಹುನ್ನಾರ: ಜಗ್ಗೇಶ್​

Spread the love

ಬೆಂಗಳೂರು: ಜಾಹೀರಾತು ನೀಡುವ ಬಗ್ಗೆ ಮಾತನಾಡುವ ಭರದಲ್ಲಿ ಸ್ಯಾಂಡಲ್​ವುಡ್​ ಸ್ಟಾರ್​ ದರ್ಶನ್​ ತೂಗುದೀಪ್​ ಅವರ ಬಗ್ಗೆ ಜಗ್ಗೇಶ್​ ಮಾತನಾಡಿರುವ ಆಡಿಯೋ ಎನ್ನಲಾದ ಆಡಿಯೋ ಕ್ಲಿಪ್​ ಒಂದು ಹರಿದಾಡಿದ್ದು, ಅದರಿಂದಲೇ ನವರಸ ನಾಯಕ ಜಗ್ಗೇಶ್​ ಪೇಚಿಗೆ ಸಿಲುಕುವಂತಾಗಿದೆ. ನೆಚ್ಚಿನ ನಾಯಕನ ಬಗ್ಗೆ ಕೆಟ್ಟದಾಗಿ ಮಾತನಾಡಿದ ಜಗ್ಗೇಶ್​ಗೆ ದರ್ಶನ್​ ಅಭಿಮಾನಿಗಳು ಸಿನಿಮಾ ಸೆಟ್​ನಲ್ಲೇ ಬೆವರಳಿಸಿದ್ದಾರೆ.

ಇತ್ತೀಚೆಗೆ ಜಗ್ಗೇಶ್​ ಅವರ ಧ್ವನಿ ಎನ್ನಲಾದ ಆಡಿಯೋ ಒಂದು ಹರಿದಾಡಿದೆ. ಅದರಲ್ಲಿ ಅವರು ದರ್ಶನ್​ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ರೆಕಾರ್ಡ್​ ಆಗಿದೆ. ಸಿನಿಮಾದ ನಿರ್ಮಾಪಕರೊಬ್ಬರೊಂದಿಗೆ ಜಗ್ಗೇಶ್​ ಮಾತನಾಡಿದ್ದ ಆ ಆಡಿಯೋ ಕ್ಲಿಪ್​ ದರ್ಶನ್​ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಸದ್ಯ ಜಗ್ಗೇಶ್​ ಅವರು ತೋತಾಪುರಿ ಸಿನಿಮಾದ ಚಿತ್ರೀಕರಣದಲ್ಲಿದ್ದಾರೆ. ಸಿನಿಮಾ ಸೆಟ್​ಗೆ ದಾಳಿಯಿಟ್ಟಿರುವ ದರ್ಶನ್​ ಅಭಿಮಾನಿಗಳು ಜಗ್ಗೇಶ್​ಗೆ ಮುತ್ತಿಗೆ ಹಾಕಿದ್ದಾರೆ. ಆದರೆ ಜಗ್ಗೇಶ್​ ಮಾತ್ರ ಆ ಆಡಿಯೋ ಕ್ಲಿಪ್​ನಲ್ಲಿರುವ ಧ್ವನಿ ತನ್ನದಲ್ಲ ಎಂದು ಆರೋಪವನ್ನು ತಳ್ಳಿ ಹಾಕಿದ್ದಾರೆ. ತಾನು ದರ್ಶನ್​ ಹೆಸರಿನ ವೆಬ್​ ಡಿಸೈನರ್​ ಬಗ್ಗೆ ಮಾತನಾಡಿದ್ದು, ಅದನ್ನು ಎಡಿಟ್​ ಮಾಡಿ ಈ ರೀತಿ ಆರೋಪ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ರಾಜಕೀಯ ಆರಂಭವಾಗಿದೆ. ಇದೊಂದು ದೊಡ್ಡ ಹುನ್ನಾರ ಎಂದು ಅವರು ಹೇಳಿರುವುದು ಕಂಡುಬಂದಿದೆ


Spread the love

About Laxminews 24x7

Check Also

ಫ್ಯಾಟ್‌ ಸರ್ಜರಿ ಎಫೆಕ್ಟ್‌ – ಕಿರುತೆರೆ ನಟಿ ಚೇತನಾ ರಾಜ್‌ ಸಾವು

Spread the loveಬೆಂಗಳೂರು: ಫ್ಯಾಟ್‌ ಸರ್ಜರಿ ವೇಳೆ ಶ್ವಾಸಕೋಶಕ್ಕೆ ನೀರಿನ ಅಂಶ ಶೇಖರಣೆಯಾಗಿ ಕಿರುತೆರೆ ಯುವ ನಟಿ ಚೇತನಾ ರಾಜ್‌ ಮೃತಪಟ್ಟಿದ್ದಾರೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ