Home / Uncategorized / ಪ್ರತಿಭಟನೆ ಮಾಡಿದ್ರೆ ಸಿಗಲ್ವಾ ಪಾಸ್‌ಪೋರ್ಟ್‌?

ಪ್ರತಿಭಟನೆ ಮಾಡಿದ್ರೆ ಸಿಗಲ್ವಾ ಪಾಸ್‌ಪೋರ್ಟ್‌?

Spread the love

ಪಾಸ್ಪೋರ್ಟ್‌ ನೀಡುವಾಗ ವ್ಯಕ್ತಿಗಳ ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳು ಮತ್ತು ಅದರ ಜತೆಗಿನ ಬಾಂಧವ್ಯಗಳನ್ನೂ ನೋಡುತ್ತೇವೆ ಎಂದು ಇತ್ತೀಚೆಗಷ್ಟೇ ಬಿಹಾರ ಮತ್ತು ಉತ್ತರಾಖಂಡ ಪೊಲೀಸರು ಆದೇಶ ಹೊರಡಿಸಿದ್ದಾರೆ. ಇದು ಸಾಕಷ್ಟು ಚರ್ಚೆಗೂ ಕಾರಣವಾಗುತ್ತಿದೆ. ಹಾಗಾದರೆ ಪಾಸ್‌ಪೋರ್ಟ್‌ ನೀಡುವಾಗ ಪೊಲೀಸರು ಯಾವೆಲ್ಲಾ ವಿಷಯ ಪರಿಗಣಿಸುತ್ತಾರೆ? ಈ ಬಗ್ಗೆ ನೋಡೋಣ ಬನ್ನಿ…

ಪೊಲೀಸರು ಚೆಕ್‌ ಮಾಡುವುದೇನು?
1. ವಿಳಾಸದ ಬಗ್ಗೆ ಖುದ್ದು ಭೇಟಿ ನೀಡಿ ಪರಿಶೀಲನೆ
2. ಈ ವಿಳಾಸದಲ್ಲಿ ಉಳಿದುಕೊಂಡಿರುವ ಅವಧಿ
3. ಅಪರಾಧದ ಹಿನ್ನೆಲೆ (ಯಾವುದಾದರೂ ಇದ್ದಲ್ಲಿ)

ಶಿಫಾರಸು ಏನಾಗಿರುತ್ತೆ?
1. ಕೊಡಬಹುದು.
2. ಸರಿಯಾಗಿದೆ, ನಿರ್ಧಾರ ನಿಮ್ಮದು.
3. ಕೊಡಲು ಸೂಕ್ತವಲ್ಲ.

ಪೊಲೀಸರ ಪರಿಶೀಲನೆ ಅಂದರೇನು?
ಅರ್ಜಿದಾರನೊಬ್ಬ ತನಗೆ ಪಾಸ್‌ಪೋರ್ಟ್‌ ಬೇಕು ಎಂದು ಅರ್ಜಿ ಸಲ್ಲಿಸಿದ ಬಳಿಕ, ಪ್ರಾದೇಶಿಕ ಪಾಸ್‌ಪೋರ್ಟ್‌ ಸಂಸ್ಥೆಯು ದಾಖಲೆಗಳ ಪರಿಶೀಲನೆ ಮಾಡಿ, ವಿಳಾಸ ಮತ್ತು ಅಪರಾಧ ಹಿನ್ನೆಲೆ ಬಗ್ಗೆ ಮಾಹಿತಿ ಸಂಗ್ರಹಿಸಲು ಪೊಲೀಸರ ಸಹಾಯ ಪಡೆದುಕೊಳ್ಳುತ್ತದೆ. ಇವರು ಅರ್ಜಿದಾರರ ವಿಳಾಸಕ್ಕೆ ಹೋಗಿ, ಅವರ ವಿಳಾಸ ದೃಢೀಕರಿಸುವುದರ ಜತೆ ಎಷ್ಟು ದಿನಗಳಿಂದ ಅಲ್ಲಿ ವಾಸವಿದ್ದಾರೆ ಎಂಬುದನ್ನೂ ನೋಡಬೇಕು. ಜತೆಗೆ ಏನಾದರೂ ಅಪರಾಧ ಹಿನ್ನೆಲೆ ಇದ್ದರೂ, ಪೊಲೀಸರಿಗೆ ಮಾಹಿತಿ ನೀಡಬೇಕು.

ಯಾವ ರೀತಿಯ ಅಪರಾಧ ಹಿನ್ನೆಲೆಗಳ ದಾಖಲೀಕರಣ?
ಎಫ್‌ಐಆರ್‌ ಆಗಿರುವ ಕ್ರಿಮಿನಲ್‌ ಕೇಸುಗಳ ಮಾತ್ರ ದಾಖಲೀಕರಿಸಬಹುದು. ಸಿಗ್ನಲ್‌ ಜಂಪ್‌ ಮಾಡಿ ಟ್ರಾಫಿಕ್‌ ಕೇಸ್‌ ಹಾಕಿಸಿಕೊಂಡಿದ್ದು ಇದರ ವ್ಯಾಪ್ತಿಗೆ ಬರುವುದಿಲ್ಲ.

ಪೊಲೀಸರು ಕೊಡಲು ಸೂಕ್ತವಲ್ಲ ಎಂಬ ಶಿಫಾರಸು ನೀಡಿದರೆ ಏನಾಗುತ್ತೆ?
ಪಾಸ್‌ಪೋರ್ಟ್‌ ಕೊಡಬಹುದೇ ಅಥವಾ ಬೇಡವೇ ಎಂಬ ಬಗ್ಗೆ ಪೊಲೀಸರು ನಿರ್ಧಾರ ಮಾಡಲಾಗದು. ಆದರೆ ಶಿಫಾರಸು ಮಾಡಬಹುದು. ಇದನ್ನು ಪಾಸ್‌ಪೋರ್ಟ್‌ ಕಚೇರಿ ಕೇಳಲೇಬೇಕು ಅಂತೇನಿಲ್ಲ. ಪ್ರತಿಭಟನೆಗಳಲ್ಲಿ ಭಾಗಿಯಾಗಿ ಕೇಸ್‌ ಹಾಕಿಸಿಕೊಂಡ ವ್ಯಕ್ತಿ ವಿರುದ್ಧ ಕೇಸ್‌ ಇದ್ದು, ಪಾಸ್‌ಪೋರ್ಟ್‌ ನೀಡದಿದ್ದರೆ, ಆತ ಕೋರ್ಟ್‌ಗೆ ಹೋಗಿ ಹೋರಾಡಿ ಪಾಸ್‌ಪೋರ್ಟ್‌ ಪಡೆಯಬಹುದು.

ಯಾವ ಸಂದರ್ಭಗಳಲ್ಲಿ ನಿರಾಕರಿಸಲಾಗುತ್ತದೆ?
ಎರಡು ಕಾರಣಗಳಿಗಾಗಿ ಪಾಸ್‌ಪೋರ್ಟ್‌ ನಿರಾಕರಿಸಲಾಗುತ್ತದೆ. ಒಂದು, ಅರ್ಜಿದಾರ ವ್ಯಕ್ತಿ ಭಾರತೀಯನಲ್ಲದೇ ಇರುವುದು. ವಿದೇಶದಲ್ಲಿ ಭಾರತದ ವಿರುದ್ಧ ಕೆಟ್ಟ ಅಭಿಪ್ರಾಯ ಮೂಡಿಸುತ್ತಿದ್ದರೆ, ದೇಶ ದೇಶಗಳ ನಡುವೆ ಸಂಬಂಧ ಹಾಳಾಗುವಂಥ ವಾತಾವರಣ ಸೃಷ್ಟಿಸಿದ್ದರೆ, ಭಾರತದ ಆಂತರಿಕ ಭದ್ರತೆಗೆ ಹಾನಿ ತರುವಂಥ ವ್ಯಕ್ತಿಗೆ ನೀಡಲಾಗುವುದಿಲ್ಲ.

ಎರಡನೆಯದು ಅರ್ಜಿ ಹಾಕಿದ ದಿನದಿಂದ 5 ವರ್ಷಗಳ ಹಿಂದೆ ಯಾವುದೇ ಪ್ರಕರಣದ ಸಂಬಂಧ ಅಪರಾಧಿ ಎಂದು ಕೋರ್ಟ್‌ನಿಂದ ಘೋಷಣೆಯಾಗಿದ್ದಲ್ಲಿ. ಅಂದರೆ 2 ವರ್ಷಕ್ಕಿಂತ ಹೆಚ್ಚು ಜೈಲು ಶಿಕ್ಷೆಯಾಗಿರಬೇಕು.


Spread the love

About Laxminews 24x7

Check Also

ಮತದಾನಕ್ಕೆ ಮೂರೇ ದಿನ ಬಾಕಿ: ಬೆಂಗಳೂರಿನಲ್ಲಿ ನಾಳೆ ಸಂಜೆಯಿಂದ ನಿಷೇಧಾಜ್ಞೆ

Spread the loveಲೋಕಸಭಾ ಚುನಾವಣೆ ಮತದಾನಕ್ಕೆ ಮೂರೇ ದಿನ ಬಾಕಿ: ಬೆಂಗಳೂರಿನಲ್ಲಿ ನಾಳೆ ಸಂಜೆಯಿಂದ ನಿಷೇಧಾಜ್ಞೆ ಜಾರಿ ಬೆಂಗಳೂರು: ಲೋಕಸಭಾ ಚುನಾವಣೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ