Breaking News

ನಕ್ಷತ್ರ ಆಮೆ ಮಾರಾಟ ಯತ್ನ: ಇಬ್ಬರ ಸೆರೆ

Spread the love

ಕಲಬುರಗಿ: ನಗರದ ರೈಲು ನಿಲ್ದಾಣದ ಬಳಿ ನಕ್ಷತ್ರ ಆಮೆಯೊಂದನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

ವಿದ್ಯಾನಂದ ಮತ್ತು ಜಿತೇಂದ್ರ ಬಂಧಿತ ಆರೋಪಿಗಳು. ಇವರುಜೀವಂತ ನಕ್ಷತ್ರ ಆಮೆ ಮಾರಾಟ ಮಾಡಲು ಯತ್ನಿಸುತ್ತಿದ್ದರು. ಈ ಆಮೆ ಸಂತತಿ ಆಳಿವಿನ ಅಂಚಿಗೆ ತಲುಪಿದ್ದು, ಅಪರೂಪದ್ದಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಕ್ಷತ್ರ ಆಮೆಗೆ ತುಂಬಾ ಬೇಡಿಕೆ ಇದೆ. ನಕ್ಷತ್ರ ಆಮೆ ಮಾರಾಟದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಮಾರ್ಗದರ್ಶದಲ್ಲಿ ಚೆನ್ನೈ ವನ್ಯಜೀವಿ ಅಪರಾಧ ತಡೆ ಕಚೇರಿ ತಂಡದೊಂದಿಗೆ ವಲಯ ಅರಣ್ಯಾಧಿಕಾರಿ ರಮೇಶ ಮಾಳಾ ನೇತೃತ್ವದಲ್ಲಿ ಕಾರ್ಯಾಚರಣೆ ನಕ್ಷತ್ರ ಆಮೆ ವಪಡಿಸಿಕೊಂಡು, ಇಬ್ಬರನ್ನು ಬಂಧಿಸಲಾಗಿದೆ.

 

ಸಿಬ್ಬಂದಿಗಳಾದ ರೇವಣಸಿದ್ದಪ್ಪ ತಾವರಖೇಡ ಹಾಗೂ ಸಿದ್ದಾಮೇಶ್ವರ ನಾಲತವಾಡ, ಸುರೇಶ ಬೆಣ್ಣೂರ ಕಾರ್ಯಾಚರಣೆಯಲ್ಲಿ ಇದ್ದರು. ವನ್ಯ ಜೀವಿ ಸಂರಕ್ಷಣಾ ಕಾಯ್ದೆ ಯಡಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಟ್ರೆಂಡ್‌ ಗೀಳಿಗೆ ಬಿದ್ದು ಟ್ರ್ಯಾಪ್‌ ಆಗ್ಬೇಡಿ – 80s ಫೋಟೊ ಟ್ರೆಂಡ್‌ ಬಗ್ಗೆ ಪೊಲೀಸರ ಎಚ್ಚರಿಕೆ!

Spread the loveನೆಲಮಂಗಲ: ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಟ್ರೆಂಡ್ ಆಗುತ್ತಿರುವ 80ರ ದಶಕದ ಫೋಟೋ ಎಡಿಟಿಂಗ್ ಕುರಿತು ಸಾರ್ವಜನಿಕರು ಎಚ್ಚರಿಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ