Home / Uncategorized / ಬಜೆಟ್-21:ಕೃಷಿ ಕ್ಷೇತ್ರಕ್ಕೆ ಸಿಕ್ಕಿದ್ದೆಷ್ಟು?ಕೃಷಿ ಸಾಲದ ಗುರಿ 16.5 ಲಕ್ಷ ಕೋಟಿಗೆ ಏರಿಕೆ

ಬಜೆಟ್-21:ಕೃಷಿ ಕ್ಷೇತ್ರಕ್ಕೆ ಸಿಕ್ಕಿದ್ದೆಷ್ಟು?ಕೃಷಿ ಸಾಲದ ಗುರಿ 16.5 ಲಕ್ಷ ಕೋಟಿಗೆ ಏರಿಕೆ

Spread the love

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ(ಫೆ.1, 2021) ಸಂಸತ್ ನಲ್ಲಿ ಮಂಡಿಸಿದ 2021-22ನೇ ಸಾಲಿನ ಆಯವ್ಯಯದಲ್ಲಿ ಕೇಂದ್ರ ಕೃಷಿ ಕ್ಷೇತ್ರದ ಸಾಲವನ್ನು 16. 5 ಲಕ್ಷ ಕೋಟಿ ರೂಪಾಯಿಗೆ ಏರಿಕೆ ಮಾಡಿರುವುದಾಗಿ ಘೋಷಿಸಿದೆ.

 

ಕೇಂದ್ರ ಸರ್ಕಾರ ರೈತರ ಅಭಿವೃದ್ಧಿಗೆ ಬದ್ಧವಾಗಿರುವುದಾಗಿ ಪುನರುಚ್ಚರಿಸಿದ್ದು, ಎಲ್ಲಾ ಬೆಳೆಗಳ ಬೆಂಬಲ ಬೆಲೆಯನ್ನು (ಎಂಎಸ್ ಪಿ) ಮತ್ತಷ್ಟು ಹೆಚ್ಚಳ ಮಾಡುವುದಾಗಿ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದ್ದಾರೆ.

2013-14ನೇ ಸಾಲಿನಲ್ಲಿ ಗೋಧಿಯನ್ನು ಖರೀದಿಸುವ ಮೂಲಕ ರೈತರಿಗೆ 33,874 ಕೋಟಿ ರೂಪಾಯಿ ಪಾವತಿಸಲಾಗಿತ್ತು. 2019-20ನೇ ಸಾಲಿನಲ್ಲಿ ಆ ಮೊತ್ತ 62,802 ಕೋಟಿಗೆ ಏರಿಕೆಯಾಗಿದ್ದು, 2020-21ನೇ ಸಾಲಿನಲ್ಲಿ 75,060 ಕೋಟಿ ರೂಪಾಯಿಗೆ ಹೆಚ್ಚಳವಾಗಿರುವುದಾಗಿ ನಿರ್ಮಲಾ ಸೀತಾರಾಮನ್ ಬಜೆಟ್ ನಲ್ಲಿ ಘೋಷಿಸಿದ್ದಾರೆ.

ಹತ್ತಿ ಬೆಳೆಗಾರರಿಗೆ ಇದೀಗ ಭರ್ಜರಿ ರಿಲೀಫ್ ಕಂಡಿದ್ದಾರೆ. 2013-14ನೇ ಸಾಲಿನಲ್ಲಿ 90 ಕೋಟಿ ರೂಪಾಯಿ ಪಾವತಿಸಲಾಗಿತ್ತು. 2020-21ನೇ ಸಾಲಿನಲ್ಲಿ ಆ ಮೊತ್ತವನ್ನು 25, 000 ಕೋಟಿ ರೂಪಾಯಿಗೆ ಏರಿಕೆ ಮಾಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ವೇಳೆ ತಿಳಿಸಿದ್ದಾರೆ.

ಈ ಪಾವತಿಯಿಂದ ದೇಶದ 43.36 ಲಕ್ಷ ರೈತರು ಲಾಭ ಪಡೆದಿದ್ದಾರೆ. ರೈತರಿಗೆ ಅಗತ್ಯವಿರುವ ಎಲ್ಲಾ ನೆರವನ್ನು ಕೇಂದ್ರ ಸರ್ಕಾರ ನೀಡಲಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.


Spread the love

About Laxminews 24x7

Check Also

ಮತದಾನಕ್ಕೆ ಮೂರೇ ದಿನ ಬಾಕಿ: ಬೆಂಗಳೂರಿನಲ್ಲಿ ನಾಳೆ ಸಂಜೆಯಿಂದ ನಿಷೇಧಾಜ್ಞೆ

Spread the loveಲೋಕಸಭಾ ಚುನಾವಣೆ ಮತದಾನಕ್ಕೆ ಮೂರೇ ದಿನ ಬಾಕಿ: ಬೆಂಗಳೂರಿನಲ್ಲಿ ನಾಳೆ ಸಂಜೆಯಿಂದ ನಿಷೇಧಾಜ್ಞೆ ಜಾರಿ ಬೆಂಗಳೂರು: ಲೋಕಸಭಾ ಚುನಾವಣೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ