Breaking News

ಜನವರಿ 22ರಂದು ಐದು ಕನ್ನಡ ಸಿನಿಮಾ ಬಿಡುಗಡೆ

Spread the love

ಸ್ಟಾರ್ ನಟರ ಚಿತ್ರಗಳು ಒಂದೊಂದೆ ಬಿಡುಗಡೆ ದಿನಾಂಕ ಘೋಷಿಸಿದೆ. ಸ್ಯಾಂಡಲ್‌ವುಡ್‌ನಲ್ಲಿ ಇನ್ನು ಎರಡು ತಿಂಗಳು ಸ್ಟಾರ್ ನಟರ ಅಬ್ಬರ ಜೋರಾಗಿರಲಿದೆ. ಈ ಗ್ಯಾಪ್‌ನಲ್ಲಿ ಹೊಸಬರ ಸಿನಿಮಾಗಳು ತೆರೆಗೆ ಬರುವುದು ಸ್ವಲ್ಪ ಮಟ್ಟಿಗೆ ಕಷ್ಟ ಎನ್ನಬಹುದು.

ಬಹುಶಃ ಅದಕ್ಕಾಗಿಯೇ ಈ ವಾರ ಐದು ಕನ್ನಡ ಸಿನಿಮಾ ಚಿತ್ರಮಂದಿರಕ್ಕೆ ಬರ್ತಿದೆ. ಜನವರಿ 22 ರಂದು ಐದು ಕನ್ನಡ ಸಿನಿಮಾ ಥಿಯೇಟರ್‌ಗೆ ಬರ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

‘ತಲಾಖ್ ತಲಾಖ್ ತಲಾಖ್ ಸಿನಿಮಾ ಈ ವಾರ ರಿಲೀಸ್ ಆಗುತ್ತಿದೆ. ಆರ್‌ಜೆ ನೇತ್ರಾ, ಸುಚೇತನ್ ಸ್ವರೂಪ್, ಶ್ರೀನಿವಾಸ್ ಮೂರ್ತಿ, ರವಿ ಭಟ್, ವೀಣಾ ಸುಂದರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರಶಾಂತ್ ಸಿದ್ದಿ, ದಿವಂಗತ ನಟ ರಾಕ್‌ಲೈನ್ ಸುಧಾಕರ್, ಶಿವಮೊಗ್ಗ ಸಂತೋಷ್, ಮೇಘಶ್ರೀ ನಟನೆಯ ‘ಪಂಟ್ರು’ ಸಿನಿಮಾ ಈ ವಾರವೇ ಬಿಡುಗಡೆಯಾಗುತ್ತಿದೆ. ಮಿಲನ್ ಧನು ಈ ಚಿತ್ರ ನಿರ್ದೇಶಿಸಿದ್ದಾರೆ.

ಬಿಂದುಶ್ರೀ, ಪವಿತ್ರಾ, ಹರೀಶ್, ಸಮೀರ್ ನಾಗ್ ಹಾಗೂ ರಾಕ್‌ಲೈನ್ ಸುಧಾಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ಲಡ್ಡು’ ಚಿತ್ರವೂ ಇದೇ ವಾರ ಪ್ರೇಕ್ಷಕರ ಮುಂದೆ ಬರ್ತಿದೆ. ರಾಮಾನಂದ್ ಈ ಚಿತ್ರ ನಿರ್ದೇಶಿಸಿದ್ದಾರೆ.

ರಾಜು ದೇವಸಂದ್ರ ನಿರ್ದೇಶನದ ‘ಕತ್ಲೆಕಾಡು’ ಸಿನಿಮಾನೂ ಇದೇ ವಾರ ರಿಲೀಸ್ ಆಗುತ್ತಿದೆ. ಶಿವಾಜಿನಗರ ಲಾಲ್, ಸಂಜೀವ್, ಸಿಂಧು ರಾವ್, ಸಂಹಿತಾ ಶಾ, ಸಿಂಚನಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಜೊತೆಗೆ ‘ರಾಜಮಾರ್ಗ’ ಎನ್ನುವ ಚಿತ್ರವೂ ಬಿಡುಗಡೆಯಾಗುತ್ತಿದೆ.


Spread the love

About Laxminews 24x7

Check Also

ಶಾಂತಾಯಿ ವೃದ್ಧಾಶ್ರಮದಲ್ಲಿ ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಪಿಂಕ್ ವಾರಿಯರ್ಸ್ ತಂಡದಿಂದ ಜಾಗೃತಿಪರ ನಾಟಕ ಪ್ರದರ್ಶನ

Spread the love ಶಾಂತಾಯಿ ವೃದ್ಧಾಶ್ರಮದಲ್ಲಿ ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಪಿಂಕ್ ವಾರಿಯರ್ಸ್ ತಂಡದಿಂದ ಜಾಗೃತಿಪರ ನಾಟಕ ಪ್ರದರ್ಶನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ