Breaking News
Home / ಜಿಲ್ಲೆ / ಬೆಳಗಾವಿ / ಗುಡಿ ಗಂಡಾರಗಳಲ್ಲಿ ದೇವರಿಲ್ಲ. ಈ ದೇಶವನ್ನು ಕಟ್ಟಿದ ಶ್ರಮಜೀವಿಗಳೇ ನಿಜವಾದ ದೇವರುಗಳು: ಆರ್.ಎಸ್.ದರ್ಗೆ

ಗುಡಿ ಗಂಡಾರಗಳಲ್ಲಿ ದೇವರಿಲ್ಲ. ಈ ದೇಶವನ್ನು ಕಟ್ಟಿದ ಶ್ರಮಜೀವಿಗಳೇ ನಿಜವಾದ ದೇವರುಗಳು: ಆರ್.ಎಸ್.ದರ್ಗೆ

Spread the love

ಬೆಳಗಾವಿ: ಗುಡಿ ಗಂಡಾರಗಳಲ್ಲಿ ದೇವರಿಲ್ಲ. ಈ ದೇಶವನ್ನು ಕಟ್ಟಿದ ಶ್ರಮಜೀವಿಗಳೇ ನಿಜವಾದ ದೇವರುಗಳು ಎಂದು ಬಸವ ಭೀಮ ಸೇನೆಯ ಅಧ್ಯಕ್ಷ ಆರ್.ಎಸ್.ದರ್ಗೆ ಹೇಳಿದ್ದಾರೆ.

ಬಸವ ಪಂಚಮಿಯ ಅಂಗವಾಗಿ ಬಸವ ಭೀಮ ಸೇನೆಯ ವತಿಯಿಂದ ಜುಲೈ 27 ರÀವರೆಗೆ ಹಮ್ಮಿಕೊಂಡಿರುವ ನಮ್ಮ ನಡೆ ನಮ್ಮ ಸಮುದಾಯಗಳ ಕಡೆ ಎಂಬ ಅಭಿಯಾನದ ಅಂಗವಾಗಿ ಗುರುವಾರದಂದು ಅಲೆಮಾರಿ ಬುಡಕಟ್ಟು ಜನಾಂಗದ ಹೋರಾಟಗಾರ ಮಲ್ಲೇಶ ಹೆಳವರ ಅವರನ್ನು ಶ್ರೀನಗರದಲ್ಲಿಯ ಅವರ ನಿವಾಸದಲ್ಲಿ ಸತ್ಕರಿಸಿ ಅವರು ಮಾತನಾಡಿದರು.

ಗ್ರಹಣ, ರೋಗ ರುಜಿನಗಳಿಗೆ ಹೆದರಿ ಬಾಗಿಲು ಹಾಕಿಕೊಂಡಿರುವ ದೇವರುಗಳಿಗೆ ಕೈ ಮುಗಿಯುವದರ ಬದಲು ಶ್ರಮಜೀವಿಗಳಿಗೆ ಕೈ ಮುಗಿಯುವದರಲ್ಲಿ ನವ ಸಮಾಜ ಸಾರ್ಥಕತೆ ಕಾಣಬೇಕು. ದೇವರುಗಳ ಭಯ, ತೀರ್ಥ, ಪ್ರಸಾದ, ಅಭೀಷೇಕÀ ಎಂಬ ಸನಾತನತೆಯ ಭ್ರಮೆಗಳಿಂದ ಹೊರ ಬಂದು ಭಯ ಮುಕ್ತ ಸಮಾಜದ ನಿರ್ಮಾಣಕ್ಕೆ ಕೈ ಜೋಡಿಸಬೇಕು. ಕಲ್ಪಿತ ದೇವರುಗಳ ಜಾಗದಲ್ಲಿ ಬಸವ ಅಂಬೇಡ್ಕರರ ಸಾವಿತ್ರಬಾಯಿ ಫುಲೆ, ಅಕ್ಕಮಹಾದೇವಿ ಮುಂತಾದ ಸಮಾಜ ದೇವರುಗಳನ್ನು ಪ್ರತಿಷ್ಠಾಪಿಸಬೇಕು ಎಂದು ಮನವಿ ಮಾಡಿದರು.

ಸಮಾಜ ದೇವರುಗಳ ಆದರ್ಶಗಳ ಅಡಿಯಲ್ಲಿಯೇ ನಾವು ಬದುಕು ಕಟ್ಟಿಕೊಳ್ಳಬೇಕಾಗಿದೆ. ಬದುಕಿನ ಸಮಸ್ಯೆಗಳು ಹಾಗೂ ಸಾಮಾಜಿಕ ಅಸಮಾನತೆಯ ವಿರುದ್ಧ ಹೋರಾಡಬೇಕಾಗಿದೆ ಎಂದರು.

ಮೂಲ ಸೌಕರ್ಯಗಳು ಹಾಗೂ ಆಧುನಿಕ ಉಪಕರಣಗಳು ಇಲ್ಲದಿದ್ದ ಪ್ರಾಚೀನ ಭಾರತದ ಗ್ರಾಮೀಣ ಜನರ ಅಗತ್ಯತೆಗಳನ್ನು, ಕೃಷಿ ಉಪಕರಣವನ್ನು ಪೂರೈಸುತ್ತಿದ್ದ ಅಲೆಮಾರಿ ಜನಾಂಗದ ಸೇವೆಗೆ ಅಲೆಮಾರಿ ಜನಾಂಗ ಅಭಿನಂದನೆಗೆ ಅರ್ಹವಾಗಿದೆ. ಮಳೆ, ಚಳಿ, ಬಿಸಿಲಿನ ಬೆಗೆಯನ್ನು ಸಹಿಸಿಕೊಂಡು ಜನರ ಸೇವೆ ಮಾಡುತ್ತಿದ್ದ ಅಲೆಮಾರಿ ಜನಾಂಗದಿಂದಲೇ ದೇಶ ಬದುಕಿದೆ ಎಂದು ಅಲೆಮಾರಿ ಜನಾಂಗದ ಸೇವೆಯನ್ನು ಬಣ್ಣಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮಲ್ಲೇಶ ಹೆಳವರ ಅವರು, ಮಾನ ಸನ್ಮಾನಗಳನ್ನು ಕನಸು ಮನಸಿನಲ್ಲಿಯೂ ಉಹಿಸದ ಹೆಳವರ ಸಮಾಜದಂತಹ ಸಣ್ಣ ಸಮುದಾಯವನ್ನು ಗೌರವಕ್ಕೆ ಗುರುತಿಸಿರುವ ಬಸವ ಭೀಮ ಸೇನೆಯ ಮಾನವೀಯತೆಗೆ ನನ್ನ ಸಮುದಾಯ ಋಣಿಯಾಗಿದೆ ಎಂದರು.

ಎಲ್ಲ ಶೋಷಿತ ಸಮುದಾಯಗಳನ್ನು ಒಂದು ಗೂಡಿಸುವ ಮೂಲಕ ಹೋರಾಟಗಳಿಗೆ ಬಲ ನೀಡುವುದೆ ನಿಜವಾದ ಸಮಾಜ ಸಂಘಟನೆ. ಇಂತಹ ಅರ್ಥಪೂರ್ಣ ಕಾರ್ಯಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ. ಇಡಿ ಅಲೆಮಾರಿ ಸಮುದಾಯದ ಪರವಾಗಿ ಇಂದು ಈ ಸನ್ಮಾನ ಸ್ವೀಕರಿಸಿದ್ದೇನೆ ಎಂದರು.

ನಿಂಬೆವ್ವ ಹೆಳವರ, ವಿಠ್ಠಲ ಹೆಳವರ, ಮಹಾಂತೇಶ ಹೆಳವರ, ಉದಯ ಹೆಳವರ, ಕಮಲಾ ಹೆಳವರ, ಭೀಮವ್ವ ಹೆಳವರ ಮುಂತಾದವರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಕ್ಕೆ ಚಾನ್ಸೇ ಇಲ್ಲ

Spread the love ಹಾವೇರಿ : ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಎಲ್ಲಾ ಪಕ್ಷದ ನಾಯಕರುಗಳು ಅಭ್ಯರ್ಥಿಗಳು ಪರಸ್ಪರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ