Breaking News

BIG NEWS : ಇಂದು ಸಂಜೆಯೇ ನೂತನ ಸಚಿವರಿಗೆ ಖಾತೆ ಹಂಚಿಕೆ?

Spread the love

ಬೆಂಗಳೂರು : ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆಗೆ ಚರ್ಚೆ ನಡೆಸಿ ನೂತನ ಸಚಿವರಿಗೆ ಇಂದು ಸಂಜೆಯೇ ಖಾತೆ ಹಂಚಿಕೆ ಮಾಡಲು ಸಿಎಂ ಬಿ.ಎಸ್. ಯಡಿಯೂರಪ್ಪ ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ಇಂದು ಸಂಜೆ ಅಮಿತ್ ಶಾ ಅವರು ದೆಹಲಿಗೆ ವಾಪಸ್ಸಾಗಲಿದ್ದು, ನಂತರ ಯಾವ ಸಚಿವರಿಗೆ ಯಾವ ಖಾತೆ ನೀಡಬೇಕು ಎಂಬುದು ತೀರ್ಮಾನವಾಗಲಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ ಯಡಿಯೂರಪ್ಪ ಕೆಲವು ಸಚಿವರ ಖಾತೆಗಳನ್ನು ಅದಲು-ಬದಲು ಮಾಡುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ.

ಇನ್ನು ನೂತನ ಸಚಿವರಿಗೆ ಯಾವ ಖಾತೆ? ಇಲ್ಲಿದೆ ನೋಡಿ ಸಂಭವನೀಯ ಪಟ್ಟಿ

ಎಂಟಿಬಿ ನಾಗರಾಜ್ -ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

ಎಸ್ ಅಂಗಾರ-ಕನ್ನಡ ಮತ್ತು ಸಂಸ್ಕೃತಿ

ಉಮೇಶ್ ಕತ್ತಿ -ಪ್ರವಾಸೋದ್ಯಮ

ಅರವಿಂದ್ ಲಿಂಬಾವಳಿ- ಬೆಂಗಳೂರು ಅಭಿವೃದ್ಧಿ

ಆರ್. ಶಂಕರ್-ಅಬಕಾರಿ

ಸಿ.ಪಿ. ಯೋಗೇಶ್ವರ್ -ಯುವಜನ ಮತ್ತು ಕ್ರೀಡೆ

ಮುರುಗೇಶ್ ನಿರಾಣಿ- ಇಂಧನ ಖಾತೆ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಯಡಿಯೂರಪ್ಪ ಇನ್ನೊಂದು ಬಾರಿ ಅಮಿತ್ ಷಾ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸೇರಿದಂತೆ ಮತ್ತಿತರ ಜೊತೆ ಚರ್ಚಿಸಿ ಸಂಜೆ ಬಳಿಕ ಯಾವುದೇ ಕ್ಷಣದಲ್ಲಿ ಖಾತೆಗಳನ್ನು ನೂತನ ಸಚಿವರಿಗೆ ಹಂಚಿಕೆ ಮಾಡಬಹುದು ಎನ್ನಲಾಗಿದೆ


Spread the love

About Laxminews 24x7

Check Also

ಹೈಕೋರ್ಟ್‌ನ ಎಸ್‌ಐಟಿ ಆದೇಶ ಪ್ರಶ್ನಿಸಿ ಸುಪ್ರೀಂನಲ್ಲಿ ಮೇಲ್ಮನವಿ ಸಲ್ಲಿಸಲು ಮುಂದಾದ ಸರ್ಕಾರ

Spread the loveಬೆಂಗಳೂರು: ಕೆಪಿಎಸ್‌ಸಿ (KPSC) ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ  ರಚಿಸಿ ಧಾರವಾಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ