Breaking News

ನಾನು ಮಾಡಿದ ತಪ್ಪೇನು: ಸಿಎಂಗೆ ಎಚ್. ನಾಗೇಶ್ ಪ್ರಶ್ನೆ? ರಾಜಿನಾಮೆ ನೀಡಲು ಒಪ್ಪಿಗೆ

Spread the love

ಬೆಂಗಳೂರು: ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ನಾನು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡುತ್ತಿದ್ದೇನೆ ಎಂದು ಅಬಕಾರಿ ಸಚಿವ ಎಚ್. ನಾಗೇಶ್ ಹೇಳಿದ್ದಾರೆ.

ವಿಧಾನ ಸೌಧದಲ್ಲಿ ಮಾತನಾಡಿದ ಅವರು, ರಾಜಿನಾಮೆಗೆ ಕಾರಣ ಹೇಳಿಲ್ಲ, ಆದರೆ ಸಚಿವ ಸ್ಥಾನಕ್ಕೆ ಸಮಾನಾಂತರವಾದ ಹುದ್ದೆ ನೀಡುತ್ತಾರಂತೆ, ಸಿಎಂ ಮಾತಿಗೆ ಬೆಲೆಕೊಟ್ಟು ನಾನು ರಾಜಿನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ. ರಾಜಿನಾಮೆ ಕೊಡುವಂತ ತಪ್ಪು ನಾನೇನು ಮಾಡಿಲ್ಲ, ನನ್ನ ವಿರುದ್ಧ ಯಾವುದೇ ದೂರುಗಳಿಲ್ಲ, ಹೀಗಿದ್ದರೂ ಜನರಲ್ ಆಗಿ ರಾಜಿನಾಮೆ ಕೊಡಲು ಹೇಳಿದ್ದಾರೆ.

ಸಮ್ಮಿಶ್ರ ಸರ್ಕಾರ ಪತನವಾಗಲು ನಾನೇ ಕಾರಣ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ನನ್ನದು ಪಾತ್ರವಿದೆ. ಇನ್ನೂ ಮೂರು ವರ್ಷ ನೀನು ಮಂತ್ರಿ ಆಗಿರ್ತಿಯಾ ಎಂದು ಸಿಎಂ ಹೇಳುತ್ತಿದ್ದರು, ಆದರೆ ಇದ್ದಕ್ಕಿದ್ದಂತೆ ರಾಜಿನಾಮೆ ಕೇಳಿದ್ದಾರೆ ಎದು ನಾಗೇಶ್ ಹೇಳಿದ್ದಾರೆ.

ಇಂದು ಬೆಳಗ್ಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜಿನಾಮೆ ನೀಡಲು ನಾಗೇಶ್ ನಿರಾಕರಿಸಿದ್ದರು ಎಂದು ಹೇಳಲಾಗಿದೆ, ರಾಜಿನಾಮೆ ಕೊಡಲು ನಾನು ಮಾಡಿರುವ ತಪ್ಪಾದರೂ ಏನು ಎಂದು ಮುಖ್ಯಮಂತ್ರಿಗಳ ಬಳಿ ನಾಗೇಶ್ ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ನಂತರ ಡಿಸಿಎಂ ಅಶ್ವತ್ಥ್ ನಾರಾಯಣ ಮತ್ತಿತರರ ಸಚಿವರು ನಾಗೇಶ್ ಮನವೊಲಿಸಿ ರಾಜಿನಾಮೆ ನೀಡುವಂತೆ ಮಾಡಿದ್ದಾರೆ ಎನ್ನಲಾಗಿದೆ.

ಇನ್ನೂ ನಾಗೇಶ್ ಅವರ ರಾಜಿನಾಮೆ ಪಡೆದಿರುವುದಕ್ಕೆ ಹಲವು ಸಚಿವರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ ಎಂದು ಹೇಳಲಾಗಿದೆ.


Spread the love

About Laxminews 24x7

Check Also

ಲಿಂಗಾಯತ ಸಂಘಟನೆ ವತಿಯಿಂದ ವಚನ ಸಂಗೀತ ಕಾರ್ಯಕ್ರಮ

Spread the love ಲಿಂಗಾಯತ ಸಂಘಟನೆ ವತಿಯಿಂದ ವಚನ ಸಂಗೀತ ಕಾರ್ಯಕ್ರಮ – ಭಾವನೆಗಳಿಗೆ ಜೀವ ತುಂಬುವ ಶಕ್ತಿ ಸಂಗೀತಕ್ಕಿದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ