Breaking News

ಮಹಾ’ ಸಚಿವನಿಂದ ಅತ್ಯಾಚಾರ; ಪೊಲೀಸರಿಗೆ ದೂರು ನೀಡಿದ ಗಾಯಕಿ!

Spread the love

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಸಚಿವ ಸಂಪುಟದಲ್ಲಿ ಕಂಪನ ಶುರುವಾಗಿದೆ.

ರಾಜ್ಯ ಸಚಿವ ಧನುಂಜಯ ಮುಂಡೆ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಗಾಯಕಿ ರೇಣು ಶರ್ಮಾ ಪೊಲೀಸರಿಗೆ ದೂರು ನೀಡಿದ್ದಾರೆ.

ಸಚಿವರು ತಮಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಪೊಲೀಸ್ ಆಯುಕ್ತ ಪರಂ ಭೀರ್ ಸಿಂಗ್ ಅವರಿಗೆ ಬರೆದಿರುವ ಪತ್ರದಲ್ಲಿ ದೂರಿದ್ದಾರೆ. ಸಚಿವ ಧನುಂಜಯ ಮುಂಡೆ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ. ಆದರೆ, ಈ ಹಿಂದೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗಾಯಕಿ ಆರೋಪಿಸಿದ್ದಾರೆ.

ಸಚಿವ ಧನುಂಜಯ ಮುಂಡೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ರೇಣು ಶರ್ಮಾ ಅವರು ಒಶಿವೊರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ತಿಂಗಳ 10 ರಂದು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ದೂರನ್ನು ಇನ್ನೂ ತೆಗೆದುಕೊಳ್ಳಲಾಗಿಲ್ಲ ಎಂದು ರೇಣು ಶರ್ಮಾ ಹೇಳಿದ್ದಾರೆ. ಆಕೆ ನೀಡಿರುವ ದೂರನ್ನು ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ ಎಂದು ಹೇಳಿರುವ ಗಾಯಕಿ, ತಮ್ಮ ಜೀವಕ್ಕೆ ಅಪಾಯವಿದ್ದು, ಈ ವಿಷಯದಲ್ಲಿ ಸಹಾಯ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಳಿಕೊಂಡಿದ್ದಾರೆ. ಮೋದಿಯವರ ಜೊತೆಗೆ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಫಡ್ನವೀಸ್ ಅವರಿಗೂ ಸಹಾಯ ಮಾಡುವಂತೆ ಕೋರಿದ್ದಾರೆ.

ರೇಣು ಶರ್ಮಾ ಟ್ವೀಟ್ ನಿಂದ ಉದ್ಧವ್ ಠಾಕ್ರೆ ಸಂಪುಟ ಬೆಚ್ಚಿಬಿದ್ದಿದೆ. ರಾಜ್ಯದಲ್ಲಿ ಮಹಿಳೆಯರನ್ನು ರಕ್ಷಿಸ ಬೇಕಾದ ಮಂತ್ರಿಗಳೇ ಮಹಿಳೆಯರಿಗೆ ಲೈಂಗಿಕ ಹಿಂಸೆ ನೀಡುತ್ತಿದ್ದಾರೆ ಎಂದು ಪ್ರತಿಪಕ್ಷಗಳು ದೂರಿವೆ.


Spread the love

About Laxminews 24x7

Check Also

ಈಜಲು ಹಳ್ಳಕ್ಕೆ ಇಳಿದ ಸಹೋದರರಿಬ್ಬರು ನೀರುಪಾಲು – ಪೋಷಕರ ಆಕ್ರಂದನ

Spread the love ‎ಬೆಳಗಾವಿ: ಈಜಲು  ಹಳ್ಳಕ್ಕೆ ಇಳಿದಿದ್ದ ಅಣ್ಣ- ತಮ್ಮ ಇಬ್ಬರೂ ನೀರುಪಾಲಾದ ಘಟನೆ ಮೂಡಲಗಿ  ತಾಲೂಕಿನ ಧರ್ಮಟ್ಟಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ