Breaking News

ಅತ್ತಿಗೆ-ಮೈದುನರ ನಡುವೆ ಅಕ್ರಮ ಸಂಬಂಧ; ರೋಸಿ ಹೋದ ಗಂಡನಿಂದ ಡಬ್ಬಲ್​ ಮರ್ಡರ್​

Spread the love

ವಿಜಯಪುರ, (ಜ. 06) ಇದು ನಾಲ್ಕಾರು ವರ್ಷದ ರೋಷ ಜ್ವಾಲಾಗ್ನಿಯಾಗಿ ಸ್ಪೋಟಗೊಂಡ ಕೊಲೆಯಲ್ಲಿ ಅಂತ್ಯವಾದ ಕಥೆ ಇದು.  ಹಿರಿಯರು ಕರೆದು ಬುದ್ದಿ ಹೇಳಿದರೂ ಸುಧಾರಿಸದ ಇಬ್ಬರು ರಾತ್ರೋ ರಾತ್ರಿ ಹೆಣವಾಗಿ ಹೋಗಿದ್ದಾರೆ.  ಇಲ್ಲಿ ಸಂಬಂಧಕ್ಕಿಂತ ಆಸೆಗಳೇ ಮುಖ್ಯವಾದ ಕಾರಣ ಇಬ್ಬರೂ ಹೆಣವಾಗಿದ್ದಾರೆ. ಹೀಗೆ ಭೀಕರವಾಗಿ ಹೊಲದಲ್ಲಿ ಹೆಣವಾಗಿ ಬಿದ್ದವರು ಅಕ್ಕಪಕ್ಕದ ಬಿದ್ದವರು ಅಕ್ಕಪಕ್ಕದ ತೋಟದ ಮನೆಯವರು.  ಮೇಲಾಗಿ ವರಸೆಯಲ್ಲಿ ಅತ್ತಿಗೆ-ಮೈದುನ.  ಮಾಡಬಾರದ ಕೆಲಸ ಮಾಡಿ ಹೀಗೆ ಹೊಲದಲ್ಲಿ ಹೆಣವಾಗಿ ಬಿದ್ದಿದ್ದಾರೆ.  ಈ ಘಟನೆ ನಡೆದಿದ್ದು ಜಿಲ್ಲೆಯ‌ ಇಂಡಿ‌ ತಾಲೂಕಿನ ಬಂಥನಾಳ ಗ್ರಾಮದಲ್ಲಿ. ಇಲ್ಲಿನ ಚಟ್ಟರಕಿ ರಸ್ತೆಯಲ್ಲಿ ಆಲಮೇಲ ಕುಟುಂಬಸ್ಥರ ತೋಟದ ಮನೆಗಳಿವೆ.  ಲಕ್ಷ್ಮಣ ಶಂಕ್ರೆಪ್ಪ ಆಲಮೇಲ ಮತ್ತು ರುದ್ರಪ್ಪ ಚನ್ನಬಸಪ್ಪ ಆಲಮೇಲ ವರಸೆಯಲ್ಲಿ ಒಂದೇ ಮನೆತನದ ಸಹೋದರರು.  ಆದರೆ, 40 ವರ್ಷದ ಲಕ್ಷ್ಮಣ ಶಂಕ್ರೆಪ್ಪ ಆಲಮೇಲ ನಿನ್ನೆ ರಾತ್ರಿ ಸುಮಾರು 11.30ರ ಸುಮಾರಿಗೆ ತನ್ನ ಚಿಕ್ಕಪ್ಪನ ಮಗ 34 ರುದ್ರಪ್ಪ ಚನ್ನಬಸಪ್ಪ ಆಲಮೇಲ ಮತ್ತು ತನ್ನ ಸ್ವಂತ ಪತ್ನಿ ಯನ್ನು ಕಬ್ಬು ಕತ್ತರಿಸಲು ಬಳಸುವ ಕೊಯ್ತಾ ಬಳಸಿ ಕೊಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾನೆ. 

ಅತ್ತಿಗೆ-ಮೈದುನರ ನಡುವೆ ಅಕ್ರಮ ಸಂಬಂಧ; ರೋಸಿ ಹೋದ ಗಂಡನಿಂದ ಡಬ್ಬಲ್​ ಮರ್ಡರ್​
ನಂತರ ಬಂಥನಾಳ ಊರಿನ ಗೌಡರಾದ ಬಿ. ಡಿ. ಪಾಟೀಲ ಅವರಿಗೆ ರಾತ್ರಿ 12.45ಕ್ಕೆ ದೂರವಾಣಿ ಕರೆ ಮಾಡಿ ಇಬ್ಬರನ್ನು ತೆಗೆದಿದ್ದೇನೆ ಗೌಡ್ರೆ ಎಂದು ಹೇಳಿದ್ದಾನೆ.  ಏನು ಮಾಡಿದ್ದೀಯಾ ಎಂದು ಪ್ರಶ್ನಿಸಿದಾಗ ತನ್ನ ಹೆಂಡತಿ ಮತ್ತು ಆಕೆಯ ಜೊತೆಯಲ್ಲಿದ್ದ ರುದ್ರಪ್ಪ ಚನ್ನಬಸಪ್ಪ ಆಲಮೇಲ ನನ್ನು ಕೊಂದಿರುವುದಾಗಿ ತಿಳಿಸಿದ್ದಾನೆ.  ಆಗ ಗೌಡರು ಮೊಬೈಲ್ ಕರೆ ಕಟ್ ಮಾಡಿದ್ದಾರೆ.  ನಂತರ ಫೋನ್ ಮಾಡಲು ಅವರ ಮೊಬೈಲ್ ನಲ್ಲಿ ಕರೆನ್ಸಿ ಇರಲಿಲ್ಲ.  ಆಗ ಗುರು ಹತ್ತಳ್ಳಿ ಗೌಡರಿಗೆ ಕರೆ ಮಾಡಿ ಗೌಡರೆ ಲಕ್ಷ್ಮಣ ಶಂಕ್ರೆಪ್ಪ ಆಲಮೇಲ ಕರೆ ಮಾಡಿ ಕೊಲೆ ಮಾಡಿರುವುದಾಗಿ ಹೇಳಿದ್ದಾನೆ.  ಏನು ಮಾಡುವುದು ಎಂದು ಎಂದು ಕೇಳಿದ್ದಾರೆ.  ಆಗ, ಊರ ಗೌಡರು ನೀನೇ ಜನರಿಗೆ ಹೇಳು ಎಂದು ಹೇಳಿದರು


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ