Breaking News

ಮಲಗಿದ್ದ ಪತಿಯ ಕತ್ತು ಹಿಸುಕಿ ಕೊಂದು ಮೂರು ಮಕ್ಕಳನ್ನ ಬಾವಿಗೆ ತಳ್ಳಿ ಮಹಿಳೆ ಆತ್ಮಹತ್ಯೆಗೆ ಯತ್ನ

Spread the love

ರಾಯ್ಪುರ: ಮಲಗಿದ್ದ ಪತಿಯ ಕತ್ತು ಹಿಸುಕಿ ಕೊಂದು ಮೂರು ಮಕ್ಕಳನ್ನ ಬಾವಿಗೆ ತಳ್ಳಿ ಮಹಿಳೆ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಛತ್ತೀಸಗಢದ ಗೌರ್ಲಾ-ಪೆಂಡ್ರಾ-ಮರವಾಹಿಯಲ್ಲಿ ನಡೆದಿದೆ. ಮಕ್ಕಳು ಬಾವಿಗೆ ತಳ್ಳಿದ ನಂತರ ತಾನು ಜಿಗಿದಿದ್ದಾಳೆ. ಮಕ್ಕಳು ಮತ್ತು ಮಹಿಳೆಯ ಧ್ವನಿ ಕೇಳಿದ ಸ್ಥಳೀಯರು ನಾಲ್ವರನ್ನ ರಕ್ಷಿಸಿದ್ದಾರೆ.

ವಿದ್ಯಾ ಪೈಕರಾ (32) ಪತಿಯನ್ನ ಕೊಂದ ಮಹಿಳೆ. ಅಮಾಮಡಂಡಾ ನಿವಾಸಿಯಾಗಿರುವ ಮಹಿಳೆ ಪತಿ ಅನರೂಪ್ ಸಿಂಗ್ (35) ಮಲಗಿದ್ದ ವೇಳೆ ಬಟ್ಟೆಯಿಂದ ಆತನ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಇಂದು ಬೆಳಗಿನ ಜಾವ ಸುಮಾರು ನಾಲ್ಕು ಗಂಟೆಗೆ ಮಲಗಿದ್ದ ಮಗಳು ಇಶಾ (4), ಎರಡೂವರೆ ವರ್ಷದ ಕೃತಿ ಮತ್ತು ಒಂದು ವರ್ಷದ ತನುಳನ್ನ ಬಾವಿಗೆ ತಳ್ಳಿದ್ದಾಳೆ. ಕೊನೆಗೆ ತಾನು ಬಾವಿಗೆ ಜಿಗಿದಿದ್ದಾಳೆ.
: ಮಕ್ಕಳು ಮತ್ತು ಮಹಿಳೆಯನ್ನ ರಕ್ಷಿಸಿರುವ ಸ್ಥಳೀಯರು 108 ಅಂಬುಲೆನ್ಸ್ ಮೂಲಕ ನಾಲ್ವರನ್ನ ಆಸ್ಪತ್ರೆಗೆ ರವಾನಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿರುವ ಪೊಲೀಸರು ಮೃತದೇಹವನ್ನ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಮಹಿಳೆ ಮಾನಸಿಕ ಅಸ್ವಸ್ಥೆ ಎಂದು ತಿಳಿದು ಬಂದಿದೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ