ರಾಷ್ಟ್ರೀಯ ಏಕತಾ ದಿವಸ್ ನಿಮಿತ್ಯ ನಂದಗಡ ಪೋಲಿಸ್ ಠಾಣೆಯಿಂದ “ರನ್ ಫಾರ್ ಯೂನಿಟಿ ” ಓಟ
-ಖಾನಾಪೂರ ತಾಲೂಕಿನ ಐತಿಹಾಸಿಕ ನಂದಗಡ ಗ್ರಾಮದ ನಂದಗಡ ಪೋಲಿಸ್ ಠಾಣೆಯ ವತಿಯಿಂದ ರಾಷ್ಟ್ರೀಯ ಏಕತಾ ದಿನದ ಅಂಗವಾಗಿ “ರನ್ ಫಾರ್ ಯೂನಿಟಿ ಓಟ ಆಯೋಜಿಸಲಾಗಿತ್ತು ನಂದಗಡ ಪೋಲಿಸ್ ಠಾಣೆಯ ಮುಂಭಾಗದಿಂದ ಈ ರನ್ ಫಾರ್ ಯೂನಿಟಿ ಓಟ ಸಂಗೋಳ್ಳಿ ರಾಯಣ್ಣ ಸರ್ಕಲ್ ದಿಂದ ಸಂಗೋಳ್ಳಿ ರಾಯಣ್ಣನ ಸಮಾಧಿ ಸ್ಥಳ ಪುಣ್ಯ ಭೂಮಿ, ನಂದಗಡ ಗ್ರಾಮದಲ್ಲಿ ಸಂಚರಿಸಿ ಮತ್ತೆ ಪೋಲಿಸ್ ಠಾಣೆಯ ಆವರಣಕ್ಕೆ ಬಂದು ಮುಕ್ತಾಯಗೊಂಡಿತು
ತದನಂತರದಲ್ಲಿ ಪೋಲಿಸ್ ಠಾಣೆಯ ಆವರಣದಲ್ಲಿ ಸಸಿಗಳನ್ನು ನೆಡುವ ಮೂಲಕ ಭಾರತದ ಏಕತೆ ಮತ್ತು ಸಮಗ್ರತೆಗೆ ನೀಡುವ ಕೊಡುಗೆಗಳನ್ನು ಗೌರವಿಸಲು ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜಯಂತಿಯಂದು ರಾಷ್ಟ್ರೀಯ ಏಕತಾ ದಿವಸ್ ಆಚರಿಸಲಾಗುತ್ತದೆ ಈ ನಿಮಿತ್ಯ ಸ್ವಚ್ಛ ಪರಿಸರದ ಸಲುವಾಗಿ ಪರಿಸರವನ್ನು ಹಸಿರುಮನೆಯಗೊಳಿಸುವುದಕ್ಕೆ ಸಸಿಗಳನ್ನು ನೆಡುವ ಕಾರ್ಯಕ್ರಮ ನೇರವೇರಿಸಲಾಯಿತು
ಈ ಸಂದರ್ಭದಲ್ಲಿ ಎಎಸ್ಐ ಶ್ರೀನಿವಾಸ, ಎಎಸ್ಐ ಆರೇರ, ಹವಾಲ್ದಾರ್ ಗಳಾದ ಶಿವುಕುಮಾರ ತುರಮಂದಿ, ನಾಗರಾಜ್ ಬೆಳವಡಿ, ನಿಲಕಂಠ ಚಂದರಗಿ, ಶಿವು ಬಳ್ಳಾರಿ, ರಾಮಪ್ಪ ಖೇಮಾಳೆ,ಯು. ಬಿ. ಶಿಂತ್ರಿ, ಪಾಂಡು ತುರಮರಿ ಪೋಲೀಸರಾದ ಚಿದಾನಂದ ಮನ್ನಿಕೇರಿ,ವಿಜಯ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Laxmi News 24×7